ಗುರುವಾರ , ಏಪ್ರಿಲ್ 15, 2021
23 °C

ಮರಾಠಿಗರ ದಮನ: ಬಾಳ ಠಾಕ್ರೆ ಗುಡುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ):  ಬೆಳಗಾವಿಯ ವಿಶ್ವ ಕನ್ನಡ ಸಮ್ಮೇಳನ ಮತ್ತು ಅಲ್ಲಿನ ಮರಾಠಿ ಮಾತನಾಡುವ ಜನರ ದಮನದ ವರದಿಗಳ ಹಿನ್ನೆಲೆಯಲ್ಲಿ ಮಹಾರಾಷ್ಟ್ರದವರನ್ನು ಪ್ರಚೋದಿಸದಂತೆ ನೆರೆಯ ಕರ್ನಾಟಕ ರಾಜಕೀಯ ನಾಯಕರಿಗೆ ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.‘ಕರ್ನಾಟಕ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಮಾತ್ರಕ್ಕೆ ಬೆಳಗಾವಿಯ ಮೇಲೆ ಅದರ ಹಕ್ಕನ್ನು ಸಾಧಿಸಲಾಗದು’ ಎಂದು ಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಶನಿವಾರ ಬರೆದ ಸಂಪಾದಕೀಯದಲ್ಲಿ ಠಾಕ್ರೆ ಈ ಸವಾಲು ಹಾಕಿದ್ದಾರೆ.‘ಅಲ್ಲಿ ಪ್ರಜಾಪ್ರಭುತ್ವವಿದೆಯೇ ಅಥವಾ ಲಿಬಿಯಾ ನಿರಂಕುಶಧಿಪತಿ ಕರ್ನಲ್ ಗಡಾಫಿಯ ಆಡಳಿತವಿದೆಯೇ’ ಎಂದು ಪ್ರಶ್ನಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.