ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಇತ್ತೀಚೆಗೆ ಮಹಿಳೆಯರು ಹಲವಾರು ಕಾರಣಗಳಿಗಾಗಿ ನಾಪತ್ತೆ ಆಗುತ್ತಿರುವ ಘಟನೆಗಳು ಹೆಚ್ಚುತ್ತಿವೆ. ಇದರಲ್ಲಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಜಿಲ್ಲೆಯಲ್ಲಿ ಸುಮಾರು 550 ಮಂದಿ ಮಹಿಳೆಯರು ನಾಪತ್ತೆ ಆಗಿದ್ದಾರೆನ್ನಲಾದ ವರದಿ ಗಾಬರಿ ಉಂಟು ಮಾಡುವಂತಹದ್ದು. ಈ ಪ್ರಕರಣಗಳು ಜಿಲ್ಲೆಯ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ತಲೆ ಬಿಸಿ ಮಾಡಿವೆ.

ನಾಪತ್ತೆ ಆಗುತ್ತಿರುವ ಮಹಿಳೆಯರು ಯಾರು, ಏಕೆ ಮತ್ತು ಎಲ್ಲಿಗೆ ಹೋಗುತ್ತಿದ್ದಾರೆ ಎಂಬ ಪ್ರಕರಣಗಳನ್ನು ಭೇದಿಸುವುದು ಕಷ್ಟವಾಗಿದೆ. ಹಲವು ಪ್ರಕರಣಗಳಲ್ಲಿ ತಿಳಿದು ಬಂದಿರುವ ಅಂಶ ಪ್ರೇಮ ಪ್ರಕರಣಗಳಿಗೆ ಸಂಬಂಧಿಸಿದ್ದು. ಇದರಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಮತ್ತು ಯುವತಿಯರ ಸಂಖ್ಯೆ ಹೆಚ್ಚಿದೆ. ಪ್ರೀತಿಸಿದ ಹುಡುಗನ ಜೊತೆ ಮದುವೆ ಮಾಡಿಕೊಳ್ಳಲು ತಂದೆ ತಾಯಿಗಳು ಒಪ್ಪುತ್ತಿಲ್ಲ. ಆದ ಕಾರಣ ಪ್ರೇಮಿಯ ಜೊತೆ ಓಡಿ ಹೋಗುತ್ತಿರುವ ಪ್ರಕರಣಗಳು ಜಾಸ್ತಿ ಆಗಿರುವುದಾಗಿ ಪೊಲೀಸ್ ವರದಿಗಳು ತಿಳಿಸುತ್ತವೆ. ಇದರ ಜೊತೆಗೆ ಗಂಡ ಹೆಂಡತಿಯರ ನಡುವಣ ಜಗಳ, ಗಂಡನ ಮನೆಯಲ್ಲಿನ ಕಿರುಕುಳ ಮತ್ತು ಕೆಲವರು ಬಡಪಾಯಿ ಪತಿಗೆ ಕೈಕೊಟ್ಟು ಓಡಿ ಹೋಗಿರುವ ಸುಳಿವೂ ಪೊಲೀಸರಿಗೆ ಸಿಕ್ಕಿದೆ.

ಕಾಲ ಬದಲಾಗುತ್ತಿದೆ. ಬಹುತೇಕ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಅವರ ನಡುವೆ ಜಾತಿ ಮತ್ತು ಅಂತಸ್ತು ಅಡ್ಡಿ ಬರುತ್ತಿಲ್ಲ. ಆದರೆ ಅವರು ಕೂಡಿ ಬಾಳಲು ಮದುವೆ ಎಂಬ ಬಂಧನಕ್ಕೆ ಒಳಗಾಗುವ ಪ್ರಯತ್ನದಲ್ಲಿ ಪೋಷಕರ ಅಸಹಕಾರ ಎದುರಾಗುತ್ತದೆ.

ಕೊನೆಗೆ ಈ ಪ್ರೇಮಿಗಳು ಒಬ್ಬರನ್ನೊಬ್ಬರು ಅಗಲಲಾರದೆ ಸುಂದರ ಬದುಕಿನ ಕನಸನ್ನು ಹೊತ್ತು ಓಡಿಹೋಗುತ್ತಿದ್ದಾರೆನ್ನುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದು ಸರಿ ಅಥವಾ ತಪ್ಪು ಎನ್ನುವುದು ಅವರವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದ್ದು. ಆದರೆ ಇಂತಹ ಪ್ರಕರಣಗಳು ಸಮಾಜದಲ್ಲಿ ಅನವಶ್ಯಕವಾಗಿ ಕಾನೂನಿನ ಸಮಸ್ಯೆಯಾಗಬಾರದು.

ಅನೇಕ ಪ್ರಕರಣಗಳಲ್ಲಿ ನಾಪತ್ತೆಯಾದವರು ವಾಪಸ್ ಬಂದರೂ, ಅವರ ಪೋಷಕರು ನೀಡಿರುವ ದೂರು ಠಾಣೆಗಳಲ್ಲಿ ಹಾಗೆಯೇ ಉಳಿದು ಬಿಡುತ್ತಿರುವುದರಿಂದ ನಾಪತ್ತೆಯ ಪ್ರಕರಣಗಳ ಸಂಖ್ಯೆ ಗಾಬರಿಗೆ ಕಾರಣವಾಗಿದೆ ಎನ್ನುವುದು ಪೊಲೀಸರ ಸಮಜಾಯಿಷಿ.

ಇದೇನೇ ಇದ್ದರೂ, ಇಷ್ಟು ಪ್ರಮಾಣದ ನಾಪತ್ತೆ ಪ್ರಕರಣಗಳ ಬಗೆಗೆ ಜನಜಾಗೃತಿ ಉಂಟು ಮಾಡಬೇಕು. ಮಹಿಳೆಯರಾಗಲಿ, ಕಾಲೇಜು ಯುವತಿಯರಾಗಲಿ ನಾಪತ್ತೆ ಆಗುವುದನ್ನು ತಡೆಯಲು ಏನು ಮಾಡಬೇಕು? ಇಂತಹ ಸಮಸ್ಯೆಗೆ ಪರಿಹಾರ ಏನು ಎಂಬುದರ ಬಗೆಗೆ ಅಧ್ಯಯನ ನಡೆಸಿ ಮಹಿಳೆಯರು ದಿಕ್ಕೆಟ್ಟು ಓಡಿ ಹೋಗುವುದನ್ನು ತಪ್ಪಿಸಬೇಕಿದೆ. ಅವರ ಸಮಸ್ಯೆಗೂ ಸಮಾಜ ಮುಕ್ತ ಮನಸ್ಸಿನಿಂದ ಸ್ಪಂದಿಸಬೇಕಿದೆ. ಈ ಬಗೆಗೆ ಕಾನೂನು ಕ್ರಮಗಳಿಗಿಂತ ನೈತಿಕ ಸ್ಥೈರ್ಯ ನೀಡುವ ವಾತಾವ ರಣ ಸಮಾಜದಲ್ಲಿ ನಿರ್ಮಾಣವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.