ಬೆಂಗಳೂರು: ನೀರು ಶುದ್ಧೀಕರಣ ಸಾಧನಗಳ ಮಾರಾಟವನ್ನು ದಕ್ಷಿಣ ಭಾರತದಲ್ಲಿ ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ ಎಂದು `ಕೆಂಟ್ ಆರ್ಒ~ ಕಂಪೆನಿ ಅಧ್ಯಕ್ಷ ಮಹೇಶ್ ಗುಪ್ತ ಹೇಳಿದರು.

ನಗರದಲ್ಲಿ `ಕೆಂಟ್ ಆರ್ಒ~ದ ದಕ್ಷಿಣ ಭಾರತ ವಲಯ ಕಚೇರಿ ಆರಂಭಿಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ದಕ್ಷಿಣ ಭಾರತದಲ್ಲಿನ ಮೊದಲ ವಲಯ ಕಚೇರಿ. ಈ ಕಚೇರಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪುದುಚೆರಿ, ಅಂಡಮಾನ್-ನಿಕೊಬಾರ್ ದ್ವೀಪಗಳಲ್ಲಿನ ವಹಿವಾಟು ನೋಡಿಕೊಳ್ಳಲಿದೆ ಎಂದರು.

ಬೆಂಗಳೂರಿನಲ್ಲಿ ಇತ್ತೀಚೆಗೆ ಅಂತರ್ಜಲ ಬಳಕೆ ಹೆಚ್ಚಿದ್ದು, ಬಹಳಷ್ಟು ಕಡೆ ಉಪ್ಪಿನಂಶವಿರುವ ನೀರೇ ಲಭಿಸುತ್ತಿದೆ. ಇದರಿಂದ ನಮ್ಮ `ಆರ್ಒ~ (ರಿವರ್ಸ್ ಓಸ್ಮೊಸಿಸ್) ತಂತ್ರಜ್ಞಾನ ಅಳವಡಿಸಿದ ನೀರು ಶುದ್ಧೀಕರಣ ಸಾಧನಗಳ ಮಾರಾಟವೂ ಹೆಚ್ಚಿದೆ ಆರ್ಒ ವಿಭಾಗದ ಮಾರುಕಟ್ಟೆಯಲ್ಲಿ `ಕೆಂಟ್ ಆರ್ಒ~ ಪಾಲು ಶೇ 50ರಷ್ಟಕ್ಕೆ ಹೆಚ್ಚಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ದೇಶದ ನೀರು ಶುದ್ಧೀಕರಣ ಸಾಧನಗಳ ಮಾರುಕಟ್ಟೆ ಆರ್ಒ, ಅಲ್ಟ್ರಾವಾಯ್ಲೆಟ್ ಮತ್ತು ಗ್ರಾವಿಟಿ ವಾಟರ್ ಪ್ಯೂರಿಫೈಯರ್ ಎಂದು 3 ಬಗೆಯಲ್ಲಿದ್ದು, ಶೇ 20ರ ಪ್ರಮಾಣದಲ್ಲಿ ಬೆಳವಣಿಗೆ ಕಾಣುತ್ತಿದೆ. ಒಟ್ಟಾರೆ ಮಾರುಕಟ್ಟೆ ಗಾತ್ರ ರೂ 1600 ಕೋಟಿಯದ್ದಾಗಿದೆ. `ಕೆಂಟ್ ಆರ್ಒ~ ಕಳೆದ ವರ್ಷ ರೂ 330 ಕೋಟಿ ವಹಿವಾಟು ನಡೆಸಿ ಮಾರುಕಟ್ಟೆಯಲ್ಲಿ ಶೇ 20.65ರಷ್ಟು ಪಾಲು ಪಡೆದಿದೆ.

`ಆರ್ಒ~ ವಿಭಾಗದ ಮಾರುಕಟ್ಟೆಯಲ್ಲಿ ಕೆಂಟ್ ಪಾಲು ಶೇ 40ರಷ್ಟಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಾರುಕಟ್ಟೆಯಲ್ಲಿ ಕೆಂಟ್ ಮಾರಾಟ ಉತ್ತಮವಾಗಿದೆ. ಕರ್ನಾಟಕದ ರೂ 100 ಕೋಟಿ ಮೌಲ್ಯದ ಮಾರುಕಟ್ಟೆಯಲ್ಲಿ ಕೆಂಟ್ ರೂ 35 ಕೋಟಿಯಷ್ಟು ಪಾಲು ಹೊಂದಿದೆ ಎಂದು ವಿವರಿಸಿದರು.

ನೊಯಿಡಾದಲ್ಲಿ ಕಂಪೆನಿಯ ಪ್ರಧಾನ ಕಚೇರಿಯಿದ್ದು, ಒಟ್ಟು 1800 ಮಂದಿ ಸಿಬ್ಬಂದಿ ಇದ್ದಾರೆ ಎಂದ ಗುಪ್ತ, ದಕ್ಷಿಣ ಭಾರತದಲ್ಲಿ ತಯಾರಿಕಾ ಘಟಕ ಆರಂಭಿಸುವ ಯೋಚನೆ ಸದ್ಯಕ್ಕಿಲ್ಲ ಎಂದರು. ಇದಕ್ಕೂ ಮುನ್ನ ಕೆಂಟ್ ವಲಯ ಕಚೇರಿಯನ್ನು ಶ್ರೀಶ್ರೀರವಿಶಂಕರ್ ಗುರೂಜಿ ಉದ್ಘಾಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.