ಸೋಮವಾರ, ಜೂನ್ 14, 2021
27 °C

ಮತ್ತೆ ಒಂಬತ್ತು ಮೀನುಗಾರರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ(ಐಎಎನ್ಎಸ್): ಸಮುದ್ರದಲ್ಲಿ ಮೀನುಗಾರಿಕೆ ಹಕ್ಕಿನ ಕುರಿತು ಭಾರತ ಮತ್ತು ಶ್ರೀಲಂಕಾ ನಡುವೆ ಮಾತುಕತೆ ನಡೆಯಲು ಇನ್ನೊಂದು ವಾರವಿರುವಾಗ ಶ್ರೀಲಂಕಾದ ನೌಕಾಪಡೆ ಒಂಬತ್ತು ಭಾರತೀಯ ಮೀನುಗಾರರನ್ನು ಬಂಧಿಸಿದೆ.ಇದರಿಂದ ಕಳೆದ ಎರಡು ದಿನಗಳಲ್ಲಿ ಬಂಧನ­ಕ್ಕೊಳಗಾದ ಭಾರತೀಯ ಮೀನುಗಾರರ ಸಂಖ್ಯೆ 41ಕ್ಕೇರಿದೆ.  ಶ್ರೀಲಂಕಾ ನೌಕಾಪಡೆಯ ವಕ್ತಾರ ಕೋಸಲ ವರ್ಣ ಕುಲಸೂರಿಯ ಪ್ರಕಾರ, ಈ ಅಕ್ರಮ ಮೀನುಗಾರರು ಮತ್ತು ಬಲೆಗಾರರನ್ನು ಶ್ರೀಲಂಕಾದ ಉತ್ತರ ಸಮುದ್ರದಲ್ಲಿ ಬಂಧಿಸಿ   ಲಂಕಾ ಪೋಲೀಸರ ವಶಕ್ಕೆ ಒಪ್ಪಿಸಲಾಗಿದೆ.    ಮೀನುಗಾರಿಕೆ ಹಕ್ಕು ಕುರಿತು ಉಭಯ ದೇಶಗಳ ನಡುವೆ ಎರಡನೇ ಸುತ್ತಿನ  ಮಾತುಕತೆ ಮಾರ್ಚ್ 13 ರಂದು ಕೊಲಂಬೊದಲ್ಲಿ ನಡೆಯಲಿರುವ ಸಂದರ್ಭದಲ್ಲಿ ಈ ಪ್ರಕರಣ ವರದಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.