ಮಂಗಳವಾರ, ಮೇ 11, 2021
22 °C

ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಹಟ್ಟಿ: `ಮಕ್ಕಳ ಭವಿಷ್ಯ ಶಿಕ್ಷಕರ ಮೇಲಿದೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ~ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.ಸೋಮವಾರ ಸ್ಥಳೀಯ ಫಕೀರೇಶ್ವರ ಮಠದ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನೋತ್ಸವ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಶಾಸಕ ರಾಮಣ್ಣ ಲಮಾಣಿ ಉದ್ಘಾಟಿಸಿ ಮಾತನಾಡಿದರು.`ಶಿಕ್ಷಣದೊಂದಿಗೆ ಮಕ್ಕಳಿಗೆ ಮಾನವೀಯ ಗುಣಗಳ ಅಗತ್ಯವಿದೆ. ವಿದ್ಯಾರ್ಥಿಗಳ ಬುದ್ಧಿಮಟ್ಟಕ್ಕೆ ಪೂರಕವಾಗಿ ಸರ್ಕಾರ ಹೊಸ ಅಂಶಗಳನ್ನು ಪಠ್ಯಗಳಲ್ಲಿ ಅಳವಡಿಸಿದೆ. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗ ದರ್ಶನದಲ್ಲಿ ಅವುಗಳನ್ನು ಹಂತ ಹಂತವಾಗಿ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕು~ ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಂದಾನಪ್ಪ ವಡಗೇರಿ ಮಾತನಾಡಿ, `ಶಿಕ್ಷಕರ ದಿನಾ ಚರಣೆಯನ್ನು ಶಿಕ್ಷಕರು ಮಾಡದೇ ಬೇರೆ ಯವರು ಕಾರ್ಯಕ್ರಮವನ್ನು ಆಯೋ ಜಿಸಿ ಶಿಕ್ಷಕರನ್ನು ಕಾರ್ಯಕ್ರಮಕ್ಕೆ ಆಹ್ವಾ ನಿಸಿ ಅತಿಥಿಯನ್ನಾಗಿ ಮಾಡುತ್ತಿರುವ ದನ್ನು ಗಮನಿಸಿದರೆ ಶಿಕ್ಷಕರಿಗೆ ಎಂತಹ ಗೌರವವಿದೆ ಎಂಬುದು ಅರ್ಥವಾ ಗುತ್ತದೆ ಎಂದರು.     ಸಿದ್ಧರಾಮ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಬೆಳ್ಳಟ್ಟಿ ರಾಮಲಿಂಗೇಶ್ವರ ಮಠದ ಬಸವರಾಜ ಸ್ವಾಮೀಜಿ ನೇತೃತ್ವ ವಹಿಸಿದ್ದರು. ವಹಿಸಲಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವನಗೌಡ ಕಂಟಿಗೌಡರ ಅಧ್ಯಕ್ಷತೆ ವಹಿಸಿದ್ದರು.ಮಾಜಿ ಶಾಸಕ ಎಸ್.ಎನ್. ಪಾಟೀಲ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಚ್.ಡಿ. ಮಾಗಡಿ, ಉಪಾಧ್ಯಕ್ಷ ಯಲ್ಲಪ್ಪಗೌಡ್ರ ಅಣ್ಣಿಗೇರಿ, ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಹಳ್ಳೆಪ್ಪನವರ, ಸದಸ್ಯರಾದ ಕಮಲಮ್ಮ ಸಜ್ಜನರ, ನಿರ್ಮಲಾ ಬರದೂರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗಂಗವ್ವ ಈಶ್ವರಪ್ಪ ಲಮಾಣಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ನಿಂಬಣ್ಣ ಮಡಿವಾಳರ, ತಹಸೀಲ್ದಾರ್ ಆರ್.ಡಿ. ಉಪ್ಪಿನ, ತಾ.ಪಂ. ಸದಸ ತಿಮ್ಮರೆಡ್ಡಿ ಅಳವಂಡಿ, ಸಿಸಿಎನ್ ವಿದ್ಯಾಪ್ರಸಾರ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ, ವೈ.ಎಸ್. ಪಾಟೀಲ, ತಾ.ಪಂ. ಮಾಜಿ ಸದಸ್ಯ ಜಾನು ಲಮಾಣಿ ಮತ್ತಿತರರು ಹಾಜರಿದ್ದರು.ಆಕಾಶವಾಣಿ ಕಲಾವಿದ ಮತ್ತು ಮುಶಿಗೇರಿ ಪ್ರೌಡಶಾಲೆ ಶಿಕ್ಷಕ ಸಿ.ಎಂ. ವಡಗೇರಿ ಉಪನ್ಯಾಸ ನೀಡುವದರ ಜೊತಗೆ ಮಿಮಿಕ್ರಿ, ಜಾನಪದ ಗೀತೆಗಳನ್ನು ಹಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.