ಹಸಿದ ಹೊಟ್ಟೆಯ ಉರಿ ತಣಿಸುವುದಷ್ಟೇ ಊಟವಲ್ಲ, ರುಚಿಯೂ ಹದವಾಗಿದ್ದು, ಆರೋಗ್ಯಕ್ಕೂ ಔಷಧಿಯಂತಿರಬೇಕು. ನೋಡಲು ಚಂದವಿದ್ದು, ಬಾಯಲ್ಲಿ ನೀರೂರಿಸುವಂತಿರಬೇಕು. ಮಲೆನಾಡಿನ ರುಚಿ ರುಚಿ ಅಡುಗೆ ವೈವಿಧ್ಯ ಸವಿಗೂ ಸ್ವಾಸ್ಥ್ಯಕ್ಕೂ ಹೇಳಿ ಮಾಡಿಸಿದಂಥವು. ಒಮ್ಮೆ ಪ್ರಯತ್ನಿಸಿ ನೋಡಿ.

ಮೊದಲ ಸಲಕ್ಕೆ ಹದ ಸಿಗುವುದು ಕಷ್ಟ. ಆದರೆ ಶಿವಮೊಗ್ಗ, ಸಾಗರ ಕಡೆಯಲ್ಲಿ ಊಟದ ಮೊದಲಿಗೆ ತಂಬುಳಿ ಸಾಸಿವೆ ಇಲ್ಲದ ಮನೆಯೇ ಇಲ್ಲ. ಇದು ನಮ್ಮ ಗಾರಿಟ್ಟ ಹೊಟ್ಟೆಯ ಒಳಗನ್ನ ತಂಪಾಗಿಸುವುದು. ಮೊದಲಿಗೆ ಈ ತಂಬುಳಿ ಅನ್ನವನ್ನು ತಿನ್ನುವುದರಿಂದ ಉದರಶೂಲೆ ಹೊಟ್ಟೆ ತೊಂದರೆ ಅಲ್ಸರ್, ಗ್ಯಾಸ್ಟ್ರಿಕ್ ಟ್ರಬಲ್ ಬರುವುದಿಲ್ಲವೆನ್ನುತ್ತಾರೆ. ಮಲೆನಾಡಿನಲ್ಲಿ ಇದು ಇಂದಿಗೂ ರೂಢಿಯಲ್ಲಿದೆ. ಒಂದೆರಡು ಸಲ ಪ್ರಯತ್ನಿಸಿ. ಹದವರಿತರೆ ಹಸಿವಾದಾಗಲೆಲ್ಲ ನೆನಪಾದೀತು ಮಲೆನಾಡಿನ ಊಟ.

ನೆಲ್ಲಿಕಾಯಿ ಸಾಸಿವೆ

ಬೇಕಾಗುವ ಸಾಮಾಗ್ರಿ: ತುರಿದ ನೆಲ್ಲಿ ಕಾಯಿ೧/೨ ಬಟ್ಟಲು, ಮೊಸರು ಒಂದು ಬಟ್ಟಲು, ಈರುಳ್ಳಿ ಮಧ್ಯಮ ಗಾತ್ರದ್ದು, ಒಂದು ಹಸಿ ಮೆಣಸಿನ ಕಾಯಿ, ಎರಡು ಕರಿಬೇವು, ಒಂದು ಎಳಸು ಮಜ್ಜಿಗೆ, ಮೆಣಸು, ತುಪ್ಪ ಒಂದು ಚಮಚ, ಕೊತ್ತಂಬರಿ ಸೊಪ್ಪು, ಉಪ್ಪು, ಇಂಗು ಒಗ್ಗರಣೆಗೆ ಸಾಸಿವೆ, ಉದ್ದಿನ ಬೇಳೆ.

