ಶುಕ್ರವಾರ, ಜನವರಿ 24, 2020
17 °C

ಮಂಡೇಲಾ ಸ್ಮರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡೇಲಾ ಸ್ಮರಣೆ

ಜೋಹಾನ್ಸ್‌ಬರ್ಗ್‌ (ಪಿಟಿಐ): ಕೊನೆ­­­ಯು­ಸಿ­ರೆಳೆದ ದಕ್ಷಿಣ ಆಫ್ರಿಕಾ ನಾಯಕ ನೆಲ್ಸನ್ ಮಂಡೇಲಾ   ಗೌರವಾರ್ಥ  ಮಂಗಳವಾರ  ನಡೆ­ಯ­ಲಿರುವ  ಸ್ಮರಣಾ ಕಾರ್ಯ­ಕ್ರಮ­ದಲ್ಲಿ ಭಾಗವಹಿಸಲು ರಾಷ್ಟ್ರ­ಪತಿ ಪ್ರಣವ್‌ ಮುಖರ್ಜಿ ಸೇರಿ­ದಂತೆ 70 ರಾಷ್ಟ್ರಗಳ ಗಣ್ಯರು, ರಾಜ­ಕೀ ಯ ಮುಖಂಡರು, ನಾಯ­ಕರು  ಆಗಮಿಸಿದ್ದಾರೆ.2010ರ ವಿಶ್ವಕಪ್‌ ಫುಟ್‌­ಬಾಲ್‌ ವೇಳೆ ಮಂಡೇಲಾ ಕೊನೆಯ ಬಾರಿಗೆ ಸಾರ್ವಜನಿಕ­ವಾಗಿ ಕಾಣಿಸಿ­ಕೊಂಡ ಎಫ್‌ಎನ್‌ಬಿ ಕ್ರೀಡಾಂಗಣ­ದಲ್ಲಿ ಕಾರ್ಯಕ್ರಮ ಆಯೋಜಿ­ಲಾಗಿದೆ.  ಗಣ್ಯರ ಭದ್ರತೆಗಾಗಿ 11 ಸಾವಿರ  ಸಿಬ್ಬಂದಿ­ ನಿಯೋಜಿಸ­ಲಾಗಿದೆ. ಮುಖರ್ಜಿ ನೇತೃತ್ವದ ಭಾರತದ ನಿಯೋಗದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ,   ನಾಯಕಿ ಸುಷ್ಮಾ ಸ್ವರಾಜ್‌, ಸಿಪಿಎಂ ನಾಯಕ ಸೀತಾರಾಂ ಯೆಚೂರಿ  ಮುಂತಾ­ದವರು ಇದ್ದಾರೆ.

ಪ್ರತಿಕ್ರಿಯಿಸಿ (+)