ಮಾಟ, ಮಂತ್ರಗಳಿಗೆ ಹೆದರಬಾರದು: ಪೇಜಾವರ ಶ್ರೀ ಸಲಹೆ

7

ಮಾಟ, ಮಂತ್ರಗಳಿಗೆ ಹೆದರಬಾರದು: ಪೇಜಾವರ ಶ್ರೀ ಸಲಹೆ

Published:
Updated:ರಾಯಚೂರು: ಜನತೆಯ ಹಿತಕ್ಕಾಗಿ ಒಳ್ಳೆಯ ಕೆಲಸ ಮಾಡುವವರು ಮಾಟ ಮಂತ್ರಕ್ಕೆ ಹೆದರಬಾರದು ಎಂದು ಉಡುಪಿ ಪೇಜಾವರಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು ನುಡಿದರು.ಇಲ್ಲಿನ ಮುಂಗ್ಲಿ ಪ್ರಾಣದೇವರ ದೇವಸ್ಥಾನದಲ್ಲಿ ನಡೆಯುತ್ತಿರುವ ಹರಿದಾಸ ನಮನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.“ಮಾಟ-ಮಂತ್ರದಿಂದ ಏನೂ ಆಗುವುದಿಲ್ಲ. ಯಾವುದೇ ಹಾನಿಯೂ ಇಲ್ಲ. ಅಭಿವೃದ್ಧಿ ಮತ್ತು ಕರ್ತವ್ಯನಿಷ್ಠೆಯಿಂದ ಜನಸೇವಾ ಕಾರ್ಯದಲ್ಲಿ ನಿರತರಾಗಬೇಕು. ಮುಖ್ಯಮಂತ್ರಿಗಳು ಈ ದಿಸೆಯಲ್ಲಿ ನಡೆಯಬೇಕು” ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry