ಮಂಗಳವಾರ, ಮಾರ್ಚ್ 9, 2021
18 °C

ಮಕ್ಕಳ ಹಬ್ಬದಲ್ಲಿ ಪ್ರತಿಭೆಗಳ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಕ್ಕಳ ಹಬ್ಬದಲ್ಲಿ ಪ್ರತಿಭೆಗಳ ಅನಾವರಣ

ಕಾರವಾರ: ಮಕ್ಕಳ ಹಬ್ಬದ ಅಂಗವಾಗಿ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಕ್ಕಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಗಳ ಅನಾವರಣ ಮಾಡಿದರು.ನಗರದ ರವೀಂದ್ರ ಟ್ಯಾಗೋರ್‌ ಕಡಲತೀರದಲ್ಲಿ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಮರಳಿನಲ್ಲಿ ಚಿತ್ರಕಲೆ ರಚನೆ ಸೇರಿದಂತೆ ವಿವಿಧ ವಿವಿಧ ಸ್ಪರ್ಧೆಗಳು ನಡೆಯಿತು.ಗುರುಭವನದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಲೀಲಾಬಾಯಿ ಠಾಣೇಕರ್, ‘ಮಕ್ಕಳಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇಂತಹ ಹಬ್ಬಗಳು ಉತ್ತಮ ವೇದಿಕೆಯಾಗಿದೆ. ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸಲು ಅವಕಾಶಗಳನ್ನು ಕಲ್ಪಿಸುವುದು ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.ವಿಜೇತರ ವಿವರ ಇಂತಿದೆ: ಮರಳಿನಲ್ಲಿ ಚಿತ್ರಕಲೆ (ಪ್ರಾಥಮಿಕ ವಿಭಾಗ)– ವಿಪೇಶ್, ಸೇಂಟ್ ಮೈಕಲ್ ಶಾಲೆ ಕಾರವಾರ (ಪ್ರಥಮ), ಅಮಿಶಾ, ಸೇಂಟ್ ಮೈಕಲ್ ಶಾಲೆ ಕಾರವಾರ (ದ್ವಿತೀಯ) ಹಾಗೂ ರೂಪಿಣಿ, ಶಾಸಕರ ಮಾದರಿ ಶಾಲೆ ಕಾರವಾರ (ತೃತೀಯ).ಮರಳಿನಲ್ಲಿ ಚಿತ್ರಕಲೆ (ಪ್ರೌಢಶಾಲಾ ವಿಭಾಗ): ಮಾರ್ಷಲ್, ಸೇಂಟ್ ಜೋಸೆಫ್ ಶಾಲೆ (ಪ್ರಥಮ), ಸುಜನಾ ಸೇಂಟ್ ಮೈಕಲ್ ಶಾಲೆ, ಕಾರವಾರ (ದ್ವಿತೀಯ) ಹಾಗೂ ಸುಚಿತ್ರಾ ಮತ್ತು ಸುಪ್ರಿಯಾ ಸುಮತಿ ದಾಮ್ಲೆ ಶಾಲೆ (ತೃತೀಯ).ಹಗ್ಗಜಗ್ಗಾಟ (ಬಾಲಕರ ವಿಭಾಗ): ಬಾಲ ಮಂದಿರ ಶಾಲೆ ಕಾರವಾರ (ಪ್ರಥಮ), ಹಿಂದು ಹೈಸ್ಕೂಲ್ (ದ್ವಿತೀಯ).ಬಾಲಕಿಯರ ವಿಭಾಗ– ಬಾಲ ಮಂದಿರ ಶಾಲೆ ಕಾರವಾರ (ಪ್ರಥಮ), ಹಿಂದು ಹೈಸ್ಕೂಲ್ ಕಾರವಾರ (ದ್ವಿತೀಯ).ಸಂಗೀತ ಕುರ್ಚಿ (ಬಾಲಕರ ವಿಭಾಗ): ಲಿಖಿತ್ ಕುಮಾರ್ ಬಾಲಮಂದಿರ ಶಾಲೆ (ಪ್ರಥಮ), ನಿಕಿಲ್ ಆರ್. ಬಾಲಮಂದಿರ ಪ್ರೌಢಶಾಲೆ (ದ್ವಿತೀಯ) ಹಾಗೂ ಗಗನಜಿತ್ ಬೊಮಕರ್ ಹಿಂದು ಹೈಸ್ಕೂಲ್ (ತೃತೀಯ).ಬಾಲಕಿಯರ ವಿಭಾಗ– ಅನಿತಾ ಎಸ್. ಗೊಲ್ಲರ ಸರ್ಕಾರಿ ಪ್ರೌಢಶಾಲೆ, ಕಾರವಾರ (ಪ್ರಥಮ), ಮೊನಿಷ ಬಾಲಮಂದಿರ ಕಾರವಾರ (ದ್ವಿತೀಯ) ಹಾಗೂ ನಿಧಿ ಜಿ. ಬೊಮ್ಮನ, ಬಾಲಮಂದಿರ ಶಾಲೆ (ತೃತೀಯ).ತಾಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಳಿ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಫಾ. ಫರ್ನಾಂಡಿಸ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣಸಿದ್ದಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಪ್ರಭಾವತಿ ಕರ್ನಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.