ಹಾಸನ: ಜಿಲ್ಲೆಯಲ್ಲಿ ನೊಂದ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ನೋವಿಗೆ ಸ್ಪಂದಿಸುವ ಸಹಾಯವಾಣಿ ಕಾರ್ಯ ನಿರ್ವಹಿಸುತ್ತಿದ್ದು, ಅಲ್ಲಿ ಮಹಿಳೆ ತನಗಾಗುವ ಅನ್ಯಾಯ ದೂರಿನ ರೂಪದಲ್ಲಿ ಸಲ್ಲಿಸಬಹುದು.

ದುಡಿಯುವ ಮಹಿಳೆ ಜತೆ ಕಚೇರಿಯಲ್ಲಿ ಅಸಭ್ಯವಾಗಿ ವರ್ತನೆ ಸೇರಿದಂತೆ ಮಹಿಳೆ ಮಹಿಳೆಯರ ಸಮಸ್ಯೆ ಆಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ `ಕೆಲಸ ನಿರ್ವಹಿಸುವ ಸ್ಥಳಗಳಲ್ಲಿ ಮಹಿಳೆಯ ಮೇಲಿನ ಕಿರುಕುಳ ಮತ್ತು ಲೈಂಗಿಕ ಕಿರುಕುಳ ದೂರು ನಿವಾರಣಾ ಸಮಿತಿ, `ತಾರುಣ್ಯ ಸಾಂತ್ವನ ಕೇಂದ್ರ~ ಮಹಿಳಾ ಸಹಾಯವಾಣಿ~ ವ್ಯವಸ್ಥೆಗಳಿವೆ. ಜಿಲ್ಲಾ ಪಂಚಾಯಿತಿಯಲ್ಲಿ ಪ್ರತ್ಯೇಕ ದೂರು ನಿವಾರಣಾ ಸಮಿತಿ ಇದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ದೂರು ಪೆಟ್ಟಿಗೆ ಇದೆ. ಖಾಸಗಿ ಸಂಸ್ಥೆಗಳಲ್ಲಿ ಈ ರೀತಿಯ ಪ್ರಕರಣ ತಡೆಯಲು ಹಲವು ಸರ್ಕಾರೇತರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ತಾರುಣ್ಯ ಸಾಂತ್ವನ ಕೇಂದ್ರ ಮಹಿಳಾ ಸಹಾಯವಾಣಿಗೆ ಪ್ರತಿ ತಿಂಗಳು ಅಂದಾಜು ಹತ್ತು ಕರೆಗಳು ಬರುತ್ತವೆ. ಮದುವೆ ಮಾಡುವುದಾಗಿ ನಂಬಿಸಿ ಕೈಕೊಟ್ಟ ಘಟನೆ, ಲೈಂಗಿಕ ಶೋಷಣೆ, ಮದುವೆಗೆ ಮನೆಯವರ ಅಡೆತಡೆ, ಕುಡಿದು ಬಂದ ಪತಿಯಿಂದ ಕಿರುಕುಳ... ಹೀಗೆ ಹತ್ತು ಹಲವು ಸಮಸ್ಯೆಗಳ ಬಗ್ಗೆ ದೂರುಗಳು ಇಲ್ಲಿ ದಾಕಲಾಗುತ್ತವೆ.

ಸಹಾಯವಾಣಿ ಕೇಂದ್ರವದರು ಪ್ರತಿ ವರ್ಷ ಪೊಲೀಸರ ಸಮ್ಮುಖದಲ್ಲಿ ವಿವಾಹ ಮಾಡಿಸುತ್ತಾರೆ, ಒಡೆದ ಸಂಸಾರ ಒಂದುಗೂಡಿಸುತ್ತಾರೆ. ಇಲ್ಲಿಗೆ ಬರುವ ದೂರುಗಳಲ್ಲಿ ಹೆಚ್ಚಿನವು `ಪ್ರೀತಿ - ಪ್ರೇಮ- ಮೋಸ~ಕ್ಕೆ ಸಂಬಂಧಪಟ್ಟವು. ಹೆಚ್ಚು ಅಕ್ಷರ ಜ್ಞಾನ ಇಲ್ಲದ ಗ್ರಾಮೀಣ ಮಹಿಳೆಯರು ನಿರ್ಭಯವಾಗಿ ದೂರು ನೀಡುತ್ತಾರೆ. ಕಳೆದ ವರ್ಷ ಸಾಂತ್ವನ ಕೇಂದ್ರಕ್ಕೆ ಒಟ್ಟು 177 ದೂರುಗಳು ಬಂದಿವೆ ಇವುಗಳಲ್ಲಿ ಶೇ 97 ದೂರುಗಳು ಪರಿಹಾರ ಕಂಡಿವೆ. ಮೂರು ಮದುವೆ ಮಾಡಿಸಿದ್ದಾರೆ, ಒಬ್ಬ ಮಹಿಳೆಗೆ `ಸ್ವಧಾರ~ ಕೇಂದ್ರದಲ್ಲಿ ಆಶ್ರಯ ನೀಡಿದ್ದಾರೆ.

