ಶನಿವಾರ, ಫೆಬ್ರವರಿ 27, 2021
27 °C
ನಾಡಾ ವರದಿ ಪ್ರಕಟ, ಕುಸ್ತಿ ಸಂಸ್ಥೆ, ಐಒಸಿ ಒಪ್ಪಿಗೆ ದೊರೆತ ರಷ್ಟೇ ರಿಯೊ ಒಲಿಂಪಿಕ್ಸ್‌ ಪ್ರವೇಶ ಖಚಿತ

ಮದ್ದು ‘ಕುಸ್ತಿ’ಯಲ್ಲಿ ಗೆದ್ದ ನರಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದ್ದು ‘ಕುಸ್ತಿ’ಯಲ್ಲಿ ಗೆದ್ದ ನರಸಿಂಗ್‌

ನವದೆಹಲಿ (ಪಿಟಿಐ):  ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ನಡೆಸಿದ ‘ಬಿ’ ಮಾದರಿಯ ಪರೀಕ್ಷೆಯಲ್ಲಿ ಕುಸ್ತಿ ಪಟು ನರಸಿಂಗ್ ಪಂಚಮ್‌ ಯಾದವ್‌ ಅವರು ‘ಉತ್ತೀರ್ಣ’ವಾಗಿದ್ದಾರೆ.ಇದರಿಂದ ಅವರಿಗೆ ರಿಯೊ ಒಲಿಂ ಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಹೆಚ್ಚಿದೆ. ಭಾರತ ಕುಸ್ತಿ ಫೆಡರೇಷನ್‌ ನಾಡಾ ನೀಡಿರುವ ವರದಿಯನ್ನು  ವಿಶ್ವ ಕುಸ್ತಿ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್‌ ಕೌನ್ಸಿಲ್‌ಗೆ ಕಳುಹಿಸಲಿದೆ. ಅಲ್ಲಿಂದ ಅನುಮತಿ ಲಭಿಸಿದರಷ್ಟೇ  ಯಾದವ್‌ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಬಹುದು.ಕಳೆದ ವರ್ಷ ಲಾಸ್ ವೆಗಾಸ್‌ನಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನ 74 ಕೆ.ಜಿ. ಫ್ರೀಸ್ಟೈಲ್‌ ವಿಭಾಗದಲ್ಲಿ  ಯಾದವ್ ಅವರು ಕಂಚಿನ ಪದಕ ಜಯಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿ ದ್ದರು. ಆದರೆ ಅವರು ನಿಷೇಧಿತ  ಉದ್ದೀ ಪನಾ ಮದ್ದು ಸೇವಿಸಿದ್ದು ‘ಎ’ ಮಾದ ರಿಯ ಪರೀಕ್ಷೆಯಲ್ಲಿ ಸಾಬೀತಾಗಿದ್ದ ಕಾರಣ ಅವರು ಈ ಬಾರಿಯ      ಒಲಿಂಪಿಕ್ಸ್‌ನಿಂದ ಹೊರಗುಳಿಯುವ ಭೀತಿಗೆ ಒಳಗಾಗಿದ್ದರು.ಆದರೆ ನಾಡಾ ನಡೆಸಿರುವ ‘ಬಿ’ ಮಾದರಿಯ ಪರೀಕ್ಷಾ ವರದಿ ಸೋಮ ವಾರ ಪ್ರಕಟವಾಗಿದೆ. ‘ಯಾದವ್ ಮದ್ದು ಸೇವಿಸಿದ್ದು ಪರೀಕ್ಷೆಯಲ್ಲಿ ದೃಢಪಟ್ಟಿಲ್ಲ’ ಎಂದು ನಾಡಾ  ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಇದರಿಂದ ಯಾದವ್ ಅವರ ಅಭಿಮಾನಿಗಳು ಈಗ ಭಾರಿ ಸಂಭ್ರಮದಲ್ಲಿದ್ದಾರೆ.

‘ನರಸಿಂಗ್ ಯಾದವ್ ಅವರ ರಕ್ತ ಮತ್ತು ಮೂತ್ರದ ಮಾದರಿಯನ್ನು ಪಡೆದು ಪರೀಕ್ಷೆ ನಡೆಸಿದಾಗ ಅವರು ಮದ್ದು ಸೇವಿಸಿದ್ದು ಸಾಬೀತಾಗಿತ್ತು.ಆದರೆ ಇನ್ನೊಂದು ವರದಿಯಲ್ಲಿ ಇದು ದೃಢಪಟ್ಟಿಲ್ಲ’ ಎಂದು ಭಾರತ ಕ್ರೀಡಾ ಪ್ರಾಧಿಕಾರದ ಮಹಾ ನಿರ್ದೇಶಕ ನವೀನ್‌ ಅಗರವಾಲ್‌  ತಿಳಿಸಿದ್ದಾರೆ.

