ಭಾನುವಾರ, ಏಪ್ರಿಲ್ 18, 2021
32 °C

ಮತ್ತೆ ಹಿಮ್ಮತ್‌ವಾಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಂಚರಂಗಿ

ಅಗ್ನೀಪಥ್ ಚಿತ್ರದ ನಂತರ 1980ರ ದಶಕದ ಆರಂಭದಲ್ಲಿ ಬಾಕ್ಸ್‌ಆಫೀಸಿನಲ್ಲಿ ಹಿಟ್ ಎನಿಸಿದ `ಹಿಮ್ಮತ್‌ವಾಲಾ~ ಚಿತ್ರ ಮತ್ತೆ ನಿರ್ಮಿಸಲಾಗುತ್ತಿದೆ.ಜಂಪಿಂಗ್ ಜ್ಯಾಕ್ ಎಂದೇ ಹೆಸರಾಗಿದ್ದ ಜಿತೇಂದ್ರ ಈ ಚಿತ್ರದ ಮುಖ್ಯಪಾತ್ರ ನಿರ್ವಹಿಸಿದ್ದರು. ಜಿತೇಂದ್ರ ಪಾತ್ರ ಸದ್ಯಕ್ಕೆ ಅಜಯ್ ದೇವಗನ್ ಪಾಲಾಗಿದೆ. ಶ್ರೀದೇವಿ ಅವರು ನಿರ್ವಹಿಸಿದ್ದ ಪಾತ್ರಕ್ಕೆ ಇನ್ನೂ ಶೋಧ ಜಾರಿಯಲ್ಲಿದೆ ಎಂದು ಚಿತ್ರತಂಡ ಹೇಳುತ್ತಲಿದೆ.ಸಾಜಿದ್ ಖಾನ್ ಈ ಚಿತ್ರ ನಿರ್ಮಿಸಲಿದ್ದು, ಅಜಯ್ ದೇವಗನ್ ತಾಯಿಯ ಪಾತ್ರವನ್ನು ಜರೀನಾ ವಹಾಬ್ ನಿರ್ವಹಿಸಲಿದ್ದಾರೆ. ಮೂಲ ಚಿತ್ರದಲ್ಲಿ ಈ ಪಾತ್ರವನ್ನು ವಹೀದಾ ರೆಹಮಾನ್ ನಿರ್ವಹಿಸಿದ್ದರು.ಅಗ್ನಿಪಥ್ ಚಿತ್ರದಲ್ಲಿಯೂ ಹೃತಿಕ್ ರೋಷನ್ ತಾಯಿಯ ಪಾತ್ರದಲ್ಲಿ ಜರೀನಾ ಗಮನ ಸೆಳೆದಿದ್ದರು.ವಿಶಾಖಪಟ್ಟಣಂ ಮೂಲದ ಜರೀನಾ ವಾಹಬ್‌ಗೆ 80ರ ದಶಕದಲ್ಲಿ ಮಾದಕ ನಟಿಯೆಂದೇ ಹೆಸರಾಗಿದ್ದರು. ಆದಿತ್ಯ ಪಂಚೋಲಿ ಜೊತೆಗೆ ಮದುವೆಯಾದ ನಂತರ ನಟನೆಯಿಂದ ದೂರ ಸರಿದಿದ್ದರು. ಆದರೆ 90ರ ದಶಕದ ನಂತರ ಮತ್ತೆ ಕಿರುತೆರೆ ಹಾಗೂ ಹಿರಿತೆರೆಗೆ ಬಂದರು. ಇವರಿಗೆ ಎರಡರಲ್ಲೂ ನಟಿಸುವುದು ಇಷ್ಟವಂತೆ.ಹಿರಿತೆರೆಯಲ್ಲಿ ನಟಿಸುವುದರಿಂದ ಒಂದು ಬಗೆಯ ಆತ್ಮವಿಶ್ವಾಸ ಹುಟ್ಟುತ್ತದೆ. ಅದು ಈ ಇಳಿವಯಸ್ಸಿನಲ್ಲಿ ಅತ್ಯಗತ್ಯ. ಕಿರುತೆರೆಯಲ್ಲಿ ನಟಿಸಲು ಹೆಚ್ಚಿನ ಸಮಯ ಮೀಸಲಿಡಬೇಕಾಗುತ್ತದೆ.

 

ಆದರೆ ಹೆಚ್ಚು ಜನರನ್ನು ತಲುಪಬಹುದು. ಅಲ್ಲಿ ಪಾತ್ರಗಳೇ ನಮ್ಮ ಗುರುತಾಗುತ್ತವೆ. ಸಿನೆಮಾ ಪಾತ್ರಗಳು ಹಾಗೆ ಬಹುದಿನಗಳ ವರೆಗೆ ನೆನಪಿನಲ್ಲಿ ಉಳಿಯುವುದಿಲ್ಲ. ಕೇವಲ ಕೆಲವೇ ಪಾತ್ರಗಳ ನೆನಪು ಮಾಸದೇ ಇರಬಲ್ಲದು ಎಂದೂ ಅವರು ವಿಶ್ಲೇಷಿಸುತ್ತಾರೆ.  

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.