ತಲೆಗೆ ಚಿಕ್ಕ ಪಟ್ಟಿಯ ರೀತಿ ಧರಿಸಬಹುದಾದ ‘ಹೆಡ್ ಬ್ಯಾಂಡ್’ ಎಂಬ ಸಾಧನ, ಮನುಷ್ಯನ ಯೋಚನೆಗಳನ್ನು ಗ್ರಹಿಸುವ ಮತ್ತು ಮೌಸ್ಗೆ ಪರ್ಯಾಯವಾಗಿ ಬಳಕೆಗೆ ಶೀಘ್ರದಲ್ಲೇ ದೊರೆಯಲಿದೆ.ಇಂತಹುದೊಂದು ಅತ್ಯಾಧುನಿಕ ಗ್ಯಾಜೆಟ್ ಅಭಿವೃದ್ಧಿಯಲ್ಲಿ ನಿರತವಾಗಿದೆ ಅಮೆರಿಕದ ತಂತ್ರಜ್ಞರಾದ ರಾಬರ್ಟ್ ಜಾಕೋಬ್ ಮತ್ತು ಸರ್ಜಿಯೊ ಫ್ಯಾಂಟನಿ ತಂಡ.

ಈ ವಿದ್ಯುನ್ಮಾನ ‘ಹಣೆಪಟ್ಟಿ’ಯಲ್ಲಿ ಸಣ್ಣದಾದ ಕೆಂಪು ಬಲ್ಬ್ ಗಳ (ಎಲ್ಇಡಿ ರೀತಿಯ) ಸಾಲನ್ನು ಅಳವಡಿಸಲಾಗಿದೆ. ಈ ಬಲ್ಬ್ಗಳ ಮೂಲಕ ಕಡಿಮೆ ತೀವ್ರತೆಯ ತರಂಗಗಳನ್ನು ತಲೆಗೆ ಹರಿಯುವಂತೆ ಪ್ರೋಗ್ರಾಂ ಮಾಡಲಾಗಿದೆ.

ಈ ಹೆಡ್ಬ್ಯಾಂಡನ್ನು ಎರಡು ತಂತಿಗಳ ಮೂಲಕ ಕಂಪ್ಯೂಟರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ವ್ಯಕ್ತಿಯ ಮೆದುಳು ಬೆಳಕನ್ನು ಹೀರಿಕೊಳ್ಳುವ ಪ್ರಮಾಣದ ಆಧಾರದ ಮೇಲೆ ಆತನ ಮನಸ್ಥಿತಿ ಅರಿಯಬಹುದು ಎನ್ನುತ್ತದೆ ಈ ತಂತ್ರಜ್ಞರ ತಂಡ.

ಇನ್ನೊಂದೆಡೆ ಕಂಪ್ಯೂಟರ್ನಲ್ಲಿ ಕೆಲಸ ಮಾಡುವಾಗ ಪದೇ ಪದೇ ಬಲಗೈ ಮುಂಚಾಚಿ ತೋರುಬೆರಳು ಅದುಮಿ ಮೌಸ್ ಕ್ಲಿಕ್ ಅಥವಾ ಸ್ರಾಲಿಂಗ್ ಮಾಡುತ್ತಲೇ ಇರಬೇಕು. ಬಹಳಷ್ಟು ಮಂದಿಗೆ ಇದರಿಂದ ಮುಂಗೈ ಮತ್ತು ತೋಳಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಇಂತಹವರಿಗೆ ಈ ಹೆಡ್ಬ್ಯಾಂಡ್ ಸೂಕ್ತ ಪರಿಹಾರವನ್ನು ಒದಗಿಸಲಿದೆ. ಮೌಸ್ನ ಕೆಲಸವನ್ನೇ ಈ ಹೆಡ್ಬ್ಯಾಂಡ್ ಸುಲಭದಲ್ಲಿ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.