ಭಾನುವಾರ, ಏಪ್ರಿಲ್ 11, 2021
33 °C

ಮಕ್ಕಳಿಗೆ ಪಠ್ಯೇತರ ಜ್ಞಾನ ಮುಖ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: `ಮಕ್ಕಳು ಹೊರಗಿನ ಜನಗಳೊಟ್ಟಿಗೆ ಬೆರೆತು ಅವರಲ್ಲಿರುವ ಸಾಮಾನ್ಯ ಜ್ಞಾನ ವೃದ್ಧಿಯಾಗಿ ಸಮಾಜಕ್ಕೆ ಪೂರಕವಾದ ವ್ಯಕ್ತಿಯಾಗುತ್ತಾರೆ. ಪಠ್ಯ ಪುಸ್ತಕವನ್ನಷ್ಟೇ ಓದಿದರೆ ಮುಂದೆ ದುಡಿಯುವ ಯಂತ್ರವಾಗುತ್ತಾರೆಯೇ ಹೊರತು ಮಾನವೀಯ ಸಂಬಂಧಗಳು ಮಕ್ಕಳಲ್ಲಿ ಇಲ್ಲದಂತಾಗುತ್ತವೆ~ ಎಂದು ಅವರು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯಪಟ್ಟರು.ಮಾಗಡಿ ರಸ್ತೆಯ ತುಂಗಾನಗರದಲ್ಲಿ ಜನ್ಮ ಭೂಮಿ ರಕ್ಷಣಾ ಪಡೆ, ರಾಜಧಾನಿ ಗೆಳೆಯರ ಬಳಗ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ, ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಭಾರತಿ ವೆಂಕಟೇಶ್, ಯಶವಂತಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎಲ್.ಕೃಷ್ಣಪ್ಪ, ಬೆಂಗಳೂರು ನಗರ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮಿ, ಕಾಯದರ್ಶಿ ಎನ್.ಕೆ.ಮಂಜುಳಾ, ಬಿಜೆಪಿ ವಾರ್ಡ್ ಮಹಿಳಾ ಅಧ್ಯಕ್ಷರಾದ ಮಂಜುಳಾ, ಪುಟ್ಟಮ್ಮ, ಲತಾ, ರಘುನಾಥಯ್ಯ, ಗಂಗನರಸಯ್ಯ ಇತರರು ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.