ಬೆಂಗಳೂರು: `ದೇಶದ ಶೇ 50 ಜನರು ಮಿತಿಮೀರಿದ ಕಣಯುಕ್ತ ಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಅದರಲ್ಲೂ ಬೆಂಗಳೂರು ನಗರದ ಜನರು ಗಂಭೀರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ' ಎಂಬ ಆತಂಕಕಾರಿ ಸಂಗತಿ ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್ಇ) ಅಧ್ಯಯನದಿಂದ ಬಹಿರಂಗಗೊಂಡಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಾಯುಮಾಪನ ಕೇಂದ್ರಗಳ ಮಾಹಿತಿಯಲ್ಲೂ ಇದೇ ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಉಸಿರಾಡುವಾಗ ದೇಹವನ್ನು ಸೇರುವ ದೂಳಿನ ಕಣಗಳ ಪ್ರಮಾಣವು ನಗರದಲ್ಲಿ ರಾಷ್ಟ್ರೀಯ ಮಿತಿಯನ್ನು ಮೀರಿರುವುದು ಕಂಡುಬಂದಿದೆ. ವಾಯುಮಾಲಿನ್ಯದ ರಾಷ್ಟ್ರೀಯ ಮಿತಿಯ ಪ್ರಕಾರ ಪ್ರತಿ ಘನ ಮೀಟರ್ಗೆ 60 ಮೈಕ್ರೊ ಗ್ರಾಂ ದೂಳಿನ ಕಣಗಳಿರಬೇಕು. ಆದರೆ, ನಗರದ ಎಲ್ಲ ವಲಯಗಳಲ್ಲೂ ಈ ಮಿತಿ ದಾಟಿದೆ.

ವಾಯು ಗುಣಮಟ್ಟವನ್ನು ಅಳೆಯುವ ಉದ್ದೇಶದಿಂದ ನಗರದಲ್ಲಿ ನಾಲ್ಕು ವಲಯಗಳನ್ನು ಗುರುತಿಸಲಾಗಿದೆ. ಕೈಗಾರಿಕಾ ಪ್ರದೇಶಗಳನ್ನು ಕೈಗಾರಿಕಾ ವಲಯವೆಂದು, ವಾಣಿಜ್ಯ ಸಮುಚ್ಚಯಗಳ ಪ್ರದೇಶಗಳನ್ನು ವಾಣಿಜ್ಯ ವಲಯವೆಂದು, ವಸತಿ ಪ್ರದೇಶಗಳನ್ನು ವಸತಿ ವಲಯವೆಂದು ಮತ್ತು ಆಸ್ಪತ್ರೆ, ಶಾಲಾ- ಕಾಲೇಜುಗಳ ಪ್ರದೇಶವನ್ನು ಸೂಕ್ಷ್ಮ ವಲಯವೆಂದು ವಿಂಗಡಿಸಲಾಗಿದೆ.

ನಗರದ ಮಾಲಿನ್ಯ ಪ್ರಮಾಣದ ಬಗ್ಗೆ ಮಾಹಿತಿ ನೀಡಿದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೈಜ್ಞಾನಿಕ ಅಧಿಕಾರಿ ಬಿ.ನಾಗಪ್ಪ, `ಗಾಳಿಯಲ್ಲಿರುವ ಗಂಧಕದ ಡೈ ಆಕ್ಸೈಡ್, ಸಾರಜನಕದ ಡೈ ಆಕ್ಸೈಡ್, ಇಂಗಾಲದ ಮೊನಾಕ್ಸೈಡ್, ಉಸಿರಾಡುವಾಗ ದೇಹವನ್ನು ಸೇರುವ ದೂಳಿನ ಕಣಗಳ ಪ್ರಮಾಣಗಳನ್ನು ಆಧರಿಸಿ ವಾಯು ಮಾಲಿನ್ಯವನ್ನು ಪ್ರಮಾಣೀಕರಿಸಲಾಗುತ್ತದೆ. ನಗರದ ನಾಲ್ಕು ವಲಯಗಳ ಮಾಹಿತಿಯನ್ನು ನೋಡಿದರೆ, ನಗರದಲ್ಲಿ ಅಪಾರ ಪ್ರಮಾಣದ ದೂಳಿನ ಮಾಲಿನ್ಯವಾಗುತ್ತಿದೆ. ಇದು ಎಲ್ಲ ವಲಯಗಳಲ್ಲಿಯೂ ರಾಷ್ಟ್ರೀಯ ಗರಿಷ್ಠ ಮಿತಿಯನ್ನು ಮೀರಿರುವುದು ಕಂಡುಬಂದಿದೆ' ಎಂದರು.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ, `ನಗರದಲ್ಲಿ ವಾಹನಗಳಿಂದ ಮತ್ತು ಕಸದಿಂದ ಅಧಿಕ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ. ಸರಿಯಾದ ರಸ್ತೆಗಳು ಇಲ್ಲದೆ ಇರುವುದರಿಂದ ದೂಳು ಹೆಚ್ಚಾಗಿ ವಾಯುಮಾಲಿನ್ಯ ಪ್ರಮಾಣ ಹೆಚ್ಚುತ್ತಿದೆ' ಎಂದರು.

