ಶುಕ್ರವಾರ, ಮೇ 20, 2022
19 °C

ಮಂಗಳೂರಿಗೆ ಬೇಕು ತರಬೇತಿ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದಲ್ಲಿ ಬ್ಯಾಡ್ಮಿಂಟನ್ ಆಟಗಾರರು ಹೆಸರು ಮಾಡಲು ಅವಕಾಶವಿದೆ. ಆದರೆ ಇದಕ್ಕಾಗಿ ಇಲ್ಲಿ ರಾಜ್ಯ ಬ್ಯಾಡ್ಮಿಂಟನ್ ತರಬೇತಿ (ಸ್ಟೇಟ್ ಕೋಚಿಂಗ್ ಸೆಂಟರ್) ಕೇಂದ್ರ ಆರಂಭವಾಗಬೇಕು. ಇದಕ್ಕಾಗಿ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಭಾರತ ಕ್ರೀಡಾ ಪ್ರಾಧಿಕಾರ ಕೈಜೋಡಿಸಬೇಕು...-ಇದು ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತು ದಾರರಲ್ಲಿ ಒಬ್ಬರಾದ ಮನೋಜ್ ಕುಮಾರ್ ಸಾಬತ್ ಅವರ ಅನಿಸಿಕೆ. ಇತ್ತೀಚೆಗೆ (ಜೂನ್ 9ರಿಂದ 15) ನಗರದ ಯು.ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ 14 ಮಂದಿ ಉದಯೋನ್ಮುಖ ಆಟಗಾರರಿಗೆ ತರಬೇತಿ ನೀಡಲು ಬಂದಿದ್ದ ಭುವನೇಶ್ವರ (ಒಡಿಶಾ) ಮೂಲದ  ಸಾಬತ್ `ಪ್ರಜಾವಾಣಿ~ ಜತೆ ಮಾತನಾಡಿದರು.ಮನೋಜ್ ಕುಮಾರ್ ರಾಷ್ಟ್ರೀಯ ಜೂನಿಯರ್ ತಂಡಗಳ ಸಿದ್ಧತಾ ಶಿಬಿರದ ಮೇಲ್ವಿಚಾರಣೆ ವಹಿಸಿದ್ದಾರೆ. ರಾಷ್ಟ್ರೀಯ `ಎ~ ಗ್ರೇಡ್ ಅಂಪೈರ್ ಕೂಡ ಆಗಿರುವ ಅವರು ಕಾಮನ್‌ವೆಲ್ತ್ ಗೇಮ್ಸ, ಲಖನೌದಲ್ಲಿ ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ, ನಾಲ್ಕನೇ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ತಾಂತ್ರಿಕ ಅಧಿಕಾರಿಯಾಗಿ ನಿರ್ವಹಣೆ ನೀಡಿದ್ದಾರೆ.ಭಾರತದಲ್ಲಿ ದೊಡ್ಡ ಅಕಾಡೆಮಿಗಳು ಈಗಾ ಗಲೇ ಒಂದು ಹಂತಕ್ಕೆ ಸಿದ್ಧ ಗೊಂಡ ಪ್ರತಿಭೆಗಳಿಗೆ ತರಬೇತಿ ನೀಡುತ್ತವೆಯೇ ಹೊರತು, ಹೊಸದಾಗಿ ಆಟಗಾರರನ್ನು ತಯಾರು ಮಾಡುತ್ತಿಲ್ಲ. ಬ್ಯಾಡ್ಮಿಂ ಟನ್‌ಗೆ ವಿಶಾಲ ತಳಹದಿ ಒದಗಿಸಬೇಕಾದರೆ, ಆಟಗಾ ರರನ್ನು ಸಾಕಷ್ಟು ಸಂಖ್ಯೆಯಲ್ಲಿ ತಯಾರಿ ಸಬೇಕು. ಬೇರೆಯವರು ಸಿದ್ಧಪಡಿಸಿ ಪ್ರವರ್ಧಮಾನಕ್ಕೆ ಬಂದ ಆಟಗಾರರನ್ನು ಅಕಾಡೆಮಿಗೆ ಕರೆಸಿ ತರಬೇತಿ ನೀಡುವುದರಿಂದ ಆಟಕ್ಕೆ ಹೆಚ್ಚಿನ ಉಪಯೋಗ ವಾಗದು. ಅಕಾಡೆಮಿಗಳಲ್ಲಿ ತರಬೇತಿ ತಳಮಟ್ಟ ದಿಂದಲೇ ಆರಂಭವಾದರೆ ಆಟದ ಹಿತದೃಷ್ಟಿಯಿಂದ ಒಳ್ಳೆಯದು~ ಎನ್ನುತ್ತಾರೆ ಅವರು.