ಬುಧವಾರ, ಜನವರಿ 29, 2020
27 °C

ಮಂಗಳೂರಿನಲ್ಲಿ 16ರಿಂದ ರಾಷ್ಟ್ರೀಯ ವಾಲಿಬಾಲ್ ಟೂರ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಂಗಳಾ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಇಲ್ಲಿನ ಉರ್ವಾಸ್ಟೋರ್ಸ್ ಬಳಿಯ ಮೈದಾನದಲ್ಲಿ ಫೆಬ್ರುವರಿ  16 ರಿಂದ 19ರವರೆಗೆ ಹೊನಲು ಬೆಳಕಿನ ರಾಷ್ಟ್ರೀಯ ವಾಲಿಬಾಲ್ ಟೂರ್ನಿ ನಡೆಯಲಿದೆ.ಈ ಪಂದ್ಯಾವಳಿಯಲ್ಲಿ ದೇಶದ ಪ್ರತಿಷ್ಠಿತ ಆರು ಪುರುಷರ ತಂಡಗಳು ಹಾಗೂ ಆರು ಮಹಿಳಾ ತಂಡಗಳು ಭಾಗವಹಿಸುತ್ತಿವೆ ಎಂದು ಮಂಗಳಾ   ಫ್ರೆಂಡ್ಸ್ ಸರ್ಕಲ್ ಪ್ರಧಾನ ಕಾರ್ಯದರ್ಶಿ ಫ್ರಾಂಕ್ಲಿನ್ ಮೊಂತೇರೊ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ವೈಯಕ್ತಿಕ ಬಹುಮಾನವಾಗಿ ಒಟ್ಟು ನಾಲ್ಕು ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಶಾಶ್ವತ ಫಲಕ ನೀಡಲಾಗುವುದು. ಪಂದ್ಯಾಟಕ್ಕಾಗಿ ಗ್ಯಾಲರಿಗಳನ್ನು ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು.ಭಾರತ ವಾಲಿಬಾಲ್ ಫೆಡರೇಷನ್, ಕರ್ನಾಟಕ ವಾಲಿಬಾಲ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಸಂಸ್ಥೆ ಜಂಟಿಯಾಗಿ ಈ ಟೂರ್ನಿ ಆಯೋಜಿಸಿವೆ.

ಪ್ರತಿಕ್ರಿಯಿಸಿ (+)