ಭಾನುವಾರ, ಜೂಲೈ 12, 2020
22 °C

ಮತ್ತೊಂದು ರಿಯಾಕ್ಟರ್ ಸ್ಫೋಟ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮತ್ತೊಂದು ರಿಯಾಕ್ಟರ್ ಸ್ಫೋಟ ಭೀತಿ

ಫುಕುಶಿಮಾ/ಟೋಕಿಯೊ(ಪಿಟಿಐ): ಘೋರ ವಿಪತ್ತು ತಂದೊಡ್ಡಬಲ್ಲ ಪರಮಾಣು ಇಂಧನ ಸರಳುಗಳ ಕರಗುವಿಕೆ ತಪ್ಪಿಸಲು ಹರಸಾಹಸ ನಡೆಸುತ್ತಿರುವ ಜಪಾನ್, ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಭಾರಿ ಪ್ರಮಾಣದ ನೀರನ್ನು ಗುರುವಾರ ಫುಕುಶಿಮಾ ಅಣುಸ್ಥಾವರದ ರಿಯಾಕ್ಟರುಗಳ ಮೇಲೆ ಸುರಿಯಿತು.

ಒಂದೆಡೆ ಸ್ಫೋಟಗೊಂಡ ರಿಯಾಕ್ಟರುಗಳನ್ನು ತಂಪಾಗಿಸುವ ಈ ಯತ್ನ ನಡೆದಿರುವಾಗಲೇ ಮತ್ತೊಂದೆಡೆ 5ನೇ ರಿಯಾಕ್ಟರಿನ ತೊಟ್ಟಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿರುವ ಭೀತಿ ಮೂಡಿದೆ. ತಾಪಮಾನ ಏರಿಕೆಯಿಂದ ಇದೂ ಸ್ಫೋಟಗೊಂಡು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಪರಮಾಣು ಸುರಕ್ಷಾ ಏಜೆನ್ಸಿ ಆತಂಕ ವ್ಯಕ್ತಪಡಿಸಿದೆ. ಈ ಸ್ಥಾವರದಲ್ಲಿ ಒಟ್ಟು ಆರು ರಿಯಾಕ್ಟರುಗಳಿವೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.