ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಶುಕ್ರವಾರ ಸಾಧಾರಣ ಮಳೆ ಸುರಿದಿದೆ. ಕಳೆದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ.

ಮಡಿಕೇರಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಮಂಜು ಮಸುಕಿದ ವಾತಾವರಣದೊಂದಿಗೆ ಆಗಾಗ ತುಂತುರು ಮಳೆಯಾಗಿದೆ. ದಿನವಿಡೀ ಇದೇ ವಾತಾವರಣ ಮುಂದುವರೆದಿತ್ತು.

ಮಳೆಯ ಅಬ್ಬರ ಕಡಿಮೆಯಾದ ಬೆನ್ನೆಲ್ಲೇ ಜಿಲ್ಲೆಯಾದ್ಯಂತ ಕೃಷಿ ಚಟುಚಟಿಕೆಗಳು ಗರಿಗೆದರಿವೆ. ಸೋಮವಾರಪೇಟೆ, ಶನಿವಾರಂತೆ, ಕುಶಾಲನಗರ ಭಾಗಗಳಲ್ಲಿ ರೈತರು ಬತ್ತ ಬೆಳೆಯುವ ನಿಟ್ಟಿನಲ್ಲಿ ಗದ್ದೆಗಳನ್ನು ಹದ ಮಾಡುತ್ತಿರುವ ದೃಶ್ಯ ಕಂಡು ಬಂದಿತು.

ಉತ್ತಮವಾಗಿ ಮಳೆಯಾಗಿರುವ ಹಿನ್ನೆಲೆಯಲ್ಲಿ ಕುಶಾಲನಗರದ ಹೊರ ವಲಯದ ಪ್ರದೇಶಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಮಾಡಿದ್ದ ಮೆಕ್ಕೆ ಜೋಳ ಸೇರಿದಂತೆ ತಂಬಾಕು ಬೆಳೆಗಳು ಸೋಂಪಾಗಿ ಬೆಳೆಯುತ್ತಿದ್ದು, ಹೊಲ ಗದ್ದೆಗಳು ಹಸಿರಿನಿಂದ ಕಂಗೊಳಿಸುವ ದೃಶ್ಯ ಕಾಣಸಿಗುತ್ತದೆ.

ಜಿಲ್ಲೆಯ ಮಡಿಕೇರಿ, ಭಾಗಮಂಡಲ ವಿರಾಜಪೇಟೆ ವ್ಯಾಪ್ತಿಯಲ್ಲಿ ಮಳೆಯ ಆಗಮನ ಕಾಫಿ, ಮೆಣಸಿನ ತೋಟಕ್ಕೆ ತಂಪೆರೆದಿದ್ದು, ತೋಟಗಳಲ್ಲಿನ ಬೇಡವಾದ ಗಿಡಗಳನ್ನು ಹಾಗೂ ತೋಟದ ಸುತ್ತಲಿನ ಬೇಲಿಯನ್ನು ಕತ್ತರಿಸುವತ್ತ ಮಗ್ನರಾದ ರೈತಾಪಿ ವರ್ಗದವರ ಕೆಲಸಗಳು ಮುಂದುವರೆದಿವೆ.

ಮಳೆ ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ರಸಗೊಬ್ಬರ ಅಂಗಡಿಗಳಲ್ಲಿ ಹಾಗೂ ಕೃಷಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಗೆ ಮುಗಿ ಬಿಳುತ್ತಿದ್ದಾರೆ.

ಜಿಲ್ಲೆಯ ಮಳೆ ವಿವರ
ಶುಕ್ರವಾರ ಬೆಳಿಗ್ಗೆ 8 ಗಂಟೆ ಅವಧಿ ಪೂರ್ಣಗೊಂಡಂತೆ ಕಳೆದ 24 ತಾಸಿನಲ್ಲಿ ಕೊಡಗು ಜಿಲ್ಲೆಯಲ್ಲಿ 4.78ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ದಿನ 12.76 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 659.47 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 424 ಮಿ.ಮೀ ಮಳೆ ದಾಖಲಾಗಿತ್ತು.

ಮಡಿಕೇರಿ ತಾಲ್ಲೂಕಿನಲ್ಲಿ 7.20 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 15.25ಮಿ.ಮೀ.ಮಳೆ ಬಿದ್ದಿದೆ. ಜನವರಿಯಿಂದ ಇಲ್ಲಿಯವರೆಗೆ 947.89 ಮಿ.ಮೀ ಮಳೆಯಾಗಿದೆ.

ವೀರಾಜಪೇಟೆ ತಾಲ್ಲೂಕಿನಲ್ಲಿ 5.6 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 12.7ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 502.9ಮಿ.ಮೀ. ಮಳೆ ದಾಖಲಾಗಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 1.53 ಮಿ.ಮೀ.ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 10.32 ಮಿ.ಮೀ. ಮಳೆ ದಾಖಲಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 527.65 ಮಿ.ಮೀ. ಮಳೆ ಸುರಿದಿದೆ.

ಹೋಬಳಿವಾರು ವಿವರ
ಮಡಿಕೇರಿ ಕಸಬಾ 3.2 ಮಿ.ಮೀ., ನಾಪೋಕ್ಲು 6.2 ಮಿ.ಮೀ., ಸಂಪಾಜೆ 4.2 ಮಿ.ಮೀ., ಭಾಗಮಂಡಲ 15.2 ಮಿ.ಮೀ., ವೀರಾಜಪೇಟೆ ಕಸಬಾ 2.8 ಮಿ.ಮೀ., ಹುದಿಕೇರಿ 11.6 ಮಿ.ಮೀ., ಶ್ರಿಮಂಗಲ 10 ಮಿ.ಮೀ., ಪೊನ್ನಂಪೇಟೆ 4.2 ಮಿ.ಮೀ., ಬಾಳಲೆ 5 ಮಿ.ಮೀ., ಶಾಂತಳ್ಳಿ 2.2 ಮಿ.ಮೀ., ಕೊಡ್ಲಿಪೇಟೆ 4.2 ಮಿ.ಮೀ., ಸುಂಟಿಕೊಪ್ಪ 1.6 ಮಿ.ಮೀ. ಮಳೆಯಾಗಿದೆ.

ಜಲಾಶಯದ ನೀರಿನ ಮಟ್ಟ:
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2826.75 ಅಡಿಗಳು, ಕಳೆದ ವರ್ಷ ಇದೇ ದಿನ 2808.27 ಅಡಿ ನೀರು ಸಂಗ್ರವಾಗಿತ್ತು.

ಇಂದಿನ ನೀರಿನ ಒಳ ಹರಿವು 919 ಕ್ಯೂಸೆಕ್ ಆಗಿದೆ, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 788 ಕ್ಯೂಸೆಕ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.