ಮನೆಯಂಗಳದ ಔಷಧ ಖಜಾನೆ ಎಂದೇ ಗುರುತಿಸಲಾಗುವ ಲೋಳೆಸರ ಮನೆಮಂದಿಯ ನಿತ್ಯದ ಬಳಕೆಗೆ ಯೋಗ್ಯವಾದ ಸಸ್ಯ.

ತೋಟದ ಬೇಲಿಯ ದಂಡೆಯಲ್ಲಿ, ಮನೆಯಂಗಳದಲ್ಲಿ, ಹೂವಿನ ಕುಂಡದಲ್ಲಿ ಬೆಳೆಯಬಹುದಾದ ಈ ಅಕರ್ಷಕ ಸಸ್ಯದ ರಸ ಮುಖಕ್ಷೌರದ ಕ್ರೀಮಾಗಿ, ಸ್ನಾನಕ್ಕೆ ಶಾಂಪುವಾಗಿ ನಿತ್ಯ ಬಳಕೆ ಮಾಡಬಹುದಾಗಿದೆ. ಸೌಂದರ್ಯ ವರ್ಧಕಗಳಲ್ಲಿ ಬಳಕೆ ಮಾಡುವ ಲೋಳೆಸರವನ್ನು ವಾಣಿಜ್ಯ ಉದ್ದೇಶಕ್ಕೂ ಬೆಳೆಯಬಹುದಾಗಿದೆ.

ಆಲೋವೆರಾ ಲಿಲಿಯೇಸಿ ಜಾತಿಗೆ ಸೇರಿದ ಲೋಳೆಸರದ ಗಿಡ ಒರಟಾಗಿ ಕಾಣುವ ನಿಜವಾದ ಕಾಂಡವಿಲ್ಲದ ಸಸ್ಯ. ಭೂಮಿಯಿಂದಲೇ ಪೊದೆಯಾಗಿ ಹೊರಹೊಮ್ಮವ ಎಲೆಗಳು ದಪ್ಪವಾಗಿದ್ದು, ಅಂಚಿನಲ್ಲಿ ಮುಳ್ಳುಗಳಿರುತ್ತದೆ.

ಅಪರೂಪಕ್ಕೆ ಬಿಡುವ ಹೂ ಕಮಲದ ಹೂ ಹೋಲುತ್ತದೆ. ರಸಭರಿತ ಎಲೆಗಳ್ಲ್ಲಲಿ ದೊರೆಯುವ ಲೋಳೆಯಾದ ಪಾರದರ್ಶಕ ರಸ ಪಿತ್ತಶಾಮಕ, ಕ್ರಿಮಿನಾಶಕ, ಮೂತ್ರವರ್ಧಕ, ನೋವು ನಿವಾರಕ ಮತ್ತು ಮಲಬದ್ಧತೆ ನಿವಾರಣಾ ಔಷಧೀಯ ಗುಣ ಹೊಂದಿದೆ.

ಸಂಸ್ಕೃತದಲ್ಲಿ ಕುಮಾರಿ ಎಂದು ಕರೆಯಲ್ಪಡುವ ಲೋಳೆಸರ ಒಣಭೂಮಿಯಲ್ಲಿಯೂ ಬೆಳೆಯುತ್ತದೆ. ನೀರು ಬಸಿದುಹೋಗುವ ಜಾಗದಲ್ಲಿ ಸಸ್ಯನಾಟಿ ಮಾಡಬಹುದಾಗಿದ್ದು, ಸಸ್ಯಕ್ಕೆ ಯಾವುದೇ ರೋಗ ಬಾಧೆಯಿಲ್ಲ. ಬೇರು, ಕಾಂಡ ಗುಪ್ತಕಾಂಡದ ಕಂದುಗಳಿಂದ ಹೊಸ ಸಸಿಗಳನ್ನು ಪಡೆಯಬಹುದಾಗಿದೆ. ಮನೆಯೊಳಗೆ ಕುಂಡಗಳಲ್ಲಿ ಅಲಂಕಾರಿಕವಾಗಿಯೂ ಬೆಳೆಯಬಹುದು. ತಲೆಹೊಟ್ಟು ನಿವಾರಣೆಗೆ, ಗಾಯದ ಉಪಶಮನಕ್ಕೆ, ಸುಟ್ಟಗಾಯದ ಪ್ರಾಥಮಿಕ ಚಿಕಿತ್ಸೆಗೆ ಲೋಳೆಸರದ ರಸ ಪರಿಣಾಮಕಾರಿ.

ಬೇಲಿಬುಡದಲ್ಲಿ ಬೆಳೆಯುವ ಲೋಳೆಸರದ ಸಸ್ಯಕ್ಕೆ ಮಂಗಗಳು ಅಂಜುತ್ತವೆ. ಇದರ ರಸ ತಾಕಿದರೆ ಅವುಗಳಿಗೆ ಕಿರಿಕಿರಿ ಉಂಟಾಗುವುದರಿಂದ ರೈತರು ಮಂಗಗಳ ಹಾವಳಿ ನಿಯಂತ್ರಣಕ್ಕೆ ಲೋಳೆಸರ ಸಸ್ಯ ಬೆಳೆಸುವ ಪರಿಪಾಟ ಇದೆ.

ಲೋಳೆಸರ ಬೆಳೆಯುವ ವಿಧಾನ ಹಾಗೂ ಅವುಗಳ ಬಳಕೆ ಬಗ್ಗೆ ಮಾಹಿತಿಗೆ ಹರಂದೂರು ವಸಂತ್ಕುಮಾರ್ ಹರ್ಡೀಕರ್, ಮೊಬೈಲ್ 9449540555 ಸಂಪರ್ಕಿಸಿ. ಇವರ ಸಸ್ಯ ಕ್ಷೇತ್ರದಲ್ಲಿ ಲೊಳೆಸರದ ಸಸಿಗಳು ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.