ಸೋಮವಾರ, ಜನವರಿ 20, 2020
29 °C

ಮಸೂದೆಗೆ ಬೆಂಕಿ: ವರದಿ ಸಲ್ಲಿಸಲು ಕೋರ್ಟ್‌ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲಂಗಾಣ ಮಸೂದೆಯ ಪ್ರತಿಗಳಿಗೆ ಬೆಂಕಿ ಹಚ್ಚಿದ ಸೀಮಾಂಧ್ರ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಬೇಕು ಮತ್ತು ಈ ಸಂಬಂಧ ತನಿಖೆ ನಡೆಸಿ ವಿಸ್ತೃತವಾದ ವರದಿ ಸಲ್ಲಿಸಬೇಕೆಂದು ಇಲ್ಲಿನ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಸೂಚಿಸಿದೆ.ನ್ಯಾಯಾಲಯದ ಸೂಚನೆ ಅನ್ವಯ,  ಸೆಕ್ಷನ್‌ 153(ಎ) ಮತ್ತು (ಬಿ) ಹಾಗೂ ಸೆಕ್ಷನ್‌ 3 ಮತ್ತು 4ರ ಸಾರ್ವಜನಿಕ ಆಸ್ತಿ ನಾಶ ಕಾಯ್ದೆ ಪ್ರಕಾರ, ಶಾಸಕರಾದ ಧುಲಿಪಾಲಾ ನರೇಂದ್ರ ಚೌಧರಿ, ದೇವಿನೇನಿ ಉಮಾ ಮಹೇಶ್ವರ್‌ ರಾವ್‌ ಮತ್ತು ವಿಧಾನ ಪರಿಷತ್‌ ಸದಸ್ಯ ಸತೀಶ್‌ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶಾಸಕರ ವರ್ತನೆಯಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದೂ ದೂರಿನಲ್ಲಿ ತಿಳಿಸಿದ್ದರು.

ಪ್ರತಿಕ್ರಿಯಿಸಿ (+)