ಸೋಮವಾರ, ಮಾರ್ಚ್ 27, 2023
24 °C

ಮಂಡ್ಯ, ಬೆಂಗಳೂರು ಚಾಂಪಿಯನ್ಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ, ಬೆಂಗಳೂರು ಚಾಂಪಿಯನ್ಸ್‌

ಹೊಸಪೇಟೆ: ಮಂಡ್ಯ ಮತ್ತು ಬೆಂಗಳೂರು ತಂಡಗಳು ರಾಜ್ಯಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟದ ಅಂಗವಾಗಿ ಇಲ್ಲಿ ನಡೆದ ಎರಡು ದಿನಗಳ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದ ಚಾಂಪಿಯನ್‌ ಆಗಿ ಹೊರಹೊಮ್ಮಿದವು.ಬಾಲಕರ ವಿಭಾಗದ ಫೈನಲ್‌ನಲ್ಲಿ ಮಂಡ್ಯ ತಂಡ 38–30 ಅಂಕಗಳಿಂದ ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆ ತಂಡವನ್ನು ಮಣಿಸಿತು.ಬೆಳಗಾವಿ ತೃತೀಯ ಹಾಗೂ ಮೈಸೂರು ನಾಲ್ಕನೇ ಸ್ಥಾನ ಪಡೆದವು. ಬಾಲಕಿಯರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರಿನ ವಿದ್ಯಾನಗರ ಕ್ರೀಡಾಶಾಲೆ ತಂಡ 21–07 ಅಂಕಗಳ               ಅಂತರದಿಂದ ಮಂಡ್ಯ ಬಾಲಕಿಯರ ತಂಡವನ್ನು ಮಣಿಸಿತು.ಧಾರವಾಡ ತೃತೀಯ ಹಾಗೂ ಬೆಂಗಳೂರು ಗ್ರಾಮಾಂತರ ತಂಡ ನಾಲ್ಕನೇ ಸ್ಥಾನ ಪಡೆದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.