ಸೋಮವಾರ, ಮೇ 23, 2022
25 °C

ಮಂಗಳವಾರ, 23-7-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಪ್ರಾತಿನಿಧ್ಯ

ಬೆಂಗಳೂರು, ಜುಲೈ 22 - ಕೇಂದ್ರ ಮಂತ್ರಿಮಂಡಲದಲ್ಲಿ ಮೈಸೂರು ರಾಜ್ಯಕ್ಕೆ ಪ್ರಾತಿನಿಧ್ಯ ನೀಡಬೇಕಾದ ಅಗತ್ಯವನ್ನು ತಾವು ಪ್ರಧಾನಮಂತ್ರಿ ಶ್ರೀ ನೆಹರೂರವರ ಗಮನಕ್ಕೆ ತಂದಿರುವುದಾಗಿ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.ಮಧ್ಯಾಹ್ನ ದೆಹಲಿಯಿಂದ ಹಿಂತಿರುಗಿದ ಶ್ರೀ ನಿಜಲಿಂಗಪ್ಪನವರು ವರದಿಗಾರರೊಂದಿಗೆ ಮಾತನಾಡುತ್ತಾ ಕೇಂದ್ರದಲ್ಲಿ ಇಂದು ಸಚಿವ ಮಟ್ಟದಲ್ಲಾಗಲೀ, ಸ್ಟೇಟ್ ಸಚಿವ ಮಟ್ಟದಲ್ಲಾಗಲೀ ಉಪಸಚಿವ ಮಟ್ಟದಲ್ಲಾಗಲೀ ಮೈಸೂರು ರಾಜ್ಯಕ್ಕೆ ಪ್ರಾತಿನಿಧ್ಯವಿಲ್ಲದಿರುವುದು ದುರದೃಷ್ಟಕರವೆಂದೂ, ಈ ವಿಷಯವನ್ನು ತಾವು ನೆಹರುರವರ ಗಮನಕ್ಕೆ ತಂದು ಮೈಸೂರಿಗೆ ತಕ್ಕ ಪ್ರಾತಿನಿಧ್ಯವಿರಬೇಕೆಂದು ಒತ್ತಾಯ ಪಡಿಸಿರುವುದಾಗಿಯೂ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.