ಲಿಂಗಸುಗೂರ: ಕಳೆದ ಆರೂವರೆ ದಶಕಗಳಲ್ಲಿ ಸಮಾಜದಲ್ಲಿನ ಅಂಧಕಾರ, ಮೌಢ್ಯತೆ, ಅಸ್ಪೃಶ್ಯತೆ, ಅಸಮಾತನೆ ತೊಲಗಿಸಲು ಸಾಕಷ್ಟು ಹೋರಾಟಗಳು ನಡೆದಿವೆ. ಸಮಾಜ ವಿರೋಧಿ ಕೃತ್ಯಗಳ ನಿಷೇಧಿಸಿ ಕೆಲ ಕಾನೂನುಗಳನ್ನು ತಂದಿದ್ದರು ಕೂಡ ಮಡೆಸ್ನಾನ ಎಂಬ ಮೌಢ್ಯ ಸಂಪ್ರದಾಯ ನಡೆದಿರುವುದು ದುರದೃಷ್ಟಕರ.

ಸರ್ಕಾರ ಮಡೆಸ್ನಾನ ನಿಷೇಧಿಸುವುದು ಸೇರಿದಂತೆ ಇತರೆ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ ಜಿ. ಮುನಿರಾಜಪ್ಪ ಅವರಿಗೆ ಅರ್ಪಿಸಲಾಯಿತು.

ಶನಿವಾರ ಸಿಪಿಐ (ಎಂ) ಸಾರಥ್ಯದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಹಸೀಲ್ದಾರ ಕಚೇರಿ ಮುಂದೆ ಧರಣಿ ನಡೆಸಿದರು. ಕೆಲ ರಂಗಗಳಲ್ಲಿ ದಲಿತರು, ಸವರ್ಣಿಯರು ಎಂದು ಪಂಕ್ತಿಭೇದ ಮಾಡುವುದಕ್ಕೆ ಕಡಿವಾಣ ಹಾಕಬೇಕು.
ದೇವದಾಸಿಯರ ಮಾಶಾಸನ ಹೆಚ್ಚಿಸಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಹೆಚ್ಚಿಸಬೇಕು. ಬಜೆಟ್ನಲ್ಲಿ ದಲಿತರಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಮನವಿಯಲ್ಲಿ ವಿವರಿಸಿದ್ದಾರೆ.

ಪ್ರತಿಭಟನೆ ನೇತೃತ್ವವನ್ನು ಸಿಪಿಐ (ಎಂ) ಕಾರ್ಯದರ್ಶಿ ಶಿವಾನಂದ ಹಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಸಂಚಾಲಕ ಹನುಮಂತ ಓಲೆಕಾರ, ಮುಖಂಡರಾದ ಶಾಂತಾಬಾಯಿ ನಾಗರಹಾಳ, ಎಸ್.ಸರಸ್ವತಿ, ಮೌನೇಶ ಲೆಕ್ಕಿಹಾಳ, ಪರಶುರಾಮ, ಹುಲಿಗೆಮ್ಮ, ದೌಲಸಾಬ, ರಂಗನಾಥ, ಛತ್ರಗೌಡ, ಮರಿಯಮ್ಮ, ಪ್ರಶಾಂತ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.