ಸೋಮವಾರ, ಜನವರಿ 20, 2020
19 °C

ಮನೆಯಲ್ಲಿ ಅಗ್ನಿ ಆಕಸ್ಮಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಪಟ್ಟಣದ ಕೋಟೆ ಬಡಾವಣೆಯ ಗುಡಿಹಟ್ಟಿ ಬೀದಿಯ ಉಮಾರಾವ್ ಎಂಬುವರ ಮನೆಯಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಹೆಂಚು, ಬಾಗಿಲು, ನೀರೆತ್ತುವ ಮೋಟಾರ್, ಬಟ್ಟೆ ಮತ್ತು ದಿನಸಿ ಪದಾರ್ಥಗಳು ಸುಟ್ಟು ಹೋಗಿವೆ.

 

ಮುಂಜಾನೆ ಮನೆಗೆ ನೀರು ಕಾಯಿಸುವ ಸಲುವಾಗಿ ಬಾಡಿಗೆದಾರ ಸತ್ಯಸಾಯಿ ದೇವಾಲಯದ ಅರ್ಚಕ ಆನಂದಮೂರ್ತಿ ಉರಿ ಹಾಕಿದ್ದ ವೇಳೆ ಕಿಡಿ ಹಾರಿ ಬೆಂಕಿ ಆವರಿಸಿದ್ದರಿಂದ ಅಡುಗೆಮನೆ, ಬಚ್ಚಲು ಮನೆಯ ಸಾವಿರಾರು ಹೆಂಚು, ನೀರೆತ್ತುವ ಮೋಟಾರ್, ಗ್ಯಾಸ್‌ಸ್ಟವ್ ಮತ್ತು ಬಟ್ಟೆ ಮುಂತಾದ ಸಾಮಗ್ರಿಗಳು ಸೇರಿ ಸುಮಾರು 80ಸಾವಿರ ರೂ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾದವು.ಮನೆಯವರ ಬೊಬ್ಬೆ ಕೇಳಿ ಅಕ್ಕಪಕ್ಕದ ನಿವಾಸಿಗಳು ಬೆಂಕಿ ನಂದಿಸಲು ಯತ್ನಿಸಿದರೂ ಹತೋಟಿಗೆ ಬಾರದ್ದರಿಂದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದು ಇತರ ಮನೆಗಳಿಗೆ ಬೆಂಕಿ ಹರಡುವುದನ್ನು ತಪ್ಪಿಸಿ ಭಾರೀ ಅನಾಹುತವಾಗುವುದನ್ನು ತಡೆದರು.   

ಪ್ರತಿಕ್ರಿಯಿಸಿ (+)