ಮಂಗಳವಾರ, ಏಪ್ರಿಲ್ 20, 2021
26 °C

ಮತ್ತೊಂದು ಮಂಗಳ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): `ಕ್ಯೂರಿಯಾಸಿಟಿ~ ರೋವರ್ ಯೋಜನೆಯ ಯಶಸ್ಸಿನಿಂದ ಬೀಗುತ್ತಿರುವ ಅಮೆರಿಕ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ, 2016ರಲ್ಲಿ ಮತ್ತೊಂದು ಮಂಗಳ ಅಧ್ಯಯನ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಘೋಷಿಸಿದೆ. ಈ ಯೋಜನೆಯನ್ನು `ಇನ್‌ಸೈಟ್~ ಎಂದು ಕರೆಯಲಾಗಿದೆ.ಮಂಗಳನ ಒಡಲಾಳ ಯಾಕೆ ಭೂಮಿಯ ರೀತಿಯಲ್ಲಿ ಪದರ ಪದರವಾಗಿ ಇಲ್ಲ ಎಂಬುದನ್ನು ಈ ಯೋಜನೆಯಲ್ಲಿ ನಾಸಾ ಅಧ್ಯಯನ ನಡೆಸಲಿದೆ.ಭೂಮಿಯೊಂದಿಗೆ ಹೋಲಿಸಿಕೊಂಡು ಮಂಗಳ ಗ್ರಹದ ಗರ್ಭದ ಕುರಿತ ವಿವರವಾದ ಮಾಹಿತಿಗಳನ್ನು ಸಂಗ್ರಹಿಸುವುದರಿಂದ ಗ್ರಹಗಳು ಹೇಗೆ ರೂಪುಗೊಂಡವು ಎಂಬುದನ್ನು ಇನ್ನಷ್ಟು ವಿಸ್ತಾರವಾಗಿ ಅರಿಯಬಹುದು ಎಂದು ನಾಸಾ ಹೇಳಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.