ಗುರುವಾರ , ಮೇ 6, 2021
23 °C

ಭ್ರಷ್ಟಾಚಾರ ದೂರು: ರೈಲ್ವೆ ಗೆ ಅಗ್ರಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಭ್ರಷ್ಟಾಚಾರ ಮತ್ತು ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ರೈಲ್ವೆ ಇಲಾಖೆಯ ವಿರುದ್ಧ ಅತಿ ಹೆಚ್ಚು ದೂರುಗಳು ಬರುತ್ತವೆ ಎಂದು ಕೇಂದ್ರೀಯ ಜಾಗೃತ ಆಯೋಗ (ಸಿವಿಸಿ) ಹೇಳಿದೆ.2010ರಲ್ಲಿ ಸ್ವೀಕರಿಸಿದ ಒಟ್ಟು 25,359 ದೂರುಗಳ ಪೈಕಿ 8,330 ದೂರುಗಳು ರೈಲ್ವೆ ಇಲಾಖೆಗೆ ಸಂಬಂಧಿಸಿದವು. ಬ್ಯಾಂಕಿಂಗ್ ಕ್ಷೇತ್ರದಿಂದ 6,520, ದೂರಸಂಚಾರ ಇಲಾಖೆಯಿಂದ 1,572 ಮತ್ತು ಪೆಟ್ರೋಲಿಯಂ ಇಲಾಖೆ ವಿರುದ್ಧ 1,836 ದೂರುಗಳು ದಾಖಲಾಗಿವೆ ಎಂದು ಸಿವಿಸಿ ತಿಳಿಸಿದೆ.ಅಬಕಾರಿ ಮತ್ತು ಸುಂಕ ಇಲಾಖೆ ವಿರುದ್ಧ 1,317, ಉಕ್ಕು ಸಚಿವಾಲಯದ ಸಿಬ್ಬಂದಿ ವಿರುದ್ಧ 1,105 , ಕಲ್ಲಿದ್ದಲು ಸಚಿವಾಲಯದ ವಿರುದ್ಧ 1,106 ಮತ್ತು ದೆಹಲಿ ಸರ್ಕಾರಿ ನೌಕರರ ವಿರುದ್ಧ 693 ದೂರುಗಳು ಬಂದಿವೆ ಎಂದು ಸಿವಿಸಿ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.