ಬುಧವಾರ, ಮಾರ್ಚ್ 3, 2021
31 °C

ಮಕ್ಕಳೆಸೆದು ಹರಕೆ ತೀರಿಸಿದರು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳೆಸೆದು ಹರಕೆ ತೀರಿಸಿದರು..

ಮೂಡಲಗಿ: ಸಮೀಪದ ಕುಲಿಗೋಡ ಗ್ರಾಮದ ಬಲಭೀಮ ದೇವರ ಕಾರ್ತಿಕೋತ್ಸವದ ಅಂಗವಾಗಿ ಭಾನವಾರ ದೇವಸ್ಥಾನದ ಮೇಲಿಂದ ಮಕ್ಕಳನ್ನು ಎಸೆಯುವ ಹರಕೆ ನಡೆಯಿತು.ನಂಬಿದ ಭಕ್ತರನ್ನು ಕೈಬಿಡಲಾರ ಎನ್ನುವ ಪ್ರತೀತಿಯನ್ನು ಹೊಂದಿರುವ ಇಲ್ಲಿಯ ಬಲಭೀಮ ದೇವರಿಗೆ ದೇವಸ್ಥಾನದ ಮೇಲಿಂದ 5 ವರ್ಷದ ಒಳಗಿನ ಮಕ್ಕಳನ್ನು ಹಾರಿಸುವ ಹರಕೆಯನ್ನು ಹೊರುತ್ತಾರೆ.ಗಂಡು ಮಕ್ಕಳಿಗಾಗಿ ಪರಿತಪಿಸುವವರು ಗಂಡು ಮಗುವಿಗಾಗಿ, ಸಂತಾನ ಇಲ್ಲದವರು ಸಂತಾನ ಭಾಗ್ಯಕ್ಕಾಗಿ ಮನೆಯಲ್ಲಿ ಕಲ್ಯಾಣ ಕೆಲಸ, ಆಸ್ತಿ ಖರೀದಿ ಹೀಗೆ ವಿವಿಧ ಬೇಡಿಕೆಗಳ ಈಡೇರಿಕಿಗಾಗಿ ಮಕ್ಕಳನ್ನು ಹಾರಿಸುವ ಭಕ್ತಿಯ ಹರಕೆಯನ್ನು ಹೊರಲಾಗುತ್ತದೆ.25 ಅಡಿ ಎತ್ತರದ ದೇವಸ್ಥಾನದ ಮೇಲಿಂದ ಕೆಳಗೆ ಹಿಡಿದಿರುವ ಬಟ್ಟೆಯಲ್ಲಿ ಮಕ್ಕಳನ್ನು ಹಾರಿಸುವರು. ಹೀಗೆ ಹಾರಿಸುವ ಮಕ್ಕಳು ಚುರುಕು, ಸದೃಢ ಮತ್ತು ಬುದ್ಧಿವಂತರಾಗಿ ಬೆಳೆಯವರು ಎಂದು ನಂಬಿಕೆ ಇದೆ. ಹೀಗಾಗಿ ಕುಲಿಗೋಡ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಲವಾರ ಗ್ರಾಮಗಳಲ್ಲಿ ಹುಟ್ಟುವ ಮಕ್ಕಳನ್ನು ಜಾತಿ, ಧರ್ಮ ಹಾಗೂ ಮೇಲು ಕೀಳು ಎನ್ನದೆ ಭಾವೈಕ್ಯತೆಯ ನಲೆಯಲ್ಲಿ ಕಾರ್ತಿಕೋತ್ಸವ ಆಚರಿಸುವರು.  ಭಾನುವಾರ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಹರಕೆ ತೀರಿಸಿಕೊಂಡರು.ಕಾರ್ತಿಕೋತ್ಸವದ ಪ್ರಮುಖವಾದ ಪಲ್ಲಕ್ಕಿ ಉತ್ಸವವು ವಾದ್ಯ ಮೇಳಗಳೊಂದಿಗೆ ಜರುಗಿತು. ಮಹಾಮಂಗಳಾರತಿ ಮತ್ತು ಸಂಜೆ ಶ್ರೀರಾಮ ಜಪದೊಂದಿಗೆ ಕಾರ್ತಿಕೋತ್ಸವವು ಮಂಗಳವಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.