`ಮಾಜಿ ಆಟಗಾರರಿಗೆ ಆಟ ಚೆನ್ನಾಗಿ ಗೊತ್ತಿರುತ್ತದೆ. ಆದರೆ ತರಬೇತಿ ನೀಡಲು ತರಬೇತುದಾರರೇ ಇದ್ದರೆ ಒಳ್ಳೆಯದು. ಹೊಸ ಆಟಗಾರರನ್ನು ಸಾಕಷ್ಟು ಸಂಖ್ಯೆಯಲ್ಲಿ ಬೆಳಕಿಗೆ ತರುವಲ್ಲಿ ಅವರ ಪಾತ್ರ ಹೆಚ್ಚಿನ ದಾಗಿದೆ~ ಎನ್ನುವುದು ಮನೋಜ್ ಅವರ ವಿಶ್ಲೇಷಣೆ.ಬಾಂಧವ್ಯ ಅಗತ್ಯ: ಬ್ಯಾಡ್ಮಿಂಟನ್ ಸಂಸ್ಥೆ- ತರಬೇತುದಾರರು- ಆಟಗಾರರು- ಪೋಷಕರು ಈ ನಾಲ್ವರ ಮಧ್ಯೆ ನಿಕಟ  ಬಾಂಧವ್ಯ ಇರಬೇಕು. ತರಬೇತುದಾರನಿಗೆ ಬದ್ಧತೆ ಇರಬೇಕು. ಆಟಗಾರರೂ ಮನಸ್ಸುಗೊಟ್ಟು ತರಬೇತಿಗೆ ಹಾಜರಾಗಬೇಕು. ಪೋಷಕರ ಪ್ರೋತ್ಸಾಹವಿರಬೇಕು, ಜಿಲ್ಲಾ ಸಂಸ್ಥೆಯ ನೆರವು ಆಟಗಾರರಿಗೆ ದೊರೆಯಬೇಕು. ಆಗ ಫಲಿತಾಂಶ ಖಂಡಿತಕ್ಕೂ ಪೂರಕವಾಗಿರುತ್ತದೆ ಎನ್ನುವುದು ಅವರ ಆತ್ಮವಿಶ್ವಾಸದ ನುಡಿ.`ಬ್ಯಾಡ್ಮಿಂಟನ್ ಆಟಗಾರರಿಗೆ ಬಲ ಮುಖ್ಯ. ಪ್ರಬಲ ಹೊಡೆತಗಳಿಗೆ ಇದು ಅಗತ್ಯ. ಜತೆಗೆ ನಾನು ಉತ್ತಮ ಆಟಗಾರನಾಗಲೇ ಬೇಕೆಂಬ ಛಲವನ್ನು ಆತ ಹೊಂದಿರಬೇಕು~ ಎನ್ನುವುದು ಅವರ ಸಲಹೆ.ಮಂಜೂರಾಗಿದೆ: ನಂತೂರಿನ ಕರ್ನಾಟಕ ಪಾಲಿ ಟೆಕ್ನಿಕ್ ಹಿಂಭಾಗದಲ್ಲಿ ಜಿಲ್ಲಾಡಳಿತದಿಂದ ಬ್ಯಾಡ್ಮಿಂ ಟನ್ ಕ್ರೀಡಾಂಗಣಕ್ಕೆ ಜಮೀನು  ಮಂಜೂರಾಗಿದೆ ಎನ್ನುತ್ತಾರೆ ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಹಾಗೂ ಕ್ರೀಡಾ ಪ್ರೋತ್ಸಾಹಕರೂ ಆಗಿರುವ ಎ.ಸದಾನಂದ ಶೆಟ್ಟಿ.

 

`ಮಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಶಿಬಿರಗಳಿಗೆ ತರಬೇತುದಾರರನ್ನು  ಕರೆಸುತ್ತ ಬಂದಿ ್ದದೇವೆ. ಇದು ಮುಂದುವರಿಯುತ್ತದೆ~ ಎನ್ನುತ್ತಾರೆ ಅವರು. ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಕಾರ್ಯದರ್ಶಿ ಐವನ್ ಪತ್ರಾವೊ, ರಾಷ್ಟ್ರೀಯ ಅಂಪೈರ್ ಡಾ.ಸತೀಶ್ ಮಲ್ಯ ಅವರೂ ಮನೋಜ್ ಸಾಬತ್ ಅವರ ಜತೆಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.