ಶುಕ್ರವಾರ, ಸೆಪ್ಟೆಂಬರ್ 20, 2019
28 °C

ಮಂಗಳವಾರ, 20-9-1961

Published:
Updated:

ದೇಶದ ಹಳ್ಳಿಗಳಿಗೆಲ್ಲ ಮೂಲ ಸೌಲಭ್ಯಗಳು

ನವದೆಹಲ್ಲಿ, ಸೆ. 19
- ತೃತೀಯ ಯೋಜನೆ ಅಂತ್ಯದ ವೇಳೆಗೆ ಭಾರತದ ಯಾವುದೇ ಗ್ರಾಮದಲ್ಲಿಯೂ ಕುಡಿಯುವ ನೀರಿನ ಕೊರತೆ ಇರದೆಂದೂ, ಪ್ರತಿಯೊಂದು ಗ್ರಾಮದಲ್ಲಿಯೂ ಒಂದು ಪ್ರಾಥಮಿಕ ಶಾಲೆ ಹಾಗೂ ಹೊರಗಿನಿಂದ ಅಲ್ಲಿಗೆ ಬರಲು ಒಂದು ರಸ್ತೆ ಇರುತ್ತದೆಂದೂ ಇಂದು ಇಲ್ಲಿ ಪ್ರಕಟವಾದ ಕಾಂಗ್ರೆಸ್ ಪಕ್ಷದ ಕರಡು ಚುನಾವಣಾ ಪ್ರಣಾಳಿಕೆ ಆಶ್ವಾಸನೆ ನೀಡಿದೆ.ಶರಾವತಿಯಲ್ಲಿ 62 ರಲ್ಲೇ ವಿದ್ಯುಚ್ಛಕ್ತಿಯ ಉತ್ಪಾದನೆ

ಬೆಂಗಳೂರು, ಸೆ. 19
-  ರಾಜ್ಯದಲ್ಲಿ ವಿದ್ಯುಚ್ಛಕ್ತಿಯ ಅಭಾವ ನಿವಾರಣೆಗಾಗಿ ಜನರು ಆತುರದಿಂದ ಎದುರು ನೋಡುತ್ತಿರುವ ಶರಾವತಿ ಯೋಜನೆಯಲ್ಲಿ 1962ರ ಡಿಸೆಂಬರ್ ಅಂತ್ಯದೊಳಗೆ ವಿದ್ಯುಚ್ಛಕ್ತಿ ಉತ್ಪಾದನೆಯನ್ನು ಆರಂಭಿಸಬೇಕೆಂಬ ರಾಜ್ಯ ಸರಕಾರದ ಉದ್ದೇಶದ ಈಡೇರಿಕೆ ಅಸಾಧ್ಯವಾಗದು ಎಂದು ಆಶಿಸಲಾಗಿದೆ.

Post Comments (+)