`ನಗರದಲ್ಲಿ ವಾಯು ಮಾಲಿನ್ಯವನ್ನು ಉಂಟುಮಾಡುವಲ್ಲಿ ವಾಹನಗಳ ಪಾತ್ರ ಪ್ರಮುಖವಾಗಿದೆ. ಪ್ರತಿದಿನ ಶೇ 41ರಷ್ಟು ವಾಹನಗಳು ಶೇ 67ರಷ್ಟು ಸಾರಜನಕದ ಡೈ ಆಕ್ಸೈಡ್ ಅನ್ನು ಹೊರಸೂಸುತ್ತಿವೆ. ಪರಿಸರ ಮತ್ತು ವಿಜ್ಞಾನ ಕೇಂದ್ರದ (ಸಿಎಸ್ಇ) ವಿಶ್ಲೇಷಣೆಯ ಪ್ರಕಾರ ಬೆಂಗಳೂರಿನಲ್ಲಿ 1,200 ವಾಹನಗಳು ಪ್ರತಿದಿನ ನೋಂದಣಿಯಾಗಿ ರಸ್ತೆಗಿಳಿಯುತ್ತವೆ. ಇವುಗಳಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳೇ ಹೆಚ್ಚಾಗಿವೆ' ಎಂದು ಹೇಳಿದರು.

`ವಾಹನಗಳಿಂದಾಗುವ ವಾಯುಮಾಲಿನ್ಯವನ್ನು ತಡೆಗಟ್ಟಲು ಅನೇಕ ಪ್ರಸ್ತಾವಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಾಹನಗಳ ನಿರ್ಮಾಣದಲ್ಲಿ ನೂತನ ತಂತ್ರಜ್ಞಾನವನ್ನು ಬಳಸಬೇಕು, ಆಟೊಗಳಲ್ಲಿ ಎಲ್ಪಿಜಿ ಬಳಕೆಯಾಗಬೇಕು ಮತ್ತು 10 ವರ್ಷಕ್ಕಿಂತ ಹೆಚ್ಚು ಬಳಸಿದ ವಾಹನಗಳ ಬಳಕೆ ಕೈ ಬಿಡಬೇಕು ಎಂಬ ಪ್ರಸ್ತಾಪಗಳೂ ಇವೆ. ವಿವಿಧ ಕಾಮಗಾರಿಗಳ ಸಂದರ್ಭದಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸದೇ ಇರುವುದು ದೂಳು ಹೆಚ್ಚಾಗಲು ಕಾರಣ' ಎಂದು ವಿಶ್ಲೇಷಿಸಿದರು.

`ನಗರದಲ್ಲಿ ಕೈಗಾರಿಕೆಗಳ ತ್ಯಾಜ್ಯದ ನೀರು ಹಾಗೂ ಮನೆಗಳ ಕೊಳಚೆ ನೀರು ನದಿ ಮೂಲಗಳನ್ನು ಸೇರುತ್ತಿವೆ. ಕೈಗಾರಿಕೆಗಳಿಂದ ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಿಸಿ ಹೊರ ಬಿಡಬೇಕೆಂಬ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಲಾಗಿದೆ. ಕೊಳಚೆ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವ ವಿಧಾನ ಇನ್ನೂ ಸಮರ್ಪಕವಾಗಿ ಜಾರಿಯಾಗಿಲ್ಲ. ಹೀಗಾಗಿ ಕೊಳಚೆ ನೀರು, ನೀರಿನ ಮೂಲಗಳಿಗೆ ಸೇರುತ್ತಿದೆ. ಕಲುಷಿತ ನೀರಿನಿಂದ ನಗರದ ಅಂತರ್ಜಲವೂ ಸ್ವಲ್ಪ ಪ್ರಮಾಣದಲ್ಲಿ ಕಲುಷಿತಗೊಂಡಿದೆ' ಎಂದರು.