ಮಾಡುವ ವಿಧಾನ: ತುರಿದ ನೆಲ್ಲಿಯೊಂದಿಗೆ ಮೊಸರು ಮಿಕ್ಸ್ ಮಾಡಬೇಕು. ಈರುಳ್ಳಿ, ಹಸಿಮೆಣಸು ಸಣ್ಣಗೆ ಹೆಚ್ಚಿ ಹಾಕಬೇಕು. ನಂತರ ತುಪ್ಪದಲ್ಲಿ ಒಗ್ಗರಣೆ ಮಾಡಿ ಮಜ್ಜಿಗೆ ಮೆಣಸನ್ನು ಚೂರು ಮಾಡಿ ಒಗ್ಗರಣೆ ಹಾಕಿ ಸಾಸಿವೆಗೆ ಹಾಕಿ ಮಿಕ್ಸ್ ಮಾಡಬೇಕು. ರುಚಿಗೆ ಉಪ್ಪನ್ನು ಸೇರಿಸಿದರೆ ನೆಲ್ಲಿ ಚಿಟ್ಟಿನ ಸಾಸಿವೆ ರೆಡಿ. ರುಚಿಯೊಂದಿಗೆ ಜೀವಸತ್ವಗಳ ಕಣಜವಾಗಿದೆ. ನೆಲ್ಲಿ ಕಾಯಿ ಸಿಗುವ ಕಾಲದಲ್ಲಿ ತಂದು ಪುಡಿ ಮಾಡಿಟ್ಟುಕೊಂಡರೆ ದಿಢೀರಾಗಿ ತಯಾರಿಸಬಹುದು. ಇದು ಹಸಿ ಇದ್ದರು ಒಣಗಿದರೂ ಜೀವಸತ್ವ ಕಡಿಮೆ ಆಗುವುದಿಲ್ಲ. ಸಿ ವಿಟಮಿನ್ ಗಳ ರಾಜನೆಂದೆ ಹೇಳಬಹುದು ಈ ನೆಲ್ಲಿ ಕಾಯಿಯನ್ನು.

ಕಾಯಿ ಕಡುಬು
ಬೇಕಾಗುವ ಸಾಮಾಗ್ರಿ: ಹಸಿ ಕಾಯಿ ತುರಿ ಎರಡು ಬಟ್ಟಲು, ಬೆಲ್ಲ ಒಂದು ಬಟ್ಟಲು, ದಪ್ಪ ಅಕ್ಕಿ ಎರಡು ಬಟ್ಟಲು, ಕೊಬ್ಬರಿ ಎಣ್ಣೆ ಎರಡು ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಏಲಕ್ಕಿ ಪುಡಿ.

ಮಾಡುವ ವಿಧಾನ: ಒಂದೂವರೆ ಗಂಟೆ ಕಾಲ ನೆನೆಸಿಟ್ಟು ಅಕ್ಕಿಯನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಇದು ನೀರುದೋಸೆ ಹದಕ್ಕಿರಲಿ. ರುಚಿಗೆ ಉಪ್ಪು ಬೇಕಾದಷ್ಟು ಹಾಕಿ ಒಲೆಯ ಮೇಲಿಟ್ಟು ಬೇಯಿಸಕೊಳ್ಳಬೇಕು. ರಾಗಿ ಮುದ್ದೆ ರೀತಿಯಾಗಿ ಇನ್ನೊಂದು ಕಡೆ ಬಾಣಲೆಗೆ ಕಾಯಿ ತುರಿ, ಬೆಲ್ಲ ಚಿಟಿಕೆ ಉಪ್ಪು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹೂರಣ ಸಿದ್ದಮಾಡಿಕೊಳ್ಳಬೇಕು. ಸಣ್ಣ ಉರಿಯಲ್ಲಿ ಎಳೆ ಪಾಕ ಬರುವ ತನಕ ಮಗುಚಬೇಕು.

