ಸೋಮವಾರ, ಜನವರಿ 20, 2020
20 °C

ಮಾತು ಮುಗಿಸಿದ ‘ಪ್ರೀತಿ ಗೀತಿ ಇತ್ಯಾದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಗರಾಜ್‌ ಭಟ್ಟರ ಗರಡಿಯಲ್ಲಿ ಬೆಳೆದ ವೀರೇಂದ್ರ ನಿರ್ದೇಶನದ ಮೊದಲ ಚಿತ್ರ ‘ಪ್ರೀತಿ ಗೀತಿ ಇತ್ಯಾದಿ’ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.ನಿರ್ದೇಶಕ ಪವನ್‌ ಒಡೆಯರ್‌ ನಾಯಕರಾಗಿ ನಟಿಸಿರುವ ಚಿತ್ರವಿದು. ಸಂಗೀತಾ ಭಟ್‌ ಅವರಿಗೆ ನಾಯಕಿ. ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಮುಂತಾದೆಡೆ ಚಿತ್ರೀಕರಣ ನಡೆಸಲಾಗಿದೆ. ವಿಜಯಕುಮಾರ್ ಈ ಚಿತ್ರದ ನಿರ್ಮಾಪಕರು.ವೀರ ಸಮರ್ಥ ಸಂಗೀತ ನೀಡಿದ್ದಾರೆ. ಭಾಸ್ಕರ್ ರೆಡ್ಡಿ ಛಾಯಾಗ್ರಹಣ ಚಿತ್ರಕ್ಕಿದೆ. ರಂಗಾಯಣ ರಘು, ವಿನಯಾ ಪ್ರಕಾಶ್, ಇತರರು ತಾರಾಗಣದಲ್ಲಿ ಇದ್ದಾರೆ.

ಪ್ರತಿಕ್ರಿಯಿಸಿ (+)