`ಮದ್ಯದ ಕುರಿತು ಪುನಾರಾಲೋಚನೆ ಅತ್ಯಗತ್ಯ~ (ಸಂಗತ ಅ.12) ಸಚ್ಚಿದಾನಂದ ಹೆಗಡೆ ಅವರ ಬರಹ ಪ್ರಸ್ತುತ ಪರಿಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಹೆಚ್ಚು ಆದಾಯ ತರುವ ಖಾತೆಯೆಂದು ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಪರವಾನಗಿ ನೀಡುತ್ತಿರುವುದು ನಿಲ್ಲಬೇಕು.

ಸಮಾಜದ ಹಿತವನ್ನೇ ಬಲಿ ಕೊಡುತ್ತಿರುವ ಇಂದಿನ ಸನ್ನಿವೇಶದಲ್ಲಿ ಮದ್ಯಪಾನ ನಿಷೇಧವಾಗ ಬೇಕೆಂದು ಎಲ್ಲ ಹೆಣ್ಣು ಮಕ್ಕಳ ಒಡಲ ದನಿಯು ಹೌದು. ಕಟ್ಟೆ ಮಳಲವಾಡಿ ಹಳ್ಳಿಯ ಘಟನೆಯು ಇದಕ್ಕೆ ಪುಷ್ಟಿನೀಡುತ್ತದೆ.ಮದ್ಯಪಾನ ನಿಯಂತ್ರಣ ದಿಂದ ಪೊಲೀಸ್ ನ್ಯಾಯಾಂಗ ವ್ಯವಸ್ಥೆಯ ಖರ್ಚನ್ನು ಕಡಿಮೆ ಮಾಡಬಹುದು ಎಂಬುದು ಹೊಸ ದೃಷ್ಟಿಕೋನವಾಗಿದೆ.

ವಾಸ್ತವವಾಗಿ ಅಂಕೆ ಸಂಖ್ಯೆಗಳನ್ನು ಗಮನಿಸಿ ದಾಗ ಮದ್ಯದಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭವಿಲ್ಲ. ಹೀಗಿರುವಾಗ ಮದ್ಯದ ಹಿಂದಿನ ಯೋಜನಾಭರಿತ ಚಿಂತನೆಗಳನ್ನು ಬಿಟ್ಟು ಈಗ ಪ್ರಸ್ತುತದಲ್ಲಿ ಯಾವ ರೀತಿಯ ಪರವಾನಿಗೆ ನೀಡಬೇಕು ಎಂಬುದನ್ನು ನಿರ್ಧರಿಸಬೇಕಾಗಿರು ವುದು ಇಂದಿನ ತುರ್ತು ಅಗತ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.