ಕೊಬ್ಬರಿ ಎಣ್ಣೆ ಅಂಗೈಗೆ ಹಚ್ಚಿಕೊಂಡು ಪೂರಿತರ ಬೆಂದ ಹಿಟ್ಟಿನಿಂದ ತಯಾರಿಸಿಕೊಂಡು ಅದರ ಮೇಲೆ ಸಿದ್ದವಾದ ಹೂರಣವನ್ನು ಒಂದು ದೊಡ್ಡ ಚಮಚೆಯಷ್ಟನ್ನ ಇಟ್ಟು ಅರ್ಧಕ್ಕೆ ಮಡಿಸಿ ಸುತ್ತ ಎರಡು ಭಾಗವನ್ನು ಒತ್ತಿ ಮುಚ್ಚಬೇಕು. ಕರಿಗಡುಬಿನ ರೀತಿ ಸಿದ್ದವಾದ ಈ ಕಾಯಿ ಕಡುಬನ್ನು ಕುಕ್ಕರಿನ ಬಟ್ಟಲಿನಲ್ಲಿಟ್ಟು ೧೫ ನಿಮಿಷ ಹಬೆಯಲ್ಲಿ ಬೇಯಿಸಬೇಕು. ವಿಷಲ್ ಹಾಕಬಾರದು. ಘಮಘಮಿಸುವ ಹೆರೆ ತುಪ್ಪದೊಂದಿಗೆ ತಿಂದರೆ ಅದರ ರುಚಿ ಹೇಳತೀರದು. ಇದನ್ನು ನಮ್ಮ ಮಲೆನಾಡಿನಲ್ಲಿ ಗಣಪತಿ ಹಬ್ಬದ ದಿನ ವಿಶೇಷವಾಗಿ ಮಾಡುತ್ತಾರೆ. ಇದೇ ರೀತಿ ಬೇಳೆಯಿಂದ ಕಾರದ ಕಡುಬನ್ನು ತಯಾರಿಸುತ್ತಾರೆ.

ದಿವ್ಯಲಸಿನ (ಜೀಗುಜ್ಜಿ) ಪೋಡಿ
ಬೇಕಾಗುವ ಸಾಮಾಗ್ರಿ: ಒಂದು ಸಣ್ಣ ದಿವ್ಯಲಸು, ಅಡುಗೆ ಎಣ್ಣೆ ದೊಡ್ಡ ಚಮಚ, ೬ ಕಡಲೆ ಹಿಟ್ಟು, ೧ ಬಟ್ಟಲು ಅಕ್ಕಿ ಹಿಟ್ಟು, ದೊಡ್ಡ

ಚಮಚ೧ಜೀರಿಗೆ ಪುಡಿ ಕೊತ್ತಂಬರಿ ಪುಡಿ ದೊಡ್ಡ ಚಮಚ ೧ಅಚ್ಚಕಾರದ ಪುಡಿ ದೊಡ್ಡ ಚಮಚ ೧ ಅಡಿಗೆ ಸೋಡ1 ಚಿಟಿಕೆ ರುಚಿಗೆ ತಕ್ಕಷ್ಟು ಉಪ್ಪು ಮೊಸರು ೧/೨ ಬಟ್ಟಲು

ಮಾಡುವ ವಿಧಾನ: ಮೊದಲಿಗೆ ಜೀಗುಜ್ಜನ್ನು ಸಿಪ್ಪೆ ಒಳಗೂಜನ್ನು ತೆಗೆದು ತೆಳುವಾದ ಹೋಳನ್ನಾಗಿ ಹೆಚ್ಚಿಕೊಳ್ಳಬೇಕು. (ಮಜ್ಜಿಗೆ ಹುಳಿಗೆ ಹೆಚ್ಚಿಕೊಂಡಹಾಗೆ) ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಕೊಳ್ಳಬೇಕು. ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು.

