ಬೆಂಗಳೂರು: ಅರಣ್ಯೇತರ ಪ್ರದೇಶಗಳಲ್ಲಿ ಮರ ಬೆಳೆಸಲು ಗಮನ ನೀಡುತ್ತಿದ್ದು, ಕೃಷಿ ಅರಣ್ಯ ಅಭಿವೃದ್ಧಿ ಯೋಜನೆಯಡಿ ಮರ ಬೆಳೆಸುವ ರೈತರಿಗೆ ಮೂರು ವರ್ಷಗಳ ಕಾಲ ಪ್ರೋತ್ಸಾಹ ಧನ ನೀಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಒಟ್ಟು ಭೂಪ್ರದೇಶದಲ್ಲಿ ಶೇ 19ರಷ್ಟು ಮಾತ್ರ ಅರಣ್ಯ ಇದ್ದು, ಇದನ್ನು ಇನ್ನೂ ಹೆಚ್ಚಿಸುವ ಉದ್ದೇಶದಿಂದ ಅರಣ್ಯೇತರ ಪ್ರದೇಶದಲ್ಲೂ ಎಲ್ಲ ರೀತಿಯ ಗಿಡ-ಮರಗಳನ್ನು ಬೆಳೆಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ಸರ್ಕಾರದಿಂದ ಸಸಿ ಪಡೆಯುವ ರೈತ ಅದನ್ನು ಮೂರು ವರ್ಷಗಳ ಕಾಲ ಪೋಷಿಸಬೇಕು. ಇದಕ್ಕೆ ಸರ್ಕಾರ ಒಟ್ಟು 45 ರೂಪಾಯಿ ಪ್ರೋತ್ಸಾಹ ಧನ ನೀಡಲಿದೆ. ರೈತ ಕೇಳುವ ಸಸಿಯನ್ನು ಸರ್ಕಾರ ನೀಡಲಿದ್ದು, ಅದನ್ನು ರೈತ ತನ್ನ ಜಮೀನಿನಲ್ಲಿ ಬೆಳೆಯಬೇಕು. ಒಬ್ಬ ರೈತ ಎಷ್ಟು ಸಸಿಯನ್ನಾದರೂ ಬೆಳೆಯಬಹುದು. ಒಂದು ಹೆಕ್ಟೇರ್ ಪ್ರದೇಶದಲ್ಲಿ ಕನಿಷ್ಠ 400 ಸಸಿ ನೆಡಬಹುದಿದ್ದು, ಮೂರು ವರ್ಷಕ್ಕೆ 18 ಸಾವಿರ ರೂಪಾಯಿ ರೈತರಿಗೆ ಸರ್ಕಾರವೇ ನೀಡಲಿದೆ. ಮೊದಲ ವರ್ಷ ಐದು ರೂಪಾಯಿ, 2ನೇ ವರ್ಷ 10 ಮತ್ತು ಮೂರನೇ ವರ್ಷ 30 ರೂಪಾಯಿ ನೀಡಲಿದೆ. ಪ್ರತಿ ವರ್ಷವೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ನಂತರ ಈ ಹಣ ನೀಡಲಿದ್ದಾರೆ ಎಂದು ಅವರು ವಿವರಿಸಿದರು.

ಈ ಕಾರ್ಯಕ್ರಮವನ್ನು ಮೇ- ಜೂನ್ ತಿಂಗಳಲ್ಲಿ ರಾಜ್ಯದ ಎಲ್ಲೆಡೆ ಆರಂಭಿಸಲಾಗುವುದು. ಇದರ ಜಾರಿಗೆ ಕಂದಾಯ, ಕೃಷಿ, ನೀರಾವರಿ ಸೇರಿದಂತೆ ಇತರ ಇಲಾಖೆಗಳ ಸಹಕಾರ ಕೂಡ ಪಡೆಯಲಾಗುವುದು ಎಂದರು. ತೀರ್ಮಾನ ಹಿಂದಕ್ಕೆ: ವನಸ್ಪತಿ, ಆಯುರ್ವೇದ ಗಿಡ ಬೆಳೆಸಲು ಆದ್ಯತೆ ನೀಡುವ ಉದ್ದೇಶದಿಂದ ಅರಣ್ಯ ಇಲಾಖೆ ಭೂಮಿಯನ್ನು ಖಾಸಗಿಯವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಬೇಕೆನ್ನುವ ತೀರ್ಮಾನವನ್ನು ಕೈಬಿಟ್ಟಿದ್ದು, ಈ ಕೆಲಸವನ್ನು ಅರಣ್ಯ ಇಲಾಖೆಯೇ ಮಾಡಲಿದೆ ಎಂದು ಹೇಳಿದರು.