ಆದರೆ ಜಿಲ್ಲೆಯ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳಿಂದ ಆಗುವ ಕಿರುಕುಳ ನಿವಾರಣೆಗೆ ಸಂಬಂಧಿಸಿದ ಸಮಿತಿಗೆ ವರ್ಷಕ್ಕೆ ಒಂದೆರಡು ದೂರುಗಳು ಬಂದರೆ ಹೆಚ್ಚು. ಇಲಾಖೆಗಳಲ್ಲಿ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಒಪ್ಪುವುದಿಲ್ಲ. ಆದರೆ, ತಿಂಗಳ ಹಿಂದೆ ಹಾಸನದ ಸಮಿತಿಗೆ ಒಂದು ಪತ್ರ ಬಂದಿತ್ತು. ರಸ್ತೆ ಸಾರಿಗೆ ಸಂಸ್ಥೆಯಲ್ಲಿ ದುಡಿಯುತ್ತಿರುವ ಮಹಿಳೆಯೊಬ್ಬಳ ಮಗಳು ಈ ಪತ್ರ ಬರೆದಿದ್ದಳು. ಪತ್ರದಲ್ಲಿ ಹೆಸರು ವಿಳಾಸ ಇರಲಿಲ್ಲ. ಆ ಪತ್ರದಲ್ಲಿ `ನ್ನನ ಅಮ್ಮನಿಗೆ ಸಂಸ್ಥೆಯಲ್ಲಿ ಅಧಿಕಾರಿಗಳು ಕಿರುಕುಳ ನೀಡುತ್ತಾರೆ. ನಿಗದಿತ ಅವಧಿಗಿಂತ ಹೆಚ್ಚು ಕಾಲ ದುಡಿಸುತ್ತಾರೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ...~ ಎಂಬ ಆರೋಪಗಳನ್ನು ಮಾಡಲಾಗಿತ್ತು.

`ಪತ್ರದಲ್ಲಿ ಹೆಸರು, ವಿಳಾಸ ಇಲ್ಲದಿರುವುದರಿಂದ ನಾವೇನೂ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಹೆಸರು ಸಹಿತ ದೂರು ನೀಡಿ ಎಂದು ಪತ್ರಿಕಾ ಪ್ರಕಟಣೆ ನೀಡಿದೆವು. ಯಾರೂ ದೂರು ನೀಡಿಲ್ಲ~ ಎಂದು ಸಮಿತಿಯ ಅಧ್ಯಕ್ಷೆ ಎಚ್.ಕೆ. ಲಲಿತಾದೇವಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

`ಮಹಿಳೆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ದೂರು ನೀಡಲು ಮುಂದಾಗುತ್ತಾಳೆ. ಸಣ್ಣಪುಟ್ಟ ಕಿರುಕುಳ ಸಹಿಸಿಕೊಂಡು, ಸಾಧ್ಯವಾದಷ್ಟು ಹೊಂದಿ ಕೊಂಡು ನಡೀತಾಳೆ, ಅದು ಸಾಧ್ಯವಾಗದಿದ್ದರೆ ಬೇರೆ ಇಲಾಖೆಗೆ ಅಥವಾ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾಳೆ. ಐವತ್ತು ಮೀರಿದ ಮಹಿಳೆಯಾದರೆ ಕೆಲಸವೇ ಸಾಕು ಎಂದು ಸ್ವಯಂ ನಿವೃತ್ತಿ ಪಡೆಯಲು ಮುಂದಾಗುತ್ತಾಳೆ~ ಎಂದು ಲಲತಾದೇವಿ ಅವರು ನುಡಿಯುತ್ತಾರೆ.