ದೋಸೆ ಕಾವಲಿ ಬಿಸಿಯಾದೊಡನೆ ಒಂದೊಂದೆ ಹೋಳನ್ನು ಎರಡು ಕಡೆ ಹಿಟ್ಟಿನಲ್ಲಿ ಅದ್ದಿ ಕಾವಲಿ ಮೇಲೆ ಸ್ವಲ್ಪ ದೂರದೂರ ಇಟ್ಟು ಮೇಲೆ ಕೆಳಗೆ ಒಂದೊಂದು ಚಮಚ ಎಣ್ಣೆ ಹಾಕಿ ಬಂಗಾರದ ಬಣ್ಣ ಬರುವಂತೆ ಬೇಯಿಸಬೇಕು. ಹದವಾದ ಉರಿ ಇರಬೇಕು. ಗರಿಗರಿಯಾದ ಬಿಸಿಬಿಸಿಯಾದ ದಿವ್ಯಲಸಿನ ಪೋಡಿಯ ರುಚಿ ಅಧ್ಭುತವಾದದ್ದು. ಮಳೆಗಾಲದಲ್ಲಿ ಇದರ ರುಚಿ ಮತ್ತಷ್ಟು ಹೆಚ್ಚು. ಇದು ಮಲೆನಾಡಿನಲ್ಲಿ ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಇರುವ ತರಕಾರಿ.

ಹಲಸಿನ ಹಣ್ಣಿನ ಸಿಹಿ
ಬೇಕಾಗುವ ಸಾಮಾಗ್ರಿ: ಹಲಸಿನ ಹಣ್ಣಿನ ತೊಳೆ ೨೦, ದಪ್ಪ ಅಕ್ಕಿ ೧ ಬಟ್ಟಲು ಹಸಿ ಕಾಯಿ ತುರಿ೧ ಬಟ್ಟಲು ಸಿಹಿ ಹೆಚ್ಚು ಬೇಕಿದ್ದಲ್ಲಿ ಬೆಲ್ಲದ ಪುಡಿ೧/೨ ಬಟ್ಟಲು, ರುಚಿಗೆ ತಕ್ಕಷ್ಟು ಉಪ್ಪು ಏಲಕ್ಕಿ ಪುಡಿ

ಮಾಡುವ ವಿಧಾನ: ಸಣ್ಣಗೆ ಹೆಚ್ಚಿಕೊಂಡ ಹಲಸಿನ ತೊಳೆ, ಎರಡು ಗಂಟೆ ನೆನೆಸಿಟ್ಟ ಅಕ್ಕಿ ಹಾಗು ಕಾಯಿ ತುರಿಯನ್ನು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಚಿಟಿಕೆ ಉಪ್ಪು ಏಲಕ್ಕಿ ಪುಡಿ ಬೆಲ್ಲದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು. ಈ ಹಿಟ್ಟು ಇಡ್ಲಿ ಹಿಟ್ಟಿನ ಹದಕ್ಕಿರಬೇಕು. ಕಡುಬಿನ ಪಾತ್ರೆಯಲ್ಲಿ (ಕುಕ್ಕರ್ ಬಟ್ಟಲಿಟ್ಟು) ಅರ್ಧ ಗಂಟೆ ಬೇಯಿಸಬೇಕು.

ಬೆಂದ ಕಡುಬನ್ನು ಬೇಕಾದ ಆಕಾರಕ್ಕೆ ಕತ್ತರಿಸಿ ಘಮ್ಮೆನ್ನುವ ತುಪ್ಪ ಜೇನುತುಪ್ಪದೊಂದಿಗೆ ತಿಂದರೆ ಅದರ ಸವಿ ಆ....ಹಾ...! ತಿಂದೇ ಹೇಳಬೇಕು. ಹಲಸಿನ ಹಣ್ಣಿನ ಕಾಲದಲ್ಲಿ ಮಲೆನಾಡಿನಲ್ಲಿ ದಿನಾ ಒಂದೊಂದು ತಿಂಡಿ ಇರುತ್ತದೆ. ಹಸಿ ಬಾಳೆಯ ಸಿಗಳನ್ನು ಕೊಟ್ಟೆಯನ್ನಾಗಿಸಿ ಅದರಲ್ಲು ಕಡುಬನ್ನು ಮಾಡಬಹುದು. ಮಲೆನಾಡಿನಲ್ಲಿ ಹಾಗೆ ಕೊಟ್ಟೆ ಕಡುಬನ್ನು ಮಾಡುತ್ತಾರೆ. ಹಸಿದ ಹೊಟ್ಟೆಗೆ ಹಲಸು ಉಂಡ ಹೊಟ್ಟೆಗೆ ಮಾವು ಎಂಬುದು ಗಾದೆ ಮಾತು.