ಅರಣ್ಯ ಅಭಿವೃದ್ಧಿ ನಿಗಮದ ಬಳಿ ಇರುವ ಹೆಚ್ಚುವರಿ ಜಮೀನನ್ನು ಸರ್ಕಾರ ವಾಪಸ್ ಪಡೆದು ಅಲ್ಲಿ ಎಲ್ಲ ರೀತಿಯ ನೈಸರ್ಗಿಕ ಮರ-ಗಿಡಗಳನ್ನು ಬೆಳೆಯಲಾಗುವುದು. ಏಕಪ್ರಬೇಧದ ಮರ ಬೆಳೆಯುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದರು. ನೀಲಗಿರಿಗೆ ನಿರ್ಬಂಧ: ರಾಜ್ಯದಲ್ಲಿ ನೀಲಗಿರಿ ಮರ ಬೆಳೆಯಲು ಮಾರ್ಗಸೂಚಿ ಮತ್ತು ಕೆಲ ನಿರ್ಬಂಧನೆಗಳನ್ನು ವಿಧಿಸಿ ಇದೇ 19ರಂದು ಆದೇಶ ಹೊರಡಿಸಲಾಗಿದೆ. ಬಯಲು ಸೀಮೆಯಲ್ಲಿನ ಮಧ್ಯಮ ಫಲವತ್ತತೆ ಇರುವ ಪ್ರದೇಶ ಹಾಗೂ ಗಡಿನಾಡು ಪ್ರದೇಶದ ಕಡಿಮೆ ಫಲವತ್ತತೆ ಇರುವ ಬೆಟ್ಟ ಪ್ರದೇಶಗಳಲ್ಲಿ ಮಾತ್ರ ನೀಲಗಿರಿ ಬೆಳೆಯಲು ಅವಕಾಶ ನೀಡಲಾಗಿದೆ ಎಂದು ವಿಜಯಶಂಕರ್ ಹೇಳಿದರು.

ಕೈಗಾರಿಕೆಗಳ ಹೆಸರಿನಲ್ಲಿ ಹಿಂದೆ ನೀಲಗಿರಿ ಬೆಳೆಯಲು ಒತ್ತು ನೀಡಿದ್ದು, ಅದಕ್ಕೆ ಇನ್ನು ಮುಂದೆ ಅವಕಾಶ ಇಲ್ಲ. ಅರಣ್ಯ ಅಭಿವೃದ್ಧಿ ನಿಗಮಕ್ಕೆ ಸೇರಿದ 1.4 ಲಕ್ಷ ಎಕರೆ ಪ್ರದೇಶದ ಪೈಕಿ 1.25 ಲಕ್ಷ ಎಕರೆ ಪದೇಶದಲ್ಲಿ ನೀಲಗಿರಿ ಬೆಳೆದಿದ್ದು, ಅದನ್ನು ಐದು ವರ್ಷಗಳಲ್ಲಿ ಬುಡಸಮೇತ ನೆಲಸಮ ಮಾಡಿ ಅದರ ಬದಲಿಗೆ ಎಲ್ಲ ಜಾತಿಯ ಮರಗಳನ್ನು ಬೆಳೆಸಲಾಗುವುದು. ಇದನ್ನು ಒಂದು ಆಂದೋಲನವಾಗಿ ಮಾಡಲಾಗುವುದು ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.