`ಹಿಂದಿನ ವರ್ಷಗಳಿಗೆ ಹೋಲಿಸಿದರೆ ನಗರದ ಕೈಗಾರಿಕಾ ವಲಯದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ. ಶಬ್ದ ಮಾಲಿನ್ಯವನ್ನು ನಿಯಂತ್ರಿಸಲು ಮಂಡಳಿಯು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಥಮ್ ಮೋಟಾರ್ಸ್ ಮತ್ತು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ನಗರದಲ್ಲಿ ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು `ಹಾರ್ನ್ರಹಿತ ಸೋಮವಾರ' ಅಭಿಯಾನವನ್ನು ಆರಂಭಿಸಲಾಗಿದೆ. ತುರ್ತು ಅಗತ್ಯವಿದ್ದಾಗ ಮಾತ್ರ ಹಾರ್ನ್ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.

ಅಭಿಯಾನದಿಂದ ನಗರದ ಕೆಲ ಭಾಗಗಳಲ್ಲಿ ಶೇ 4 ರಿಂದ 5 ಡೆಸಿಬಲ್ನಷ್ಟು ಶಬ್ದ ಮಾಲಿನ್ಯ ಕಡಿಮೆಯಾಗಿದೆ' ಎಂದು ಮಾಹಿತಿ ನೀಡಿದರು.

ಯೋಚಿಸಿ, ಸೇವಿಸಿ, ಉಳಿಸಿ

ಪ್ರಸಕ್ತ ವರ್ಷದ ವಿಶ್ವ ಪರಿಸರದ ದಿನಕ್ಕೆ `ಯೋಚಿಸಿ, ಸೇವಿಸಿ, ಉಳಿಸಿ' ಎಂಬ ಘೋಷಣಾ ವಾಕ್ಯವನ್ನು ವಿಶ್ವ ಸಂಸ್ಥೆ ಘೋಷಿಸಿದೆ. ಆಹಾರದಿಂದ ಬರುವ ತ್ಯಾಜ್ಯವೇ ಕಸದ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ. ಇದೇ ಮಾಲಿನ್ಯ ಹೆಚ್ಚಾಗಲು ಕಾರಣ. ಹೀಗಾಗಿ, ಆಹಾರದ ಹಿತಮಿತ ಸೇವನೆ ಅಗತ್ಯ. ಹೋಟೆಲ್, ರೆಸ್ಟೊರೆಂಟ್, ಮದುವೆ ಮನೆ, ಕಲ್ಯಾಣ ಮಂಟಪಗಳು ಮತ್ತು ಮನೆಗಳಲ್ಲಿ ಉತ್ಪಾದನೆಯಾಗುವ ಆಹಾರದ ತ್ಯಾಜ್ಯದ ಪ್ರಮಾಣ ಹೆಚ್ಚಾಗಿದೆ. ದೇಶದಲ್ಲಿ ಆಹಾರವಿಲ್ಲದೆ ಇರುವವರ ಸಂಖ್ಯೆಯೂ ಹೆಚ್ಚಿದೆ. ಹೀಗಾಗಿ ಅಂಥವರಿಗೂ ಆಹಾರ ಸಿಗುವ ಬಗ್ಗೆ ಪ್ರತಿಯೊಬ್ಬರೂ ಯೋಚಿಸಬೇಕು. ಆಹಾರವನ್ನು ಉಳಿಸಬೇಕು. ಪ್ಯಾಕೆಟ್ ಆಹಾರದ ಬಳಕೆಯಿಂದ ಮಾಲಿನ್ಯ ಹೆಚ್ಚಾಗುತ್ತದೆ. ಈ ಬಗ್ಗೆಯೂ ಜಾಗೃತಿ ಮೂಡಿಸುವ ಅಗತ್ಯವಿದೆ.
- ಡಾ.ವಾಮನ ಆಚಾರ್ಯ, ಅಧ್ಯಕ್ಷರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.