‘ನಮ್ಮೂರ ಊಟ’ಕ್ಕೆ ನೀವೂ ಬರೆಯಿರಿ...
ಪ್ರತಿಯೊಂದು ಊರಿಗೂ ತನ್ನದೇ ಆದ ‘ಸಿಗ್ನೇಚರ್ ಡಿಶ್’ ಒಂದಿರುತ್ತದೆ. ರಾಣೆಬೆನ್ನೂರಿನ ಭಿರಂಜಿ ಆಗಿರಲಿ, ಬೀದರ್ನ ಭಜ್ಜಿ ಆಗಿರಲಿ...

ಆಯಾ ಊರಿನ ಸೊಗಡನ್ನೂ ಅಡುಗೆಯ ಸೊಗಸನ್ನೂ ಹೇಳುವ ಖಾದ್ಯಗಳವು. ಊರಿಗೆ ಬಂದವರಿಗೆಲ್ಲ ಸ್ಪೆಷಲ್ ಅಂತ ಹೇಳಿ ಮಾಡಿ ಬಡಿಸುವ ಇಂಥ ಊಟಗಳ ಪರಿಚಯ ಸಮಸ್ತ ಕನ್ನಡಿಗರಿಗೆ ಆಗಲಿ. ಖಾದ್ಯ ತಯಾರಿಸುವ ವಿವರಗಳೊಂದಿಗೆ ಸಾಂಸ್ಕೃತಿಕ ವಿಶೇಷವನ್ನೂ ಬರೆಯಿರಿ. ಆ ಖಾದ್ಯವನ್ನು ತಯಾರಿಸುವುದು ಹೆಚ್ಚಾಗಿ ಯಾವ ಋತುವಿನಲ್ಲಿ? ಯಾವ ಸಂದರ್ಭದಲ್ಲಿ? ಯಾಕೆ ಹೆಚ್ಚು ಜನಪ್ರಿಯ? ಎಂಬ ವಿವರಗಳೂ ಲೇಖನದ ಜೊತಿಗಿರಲಿ.

ಊಟದ ಚಿತ್ರದೊಂದಿಗೆ ನಿಮ್ಮ ಚಿತ್ರವೂ ಇರಲಿ. ನಿಮ್ಮೂರಿನ ಬಗ್ಗೆ ಕರಳು–ಬಳ್ಳಿಯ ಸಂಬಂಧ ಬೆಳೆಯುವಂತಿರಬೇಕು. ಮಾಂಸಾಹಾರ ಅಥವಾ ಸಸ್ಯಾಹಾರ ಯಾವುದೇ ಬಗೆಯದ್ದಾಗಿರಲಿ. ಹೊಟ್ಟೆಗೆ ಹಿತವಾಗಿದ್ದರೆ ಸಾಕು. ಬರಹವು ನುಡಿ ಅಥವಾ ಬರಹ ತಂತ್ರಾಂಶದಲ್ಲಿರಲಿ. ನಿಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇರಲೇಬೇಕು. ಉತ್ತಮ ಗುಣಮಟ್ಟದ ಚಿತ್ರಗಳಿಗೆ ಆದ್ಯತೆ.

ಇ–ಮೇಲ್ ವಿಳಾಸ bhoomika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.