ಶಿಗ್ಗಾವಿ: ಗ್ರಾಮೀಣ ಪ್ರದೇಶದಲ್ಲಿನ ಕೃಷಿ ಕೌಶಲ್ಯತೆ ಹೆಚ್ಚಿಸಲು ಇಂತಹ ಗಾಡಿ ಓಡಿಸುವ ಸ್ಪರ್ಧೆಗಳು ಅಗತ್ಯವಾಗಿದ್ದು, ಇದರಿಂದ ಗ್ರಾಮೀಣ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಅರಳಲೆ ಹಿರೇಮಠದ ರೇವಣಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಬಂಕಾಪುರ ಪಟ್ಟಣದ ಕೊಟ್ಟಿಗೇರಿ ಗ್ರಾಮದೇವತೆ ಸೇವಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ನಡೆದ ಖಾಲಿ ಗಾಡಿ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮತನಾಡಿ, ವರ್ಷವಿಡೀ ದುಡಿದ ರೈತ ಸಮೂಹಕ್ಕೆ ವಿಶ್ರಾಂತಿ ಹಾಗೂ ಮನರಂಜನೆಗಾಗಿ ಇಂತಹ ಗ್ರಾಮೀಣ ಕ್ರೀಡಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದರಿಂದ ರೈತರಲ್ಲಿ ಹೊಸ ಚೈತನ್ಯ ಮೂಡುವ ಜೊತೆಗೆ ಬೇಸಿಗೆ ದಿನಗಳನ್ನು ಕಳೆಯಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ರಾಮಣ್ಣ ರಾಣೋಜಿ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಮೂಲಕ ಕ್ರೀಡೆಗಳನ್ನು ಉಳಿಸಿ ಬೆಳೆಸುವ ಇಂತಹ ಗಾಡಿ ಓಡಿಸುವ ಸ್ಪರ್ಧೆಗಳು ರೈತರಲ್ಲಿ ಉತ್ಸಾಹ ಮೂಡಿಸುವ ಕಾರ್ಯ ಮಾಡುತ್ತಿವೆ. ಅದಕ್ಕೆ ಹಿರಿಯ ನಾಗರೀಕರ ಪ್ರೋತ್ಸಾಹ ನೀಡುತ್ತಿರುವದರಿಂದ ಯುವಕರು ಈ ಸ್ಪರ್ಧೆಗಳನ್ನು ಏರ್ಪಡಿಸಿರುವದು ಜನರಲ್ಲಿ ಹರ್ಷ ತಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಪಾರ ಮಂದಿ ಭಾಗವಹಿಸಿದ್ದು, ನೋಡುಗರನ್ನು ಮನಸೋರೆಗೊಂಡಿತು. ತಮ್ಮ ನೆಚ್ಚಿನ ಗಾಡಿ ಓಡಿಸುವವರಿಗೆ ಜೈಕಾರ ಹಾಕಿದರು.

ಸಂಘಟಿಕರಾದ ಗಂಗಾಧರ ಬಡ್ಡಿ, ವಿನೋಧ ಹಂಡೆ, ಬೀರಪ್ಪ ಸಣ್ಣತಮ್ಮನವರ, ಗಂಗಪ್ಪಾ ಕೋಣನತಂಬಿಗಿ, ರಾಜು ಬಡ್ಡಿ, ಪ್ರಕಾಶ ಹಾದಿಮನಿ, ಸಹದೇವಪ್ಪ ತಳವಾರ, ಪಿಎಸ್ಐ ಎಸ್.ದೇವಾನಂದ ಸೇರಿದಂತೆ ಗ್ರಾಮದೇವತೆ ಸೇವಾ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಫಲಿತಾಂಶ: ಕುಂದೂರು ಗ್ರಾಮದ ಕೊಟ್ರೇಪ್ಪ ವರದಿ (ಪ್ರಥಮ), ನೀರಲಗಿ ಗ್ರಾಮದ ಸಂಕ್ರಪ್ಪ ದೂಡ್ಡ ಮನಿ (ದ್ವಿತೀಯ), ಹೆಬ್ಬಾಳ ಗ್ರಾಮದ ಮೂಕ ಬಸವೇಶ್ವರ ಪ್ರಸನ್ನ(ತೃತೀಯ) ಬಹುಮಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.