ಮಾತುಗಳೀಗ ಮರೆಯಾಗಿ ಹೋಗಿವೆ. ಅರೆಬರೆ ಶಬ್ದಗಳಲ್ಲಿ ಟೆಕ್ಸ್ಟ್ ಮಾಡುವವರಲ್ಲಿ ಮಾತಿಗೆ ಬರ ಬಿದ್ದಿದೆ. ಅದೊಂದು ಬಗೆಯ ಅನಾರೋಗ್ಯವೆಂದೇ ಹೇಳಬಹುದು. ಆದರೆ ಇನ್ನಷ್ಟು ಮಾತುಗಳು ಸ್ವಸ್ಥಮನಸಿನ ಮಾತುಗಳಾಗಿರುವುದಿಲ್ಲ.

ಯಾರನ್ನೋ ಆಡಿಕೊಳ್ಳಲೆಂದೇ ಇರುತ್ತವೆ. ಕೆಲವರಿಗೆ ಈ ಮಾತುಗಳನ್ನು ಬಿಟ್ಟರೆ ಮತ್ತೇನೂ ರುಚಿಸದು. ನಾಲಗೆ ಆಡದು. ಹರಿಬಿಟ್ಟ ನಾಲಗೆ ಒಂದಿಬ್ಬರ ಕುರಿತಾದರೂ, ಅವರ ಚಾರಿತ್ರ್ಯದ ಬಗ್ಗೆಯಾದರೂ ಮಾತನಾಡಿದರೆ ಪಾಪ... ಅವರು ಉಂಡಿದ್ದು ಅರಗುವುದೇ ಇಲ್ಲ. ಅಂಥವರಿಗೊಂದು ಎಚ್ಚರವಿರಬೇಕು. ಶಬ್ದಗಳು ಪ್ರಯಾಣ ಮಾಡುತ್ತವೆ. ಮೂರು ಬಾಯಿಗಳಲ್ಲಿ ಆರು ಕಿವಿಗಳಿದ್ದರೆ, ಆ ಬಾಯಿಗಳು ನೂರು ಕಿವಿಗಳಿಗೆ ರಸದೌತಣ ನೀಡುತ್ತವೆ.

ನೀವು ಬೆನ್ನು ತಿರುವಿದ ನಂತರ ನೀವೇ ಅವರಿಗೆ ರಸಗವಳ ಎನ್ನುವುದಂತೂ ನಿಜ. ಗಾಳಿ ಸುದ್ದಿ ಹಬ್ಬುವವರ ಮನಃಸ್ಥಿತಿಯೇ ಅಂಥದ್ದು. ಆ ಕ್ಷಣಕ್ಕೆ ಅವರ ನಾಲಗೆಯ ತೀಟೆ ತೀರಿದರೆ ಮುಗೀತು. ಮುಂದಿನ ಕ್ಷಣ ಮತ್ತಾರು ಎಂಬ ಯೋಚನೆಯಲ್ಲಿರುತ್ತಾರೆ. ಕೆಲವೊಮ್ಮೆ ತಮ್ಮ ಪ್ರತಿಸ್ಪರ್ಧಿಗಳೆಂದು ಭಾವಿಸಿದವರ ಸುತ್ತಲೇ ಗಿರಕಿ ಹೊಡೆಯುತ್ತಾರೆ. ಇಂಥವರಿಗೆಲ್ಲ ಗಾಳಿಸುದ್ದಿಗೂ ಕೆಲವು ನಿಯಮಗಳಿವೆ ಎಂದು ಗೊತ್ತಿರಲಿಕ್ಕಿಲ್ಲ.

ಹೀಗೆ ಮಾತು, ಬರೀಮಾತು, ಪಿಸುಮಾತುಗಳಲ್ಲಿ ನಿರತರಾದವರಿಗೆ ಒಂದು ಸಣ್ಣ ಎಚ್ಚರವಿರಲಿ ಎನ್ನುತ್ತಾರೆ ಘುಟೆನ್ಬರ್ಗ್ ವಿಶ್ವವಿದ್ಯಾಲಯದ ತಜ್ಞರು. ಸಾರಾಜೇನ್ ಎಂಬ ಸಂಶೋಧಕಿ ಗಾಳಿ ಸುದ್ದಿ ಹರಡುವವರ ಮನಃಸ್ಥಿತಿಯ ಬಗ್ಗೆ 2012ರಿಂದ ಅಧ್ಯಯನ ಕೈಗೊಂಡಿದ್ದಾರೆ. ಸಾಮಾನ್ಯವಾಗಿ ಸುದ್ದಿ ಹರಡುವವರು ಅದರ ಪರಿಣಾಮದ ಬಗ್ಗೆ ಯೋಚಿಸಿರುವುದಿಲ್ಲ. ಆ ಮಾತುಗಳು ಪಯಣ ಮಾಡುತ್ತವೆ ಎಂಬುದರ ಬಗ್ಗೆಯೂ ಅವರಿಗೆ ಗಮನವಿರುವುದಿಲ್ಲ.

ಆ ಕ್ಷಣಕ್ಕೆ ಅನಿಸಿದ್ದನ್ನು ಆಡಿ ನಕ್ಕರೆ ಮುಗಿದೇ ಹೋಯಿತು ಅಂತ ನೀವಂದುಕೊಂಡಿದ್ದರೆ ಸುಳ್ಳು. ಅವರು ಮೊದಲು ಯೋಚಿಸುತ್ತಾರೆ. ನಂತರ ಆಡುತ್ತಾರೆ. ಆನಂತರ ಅದನ್ನೇ ಸತ್ಯವೆಂದು ನಂಬುತ್ತಾರೆ. ಇತರರಿಗೂ ನಂಬಿಸಲು ಯತ್ನಿಸುತ್ತಾರೆ. ಕೇಳಿ ಬೇಕಾದರೆ... ನನ್ನ ಬಳಿ ಎಲ್ಲ ಬಗೆಯ ಪುರಾವೆಗಳಿವೆ ಎಂದೂ ಹೇಳುತ್ತಾರೆ. ತಮ್ಮ ಮಾತನ್ನು ನಂಬಿದವರ ಬಳಿ ನಕ್ಕು ಹಗುರಾಗುವ ಇವರು, ಮಾತನ್ನು ಕೇಳದಿದ್ದರೆ ಅಸಹನೆಯಿಂದ ಕುದಿಯುತ್ತಿರುತ್ತಾರೆ.

ಆಗ ಮಾತಿನ ಗುರಿ ಇವರನ್ನು ನಿರ್ಲಕ್ಷಿಸಿದವರತ್ತ ಹೊರಳಿರುತ್ತದೆ. ಗಾಳಿಮಾತು, ಪಿಸುಮಾತು, ಹಗುರವಾದ ಮಾತುಗಳನ್ನಾಡುವವರ ಇನ್ನೊಂದು ಮುಖ್ಯ ಗುಣವೆಂದರೆ ಅವರು ಯಾರಿಗೂ ಆತ್ಮೀಯರಾಗಿರಲಾರರು. ಅವರ ಆತ್ಮೀಯರನ್ನು ಉಳಿಸಿಕೊಳ್ಳಲೂ ಅಸಮರ್ಥರು. ಇನ್ನೊಬ್ಬರ ಬಗ್ಗೆ ಬಡಬಡಿಸುವ ಮುನ್ನ ನೀವು ಏಕಾಂಗಿಗಳೇ ಎಂಬುದನ್ನು ಒಮ್ಮೆ ಪರಿಶೀಲಿಸಿ ಎನ್ನುತ್ತಾರೆ ತಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.