ಮಹಿಳೆಗೆ ಗುಣಮಟ್ಟದ ಶಿಕ್ಷಕ ಕೊಡಿ

7

ಮಹಿಳೆಗೆ ಗುಣಮಟ್ಟದ ಶಿಕ್ಷಕ ಕೊಡಿ

Published:
Updated:
ಮಹಿಳೆಗೆ ಗುಣಮಟ್ಟದ ಶಿಕ್ಷಕ ಕೊಡಿ

ಗುಳೇದಗುಡ್ಡ: ಸಮಾಜದಲ್ಲಿ ಮಹಿಳೆಯರಿಗೆ ಶೋಷಣೆ ಹೆಚ್ಚಾತ್ತಲಿದೆ. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು. ಮಹಿಳೆಯರಿಗೆ ಎಲ್ಲಿಯವರೆಗೆ ಗೌರವ ಸಿಗುವುದಿಲ್ಲವೊ ಅಲ್ಲಿಯವರೆಗೆ ಅವರು ಸಮಾಜದಲ್ಲಿ ಪ್ರಕೃತಿಯಂತೆ ಕಾಣುತ್ತಾಳೆ ಎಂದು ಪ್ರಾಧ್ಯಾಪಕ, ಕಥೆಗಾರ ಅಬ್ಬಾಸ್ ಮೇಲಿನಮನಿ ಹೇಳಿದರು.ಕರನಂದಿ ರಂಗಮಂದಿರದಲ್ಲಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ, ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಮಾನವೀಯ ಸಂಬಂಧಗಳನ್ನು ಬೆಳಸಿಕೊಳ್ಳಬೇಕೆಂದು ಹೇಳಿದರು.ಪ್ರಾಧ್ಯಾಪಕಿ ಸುಲೋಚನಾ ಜವಳಗಿ ಮಾತನಾಡಿದರು. ಪ್ರಾಚಾರ್ಯ ವೈ.ಎಚ್. ಇಲಾಳ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಲಯದ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.ಹಂಸನೂರ ಜಿ.ಪಂ. ಸದಸ್ಯೆ ಮಂಜುಳಾ ಶೇಖರ ರಾಠೋಡ, ಪುರಸಭೆ ಅಧ್ಯಕ್ಷೆ ಲಲಿತಾ ದನ್ನೂರ (ಗಾಜಿ), ಕಥೆಗಾರ ಅಬ್ಬಾಸ್ ಮೇಲಿನಮನಿ, ಸುಲೋಚನಾ ಜವಳಗಿ ಅವರನ್ನು ಸನ್ಮಾನಿಸಲಾಯಿತು.ಸಮಿತಿ ಅಧ್ಯಕ್ಷ ಅಂದಾನಪ್ಪ ಅಂಗಡಿ, ಗಣೇಶ ಕವಿಶೆಟ್ಟಿ, ಉಪ ಪ್ರಾಚಾರ್ಯ ಮನೋಹರ ಚಲವಾದಿ, ಎಸ್.ಐ. ಛಬ್ಬಿ, ಜಿ.ಎಚ್. ಬಡಿಗೇರ, ಎಸ್.ಐ. ಭಾವಿ, ಎ.ಆರ್. ಉಪನಾಳ, ಜೇವರಗಿ, ಸಿ.ವೈ. ಸಂಗಮ, ಪ್ರೇಮಾ ಅಂಗಡಿ, ಮಂಜುಳಾ ಮನಗೊಳಿ, ದೇಶಪಾಂಡೆ, ಲತಾ ಪತ್ತಾರ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಸಿ.ಬಿ. ಸಜ್ಜನ ಸ್ವಾಗತಿಸಿದರು. ಹೊಸಮನಿ ನಿರೂಪಿಸಿದರು. ಆರ್.ಎಲ್. ನಾಯ್ಕರ ವಂದಿಸಿದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry