ಶನಿವಾರ, ಮೇ 8, 2021
26 °C

ಮಕ್ಕಳ ಪುಸ್ತಕದ ಹೊರೆ ತಗ್ಗಲಿ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಶಿಕ್ಷಣದಲ್ಲಿ ಸುಧಾರ ಣೆಯಾದಂತೆ ಮಕ್ಕಳು ಪುಸ್ತಕದ ಹೊರೆ ಹೊರುವ ಸ್ಥಿತಿ ನಿರ್ಮಾಣವಾಗಿದ್ದು, ಹೆಚ್ಚು ಹೊರೆ ಇಲ್ಲದ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.ಇಲ್ಲಿಗೆ ಸಮೀಪದ ಚಂದ್ರವನ ಆಶ್ರಮದಲ್ಲಿ ಭಾನುವಾರ ಮೈಸೂರಿನ ದಳವಾಡಿ ಡಿ.ಇಡಿ ಕಾಲೇಜಿನ ವಿದ್ಯಾ ರ್ಥಿಗಳಿಗೆ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಸಂಸ್ಕಾರ, ಸಂಸ್ಕೃತಿ ಆಧಾರಿತ ಶಿಕ್ಷಣ ಇಂದಿನ ಅಗತ್ಯವಾಗಿದೆ. ಪುಸ್ತಕದ ಓದಿನ ಜತೆಗೆ ಜೀವನ ಶಿಕ್ಷಣ ನೀಡಬೇಕು. ವಿದ್ಯಾರ್ಥಿಗಳಲ್ಲಿ ಆತ್ಮಾಭಿ ಮಾನ, ಆತ್ಮಸ್ಥೈರ್ಯ ಮೂಡಿಸುವ ಶಿಕ್ಷಣ ಕೊಡಬೇಕು.ಸರ್ಟಿಫಿಕೇಟ್‌ಗಾಗಿ ಓದಿದರೆ ಅದರಿಂದ ಪ್ರಯೋಜನವಿಲ್ಲ. ಉದ್ಯೋಗಕ್ಕಾಗಿ ಶಿಕ್ಷಣ ಪಡೆಯು ವುದೂ ಸರಿಯಲ್ಲ. ಮಾನವೀಯತೆ, ನಾಯಕತ್ವ ಗುಣ, ಶ್ರಮ ಜೀವನ ಕಲಿಸುವ ಶಿಕ್ಷಕ್ಕೆ ಒತ್ತುಕೊಡಬೇಕು ಎಂದರು.ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತ ಶ್ರೇಷ್ಠವಾದುದು. ಒಬ್ಬ ಶಿಕ್ಷಕ ದಾರಿ ತಪ್ಪಿದರೆ ಇಡೀ ಒಂದು ತಲೆಮಾರಿನ ವಿದ್ಯಾರ್ಥಿಗಳ ಭವಿಷ್ಯದ ಹಾಳಾಗು ತ್ತದೆ. ಶಿಕ್ಷಕ ನಿರಂತರ ಕಲಿಯುತ್ತಿ ರಬೇಕು. ವಿದ್ಯಾರ್ಥಿ ಸಮೂಹಕ್ಕೆ ಮಾದರಿಯಾಗಿರಬೇಕು. ಶಿಸ್ತು, ಸಂಯಮ, ನಾಯಕತ್ವಗುಣ, ಸಹಕಾರ ಮನೋಭಾವ ಮೂಡಿಸುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಹೇಳಿದರು.ದಳವಾಯಿ ವಿದ್ಯಾ ಸಂಸ್ಥೆ ಅಧ್ಯಕ್ಷ ಎಸ್.ಚಂದ್ರಶೇಖರ್, ಜೆ.ಸಿ. ನಾಗೇಂದ್ರ, ಪ್ರಾಂಶುಪಾಲೆ ವಿಮಲಾ, ಯು.ಎಸ್. ರಮೇಶ್, ಬಿ.ನಾಗರಾಜು, ಟಿ.ಪಿ. ಶಿವಕುಮಾರ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.