ನರಸಿಂಗ್ ನಿಷೇಧಿತ ಮದ್ದು ಸೇವನೆ ಮಾಡಿದ್ದು ಮೊದಲು ದೃಢಪಟ್ಟಿದ್ದರಿಂದ ಭಾರತ ಕುಸ್ತಿ ಫೆಡರೇಷನ್‌ ಇವರ ಬದಲು ರಾಣಾ ಅವರನ್ನು ಒಲಿಂಪಿಕ್ಸ್‌ಗೆ ಆಯ್ಕೆ ಮಾಡಿತ್ತು.   ಆದರೆ ಸೋಮವಾರ ಹೇಳಿಕೆ ನೀಡಿರುವ ಫೆಡರೇಷನ್‌ ‘ಆರೋಪ ಮುಕ್ತವಾಗಿರುವ ಯಾದವ್ ಅವರೇ ಒಲಿಂಪಿಕ್ಸ್‌ಗೆ ತೆರಳಲಿದ್ದಾರೆ’ ಎಂದು ತಿಳಿಸಿದ್ದಾರೆ.‘ಯಾದವ್ ಹೆಸರನ್ನು ಈಗಾಗಲೇ ವಿಶ್ವ ಕುಸ್ತಿ ಸಂಸ್ಥೆ ಮತ್ತು ಐಒಸಿಗೆ ಕಳುಹಿಸಲಾಗಿದೆ. 4 ಕೆ.ಜಿ. ವಿಭಾಗದಲ್ಲಿ  ನರಸಿಂಗ್ ಹೆಸರನ್ನು ಪರಿಗಣಿಸುವಂತೆ ಕೋರಿದ್ದೇವೆ’ ಎಂದು ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್ ಹೇಳಿದ್ದಾರೆ.‘ಸಂತಸ ತಂದ ಸುದ್ದಿ’: ಮುಂಬೈ (ಪಿಟಿಐ): ನರಸಿಂಗ್ ಆರೋಪ ಮುಕ್ತ ವಾಗಿದ್ದಕ್ಕೆ  ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದರ್‌ ಫಡಣವೀಸ್‌ ಸಂತೋಷ ವ್ಯಕ್ತಪಡಿಸಿದ್ದಾರೆ.‘ವ್ಹಾವ್‌... ನಾಡಾ ಪರೀಕ್ಷೆಯ ವರದಿ ತಿಳಿದು ತುಂಬಾ ಸಂತೋಷವಾಯಿತು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬನ್ನಿ’ ಎಂದು ಅವರು ಹಾರೈಸಿದ್ದಾರೆ.

ಯಾದವ್ ಉದ್ದೀಪನಾ ಮದ್ದು ಪ್ರಕರಣದಲ್ಲಿ ಸಿಕ್ಕಿಬಿದ್ದಾಗ ಫಡಣವೀಸ್ ಅವರು ಈ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದು ‘ಯಾದವ್‌ಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ಮನವಿ ಮಾಡಿದ್ದರು.

ಜೀವನದ ಕಠಿಣ ಕುಸ್ತಿಯಲ್ಲಿ ಗೆದ್ದಿದ್ದೇನೆ

‘ಎಲ್ಲಾ ಆರೋಪಗಳಿಂದ ಮುಕ್ತವಾಗಿದ್ದಕ್ಕೆ ಸಂತೋಷವಾಗಿದೆ. ಈಗ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಗುರಿ ನನ್ನದು. ಇದುವರೆಗೆ ಎದುರಿ ಸಿದ ಪ್ರತಿ ಕ್ಷಣವೂ ನನ್ನ ಜೀವನದ ದೊಡ್ಡ ಕುಸ್ತಿ ಸ್ಪರ್ಧೆಯಾಗಿತ್ತು...’ ನಾಡಾ ವರದಿಯಿಂದ ‘ಕ್ಲೀನ್‌ ಚಿಟ್’  ಪಡೆದಿರುವ ಕುಸ್ತಿ ಪಟು ನರಸಿಂಗ್ ಯಾದವ್ ಅವರ ಮಾತುಗಳಿವು.‘ಯಾದವ್‌ ಆರೋಪ ಮುಕ್ತ’ ಎಂದು ಭಾರತ ಕ್ರೀಡಾ ಪ್ರಾಧಿಕಾರ ಹೇಳಿದೆ. ಈ ವಿಷಯವನ್ನು ಭಾರತ ಕುಸ್ತಿ ಫೆಡರೇಷನ್‌ ಕೂಡ ಖಚಿತಪಡಿಸಿದೆ.