`ದೂರು ನಿವಾರಣೆಗೆ ಪ್ರತಿ ಜಿಲ್ಲೆಯಲ್ಲೂ ಇಂಥ ಸಮಿತಿ ರಚನೆಮಾಡಿ ಎಂಟು ವರ್ಷಗಳಾಗಿವೆ. ಇಂಥ ಸಮಿತಿ ಇದೆ ಎಂಬುದು ಸರ್ಕಾರಿ ಕಚೇರಿಯಲ್ಲಿ ದುಡಿಯುವ ಪ್ರತಿಯೊಬ್ಬ ಮಹಿಳೆಗೂ ಗೊತ್ತಿದೆ. ಆದರೆ ದೂರು ಕೊಡಲು ಬಹಳ ಮಂದಿ ಬರುತ್ತಿಲ್ಲ~ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಚಿದಾನಂದ.

ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತದೆ ಎಂಬ ದೂರುಗಳಿವೆ. ಕೆಇಬಿ, ಕೆಎಸ್ಆರ್ಟಿಸಿ ಮುಂತಾದ ವಿವಿಧ ಇಲಾಖೆಗಳಲ್ಲಿ ಇಂಥ ಸಾಕಷ್ಟು ಪ್ರಕರಣಗಳು ಸದ್ದಿಲ್ಲದೆ ಮುಚ್ಚಿ ಹೋಗುತ್ತಿವೆ. ಅಥವಾ ಮಹಿಳೆಯರ ರೋದನ ಇಲಾಖೆಗಳ ಗೋಡೆ ದಾಟಿ ಆಚೆ ಬರುತ್ತಿಲ್ಲ.

`ನನಗೆ ಪತಿ, ಮಗು ಮುಖ್ಯ~
ಹಾಸನದಲ್ಲಿ ಹಿರಿಯ ಅಧಿಕಾರಿಯ ಕಿರುಕುಳ ತಾಳದೆ ಮಹಿಳೆಯೊಬ್ಬರು ದೂರು ನಿವಾರಣಾ ಸಮಿತಿಗೆ ದೂರು ನೀಡಿದರು. ತನಿಖೆ ಆರಂಭವಾಗಿ ಹಲವು ಸುತ್ತಿನ ವಿಚಾರಣೆ ನಡೆಯಿತು. ಇನ್ನೇನು ಅಧಿಕಾರಿಗೆ ಶಿಕ್ಷೆಯಾಗುವುದು ನಿಶ್ಚಿತ ಎಂಬ ಸ್ಥಿತಿ ಬಂತು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೊನೆಯ ಸುತ್ತಿನ ವಿಚಾರಣೆ ನಡೆಯಬೇಕಿತ್ತು. ವಿಚಾರಣೆಯ ದಿನ ಬೆಳಿಗ್ಗೆ ಅದೇ ಮಹಿಳೆ ಇನ್ನೊಂದು ಅರ್ಜಿ ಸಲ್ಲಿಸಿದರು.

ಅದರಲ್ಲಿ `ಮಾನವೀಯತೆಯ ಹಿನ್ನೆಲೆಯಲ್ಲಿ ನಾನು ಕೊಟ್ಟ ದೂರು ಹಿಂತೆಗೆದುಕೊಳ್ಳುತ್ತೇನೆ~ ಎಂಬ ಒಕ್ಕಣೆ ಇತ್ತು. ಅಧಿಕಾರಿಗಳ ಯಾವ ಸಾಂತ್ವನಕ್ಕೂ ಮಹಿಳೆ ಒಪ್ಪದಿದ್ದಾಗ ದೂರು ವಜಾ ಮಾಡಲಾಯಿತು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ಈ ಸಂಬಂಧ ಆ ಮಹಿಳೆಯನ್ನು ರಹಸ್ಯವಾಗಿ ವಿಚಾರಿಸಿದಾಗ. ಆಕೆಯ ಮಗ ಹಾಗೂ ಪತಿಗೆ ಜೀವ ಬೆದರಿಕೆ ಹಾಕಿರುವ ವಿಷಯ ಬಹಿರಂಗವಾಯಿತು. ಈ ಕಾರಣ ಆಕೆ ದೂರು ವಾಪಸ್ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.