ಬುಧವಾರ, ಸೆಪ್ಟೆಂಬರ್ 23, 2020
26 °C

ಮರಳು ಸಾಗಾಣಿಕೆದಾರರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರಳು ಸಾಗಾಣಿಕೆದಾರರ ಪ್ರತಿಭಟನೆ

ಬೆಳಗಾವಿ: ರಾಮದುರ್ಗ ತಾಲ್ಲೂಕಿನ ವ್ಯಾಪ್ತಿಯ ಮಲಪ್ರಭಾ ನದಿ ಪಾತ್ರದಲ್ಲಿ ಉಸುಕು ಸಾಗಾಣಿಕೆದಾರರಿಗೆ ಹಾಗೂ ಗುತ್ತಿಗೆದಾರರಿಗೆ ಉಂಟಾಗುತ್ತಿರುವ ತೊಂದರೆಯನ್ನು ನಿವಾರಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಗಳ ಭೂಮಾಲೀಕರು ಹಾಗೂ ಕೂಲಿ ಕಾರ್ಮಿಕರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟಿಸಿದರು.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಮಲಪ್ರಭಾ ನದಿ ಪಾತ್ರದಲ್ಲಿ ಮೊದಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಉಸುಕು ಸಾಗಾಣಿಕೆಯ ಗುತ್ತಿಗೆಯನ್ನು ನೀಡಲಾ ಗುತ್ತಿತ್ತು. ಆದರೆ, ಇದೀಗ ಲೋಕೋಪ ಯೋಗಿ ಇಲಾಖೆಗೆ ಇದರ ಅಧಿಕಾರವನ್ನು ನೀಡಲಾಗಿದೆ. ಇದ ರಿಂದಾಗಿ ಇಲಾಖೆಯೇ ಉಸುಕು ಎತ್ತುವ ಕೆಲಸ ನಿರ್ವಹಿಸುತ್ತಿರು ವುದ ರಿಂದ ಗುತ್ತಿಗೆದಾರರು ಉಸುಕು ಎತ್ತುವ ಕೆಲಸ ಕಳೆದುಕೊಂಡಿದ್ದಾರೆ. ಇದರಿಂದಾಗಿ ಅವರ ಬಳಿ ಕೆಲಸ ಮಾಡುತ್ತಿದ್ದ ನಾವು ಕೆಲಸ ಇಲ್ಲದೇ ಬೀದಿ ಪಾಲಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಬರಗಾಲದಿಂದ  ಕೃಷಿ ಚಟುವ ಟಿಕೆಯೂ ನಡೆಯುತ್ತಿಲ್ಲ. ಉಸುಕು ಗುತ್ತಿಗೆದಾರರ ಬಳಿ ವರ್ಷವಿಡಿ ದಿನಗೂಲಿ ಮಾಡಿ ಬದುಕುತ್ತಿದ್ದೆವು. ಆದರೆ, ಇದೀಗ ಉಸುಕು ಎತ್ತುವ ಜವಾ ಬ್ದಾರಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಿರುವುದರಿಂದ ನಾವು ಕೆಲಸ ಕಳೆದುಕೊಂಡಿದ್ದೇವೆ. ಹೀಗಾಗಿ ಉಸುಕು ಗುತ್ತಿಗೆದಾರರಿಗೆ ಅನುಕೂಲ ವಾಗುವಂತೆ ನಿಯಮಾವಳಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.ರಾಮದುರ್ಗ ತಾಲ್ಲೂಕಿನ ಚಿಚಗಂಡಿ, ಗಟಕನೂರ, ಕೊಳಚಿ, ಅವರಾದಿ, ಚಿಕ್ಕತಡಸಿ, ಹಲಗತ್ತಿ, ಕಿಲಬನೂರ, ತೋರಗಲ್, ತುರನೂರ, ಕಾನಪೇಟೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.