ವಿಷಯ ತಿಳಿಯುತ್ತಿದ್ದಂತೆ ನರಸಿಂಗ್ ಯಾದವ್ ಸಂಭ್ರಮಿಸಿ ದರು. ಅವರ ಸ್ನೇಹಿತರು ಎತ್ತಿ ಕೊಂಡು ಕುಣಿದಾಡಿದರು. ಕುಸ್ತಿ ಫೆಡರೇಷನ್‌ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್ ಸಿಹಿ ತಿನಿಸಿ ಖುಷಿಪಟ್ಟರು. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.‘ಇಷ್ಟು ದಿನ ಎದುರಿಸಿದ್ದು ಜೀವನದ ಅತ್ಯಂತ ಕಷ್ಟದ ದಿನಗಳು. ಈಗ ಇದೆಲ್ಲವನ್ನೂ ಮರೆತು ಪದಕ ಗೆಲ್ಲುವತ್ತ ಮಾತ್ರ ಗಮನ ಕೊಡು ತ್ತೇನೆ. ಕಳೆದ 15 ದಿನಗಳಿಂದ ಮಾನಸಿಕವಾಗಿ ಸಾಕಷ್ಟು ತೊಳ ಲಾಡಿದ್ದೇನೆ. ನನ್ನ ಕುಟುಂಬದವರೂ ನನಗಾಗಿ ತುಂಬಾ ನೋವನ್ನು ಸಹಿಸಿಕೊಂಡಿದ್ದಾರೆ. ಆದರೆ ನ್ಯಾಯ ಸಿಗುವ ಬಗ್ಗೆ ನನಗೆ ನಂಬಿಕೆಯಿತ್ತು. ನನ್ನ ನಂಬಿಕೆ ನಿಜವಾಗಿದೆ’ ಎಂದೂ ಯಾದವ್ ಸಂತೋಷ ಹಂಚಿಕೊಂಡಿದ್ದಾರೆ.‘ನ್ಯಾಯ ಸಿಗುವ ಬಗ್ಗೆ ಬಲವಾದ ನಂಬಿಕೆ ಇದ್ದ ಕಾರಣದಿಂದಲೇ ಒಂದೂ ದಿನ ಅಭ್ಯಾಸ ತಪ್ಪಿಸಿಲ್ಲ. ಕಠಿಣ ಅಭ್ಯಾಸ ನಡೆಸಿದ್ದೆ. ಈ ಘಟನೆಯ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ವಿಧಿಸ ಬೇಕು. ಕಷ್ಟದ ಸಮಯದಲ್ಲಿ ಜೊತೆ ಗಿದ್ದು ಬೆಂಬಲ ನೀಡಿದ ಮಾಧ್ಯಮಗಳು ಮತ್ತು ಫೆಡ ರೇಷನ್‌ಗೆ ಧನ್ಯವಾದಗಳು.ಮತ್ತೊಮ್ಮೆ ಪರೀಕ್ಷೆಗೆ ಒಳಗಾ ಗಬೇಕಿಲ್ಲ:  ‘ನರಸಿಂಗ್ ಯಾದವ್ ವಿರುದ್ಧ ಇಷ್ಟು ದಿನ ಇಲ್ಲಸಲ್ಲದ ಆರೋಪಗಳು ಕೇಳಿ ಬಂದವು. ಆದರೆ ನಾಡಾ ವರದಿಯಿಂದ ಅವರು ಆರೋಪ ಮುಕ್ತರಾಗಿದ್ದಾರೆ. ಇದ ರಿಂದ ಸಂತೋಷವಾಗಿದೆ.  ನಾಡಾವೇ ಸಮರ್ಪಕವಾಗಿ ಪರೀಕ್ಷೆ ನಡೆಸಿರುವ ಕಾರಣ ವಿಶ್ವ ಉದ್ದೀಪನಾ ಮದ್ದು ತಡೆಘಟಕ ಮತ್ತೊಮ್ಮೆ ಯಾದವ್ ಅವರನ್ನು ಪರೀಕ್ಷೆಗೆ ಒಳ ಪಡಿಸುವುದು ಅಗತ್ಯವಿಲ್ಲ. ಯಾದವ್ ಮುಂದೆ ಯಾವ ಪರೀಕ್ಷೆಗೂ ಒಳಗಾಗ ಬೇಕಿಲ್ಲ’ ಎಂದು ಭಾರತ ಒಲಿಂಪಿಕ್ಸ್‌ ಸಂಸ್ಥೆಯ ಉಪಾಧ್ಯಕ್ಷ  ಟಾರ್ಲೊಚನ್‌ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.