ಬುಧವಾರ, ಮೇ 12, 2021
26 °C

ಮನುಷ್ಯನ ಸನ್ನಡತೆಗೆ ಕಾನೂನು ಅವಶ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ಮನುಷ್ಯ ಸನ್ನಡತೆಯ ಮಾರ್ಗದಲ್ಲಿ ಸಾಗಲು ಕಾನೂನು ಅವಶ್ಯ~ ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಸ್ಟರ್ ಆರ್. ಕೆ. ಜಿ. ಎಂ.ಎಂ. ಮಹಾಸ್ವಾಮೀಜಿ ಅವರು ಹೇಳಿದರು.ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಕಾರಾಗೃಹ ಇಲಾಖೆಯಿಂದ ಸೋಮವಾರ ನಡೆದ `ವಿಚಾರಣಾಧೀನ ಬಂದಿಗಳಿಗೆ ಶಿಕ್ಷೆ ಪ್ರಮಾಣದಲ್ಲಿ ಚೌಕಾಸಿ ಮತ್ತು ಕಾನೂನು ಸಾಕ್ಷರತಾ ಕಾರ್ಯಕ್ರಮ~ ಉದ್ಘಾಟಿಸಿ ಅವರು ಮಾತನಾಡಿದರು.`ಅಪರಾಧ ಮಾಡಿದವರು ಕಾನೂನಿನಡಿ ದೋಷಾರೋಪಣಕ್ಕೆ ಒಳಗಾಗಿರುತ್ತಾರೆ. ಬಂಧಿತ ಆರೋಪಿ ನ್ಯಾಯಾಲಯದ ಮುಂದೆ ಬಂದಾಗ ಆಪಾದಿತ ಎಂದು ಕರೆಯುತ್ತಾರೆ. ಆದರೆ, ಆರೋಪಪಟ್ಟಿ ದಾಖಲಿಸುವ ಮೊದಲು ಅಪರಾಧದ ಬಗ್ಗೆ ಚೌಕಾಸಿ ಮಾಡಬಹುದು. ಅದನ್ನು ಸ್ವಯಂಪೇರಿತರಾಗಿ ಮಾಡಬೇಕಾಗುತ್ತದೆ. ಅದನ್ನು ನ್ಯಾಯಾಧೀಶರು ಪರಿಶೀಲಿಸುತ್ತಾರೆ~ ಎಂದರು.ಆದರೆ, 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಅನುಭವಿಸುತ್ತಿರುವವರು, ಜೀವಾವಧಿ, ಮರಣದಂಡನೆಗೆ ಗುರಿಯಾದವರು ಮತ್ತು 14ವರ್ಷದ ಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ಈ ನಿಯಮ ಅನ್ವಯಿಸುವುದಿಲ್ಲ. ವಿಚಾರಣಾಧೀನ ಬಂದಿಗಳಿಗೆ ಸಾಕಷ್ಟು ಅವಕಾಶಗಳಿವೆ. ಆದರೆ, ಅವುಗಳು ಸಂಪೂರ್ಣವಾಗಿ ಜಾರಿಯಾಗಿಲ್ಲ ಎಂದು ತಿಳಿಸಿದರು.ವಕೀಲ ಎ.ಡಿ. ಶ್ರೀಕಂಠೇರಾಜೇ ಅರಸ್ ಮಾತನಾಡಿ, ಶಿಕ್ಷೆ ಪ್ರಮಾಣದ ಚೌಕಾಸಿಯು 7 ವರ್ಷದೊಳಗೆ ಶಿಕ್ಷೆ ಅನುಭವಿಸುವಂತಹ ಅಪರಾಧಿಗಳಿಗೆ ಮಾತ್ರ ಅನ್ವಯಿಸುತ್ತದೆ. ಅಂತಹವರು ಅರ್ಜಿ ಸಲ್ಲಿಸಬೇಕು. ಆ ಅರ್ಜಿಯಲ್ಲಿ ಆರೋಪದ ಬಗ್ಗೆ ವರದಿ ಇರಬೇಕು. ಆನಂತರ ಅರ್ಜಿ ಶಪಥ ಕೊಟ್ಟಾಗ ನ್ಯಾಯಾಲಯ ದಿನಾಂಕವನ್ನು ನೀಡುತ್ತದೆ ಎಂದರು.ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನ್ಯಾಯಧೀಶ ಕೆ.ಎಚ್. ಮಲ್ಲಪ್ಪ, ಕೆ.ಎಸ್. ಗಂಗಣ್ಣನವರ್, ಕೆ.ಎಂ. ರಾಧಾಕೃಷ್ಣ, ಜಿಲ್ಲಾ ಕಾರಾಗೃಹದ ಸಹಾಯಕ ಅಧೀಕ್ಷಕ ಡಿ.ಎಸ್. ಹಟ್ಟಿ, ಚೂಡೇಗೌಡ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.