ಗುರುವಾರ , ಮೇ 13, 2021
31 °C

ಮಂಗಳವಾರ, 18-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ್ಯಾಕ್ಮಿಲನ್‌ರ `ಉದಾಸೀನ ಭಾವನೆ': ವಿಲ್ಸನ್ ಖಂಡನೆ

ಲಂಡನ್, ಜೂನ್ 17 - ಪ್ರೋಫುಮೊ ಪ್ರಕರಣದ ಸಂಬಂಧದಲ್ಲಿ ಬ್ರಿಟಿಷ್ ಪ್ರಧಾನ ಮಂತ್ರಿ ಹೆರಾಲ್ಡ್ ಮ್ಯಾಕ್ಮಿಲನ್‌ರವರು `ರಾಷ್ಟ್ರೀಯ ಸುರಕ್ಷತೆಯೊಡನೆ ಜೂಜಾಡಿ ಬಿಟ್ಟಿದ್ದಾರೆ' ಎಂದು ಲೇಬರ್ ವಿರೋಧ ಪಕ್ಷದ ನಾಯಕ ಹೆರಾಲ್ಡ್ ವಿಲ್ಸನ್ ಇಂದು ಕಾಮನ್ಸ್ ಸಭೆಯಲ್ಲಿ ಆಪಾದಿಸಿದರು.1,700 ಮೂಟೆ ಸಿಮೆಂಟ್ ನಾಪತ್ತೆ

ಬೆಂಗಳೂರು, ಜೂನ್ 17 - ಶರಾವತಿ ಯೋಜನೆ ಪ್ರದೇಶದಲ್ಲಿ 1700 ಚೀಲ ಸಿಮೆಂಟ್ ಮಾಯವಾಗಿದೆಯೆಂದೂ ಆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ರಾಜ್ಯ ಪೊಲೀಸ್‌ನ ಉನ್ನತ ಮಟ್ಟದ ತನಿಖಾ ವ್ಯವಸ್ಥೆ ಇದುವರೆಗೆ ನಡೆಸಿರುವ ತನಿಖೆಯಿಂದ ತಿಳಿದು ಬಂದಿದೆ.ಗಣನೀಯ ಪ್ರಮಾಣದಷ್ಟು ಸಿಮೆಂಟನ್ನು ನದಿಗಳು ಮತ್ತು ಭಾವಿಗಳಲ್ಲಿ ಸುರಿಯಲಾಗಿದೆಯೆಂದು ಡಿ.ಐ.ಜಿ. ಶ್ರೀ ಆರ್. ಎ. ಮುಂಡ್‌ಕೂರ್ (ಸಿ.ಐ.ಡಿ. ಮತ್ತು ರೈಲ್ವೆ) ಅವರನೇತೃತ್ವದಲ್ಲಿ ನಡೆದ  ತನಿಖೆಯಿಂದ ತಿಳಿದು ಬರುತ್ತದೆ.ಆಕ್ರಮಣಕ್ಕಾಗಿಚೀಣದ ಸಿದ್ಧತೆ: ಭಾರತದ ಆಪಾದನೆ

ನವದೆಹಲಿ, ಜೂನ್ 17 - ಚೀಣ ಸರ್ಕಾರವು ಲಡಾಕ್‌ನಲ್ಲಿ ನಡೆಸಿದ ಆಕ್ರಮಣದಿಂದುಂಟಾದ ಲಾಭವನ್ನು ಭದ್ರಪಡಿಸಿಕೊಂಡು ಮತ್ತಷ್ಟು ಆಕ್ರಮಣ ನಡೆಸಲು ನೆಲೆಯೊಂದನ್ನು ನಿರ್ಮಿಸಿ ಕೊಳ್ಳುತ್ತಿದೆಯೆಂದು ಭಾರತ ಸರ್ಕಾರವು ಆಪಾದಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.