ನ್ಯೂಯಾರ್ಕ್ (ಪಿಟಿಐ): ನಾಸಾ ನಿರ್ಮಿತ `ಮಾರ್ಸ್ ರೋವರ್~, ಕೆಂಪು ಕಾಯ ಮಂಗಳನ ಅಂಗಳದ ಮೇಲೆ ಆ.6ರಂದು ಇಳಿಯಲಿರುವ ಘಟನಾವಳಿಗಳನ್ನು ಇಲ್ಲಿನ ಟೈಮ್ಸ ಸ್ಕ್ವೇರ್ನಲ್ಲಿ ದೊಡ್ಡ ಪರದೆ ಮೇಲೆ ನೇರ ಪ್ರಸಾರ ಮಾಡಲಾಗುವುದು.

`ಟೈಮ್ಸ ಸ್ಕ್ವೇರ್ ಇತಿಹಾಸದ ಹಲವು ಪ್ರಮುಖ ವಿದ್ಯಮಾನಗಳಿಗೆ ಸಾಕ್ಷಿಯಾದ ತಾಣವಾಗಿದೆ. 250 ಕೋಟಿ ಡಾಲರ್ ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಯ ಈ ಪ್ರಮುಖ ಘಟನಾವಳಿಯನ್ನು ನೇರ ಪ್ರಸಾರ ಮಾಡಲು ಇದಕ್ಕಿಂತ ಸೂಕ್ತ ತಾಣ ಮತ್ತೊಂದಿಲ್ಲ ಎಂಬುದು ನನ್ನ ಭಾವನೆ~ ಎಂದು ನಾಸಾದ ವೈಜ್ಞಾನಿಕ ಯಾನಗಳ ಸಹಾಯಕ ಆಡಳಿತಾಧಿಕಾರಿ ಜಾನ್ ಗ್ರನ್ಸ್ಫೆಲ್ಡ್ ಹೇಳಿಕೆ ನೀಡಿದ್ದಾರೆ.

ಮಂಗಳನ ಅತ್ಯಂತ ದೊಡ್ಡ ಕುಳಿ `ಗೇಲ್ ಕ್ರೇಟರ್~ನಲ್ಲಿ ಇಳಿಯಲಿರುವ ರೋವರ್, ಸುತ್ತಲ ಪ್ರದೇಶದಲ್ಲಿ ಎರಡು ವರ್ಷ ಕಾಲ ಉತ್ಖನನ ಹಾಗೂ ಶೋಧನೆ ನಡೆಸಲಿದೆ. ಅಲ್ಲಿನ ನೆಲದಲ್ಲಿ ಇರಬಹುದಾದ ನೀರಿನ ಸೆಲೆ ಹಾಗೂ ಜೀವದ ಅಸ್ತಿತ್ವಕ್ಕಾಗಿ ತಡಕಾಡಲಿದೆ.

2011ರ ನವೆಂಬರ್ನಲ್ಲಿ ಅಂಬರಕ್ಕೆ ಚಿಮ್ಮಿದ ರೋವರ್ನ್ನು `ಸ್ಕೈ ಕ್ರೇನ್~ ನೆರವಿನಿಂದ ಮಂಗಳ ಗ್ರಹದ ಮೇಲೆ ಇಳಿಸಲಾಗುವುದು. ಪಸಡೇನಾದಲ್ಲಿರುವ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ನಿಯಂತ್ರಣ ಕೇಂದ್ರವು ಈ ನೇರ ಪ್ರಸಾರದ ಹೊಣೆ ಹೊತ್ತಿದೆ.

ರೋವರ್ ಯಶಸ್ವಿಯಾಗಿ ಮಂಗಳನ ಮೇಲೆ ಇಳಿದಿದ್ದೇ ಆದರೆ, ಅಲ್ಲಿಂದ ಬರುವ ಮೊತ್ತಮೊದಲ ಸಂಕೇತವನ್ನು ವಿಜ್ಞಾನಿಗಳು ಸ್ವೀಕರಿಸುವುದನ್ನು ಕೂಡ ವೀಕ್ಷಕರು ನೋಡಬಹುದು.

ಈ ಮೂಲಕ `ಕ್ಷಣ ಮಾತ್ರವೂ ನಿದ್ರಿಸದ ನಗರ~ವೆಂದೇ ಹೆಸರಾದ ನ್ಯೂಯಾರ್ಕ್ ನಾಗರಿಕರಿಗೆ ಹಾಗೂ ಪೂರ್ವಯೋಜಿತವಾಗಿ ಅಲ್ಲಿಗೆ ತೆರಳುವವರಿಗೆ ಮಹತ್ವದ ಅಂತರಿಕ್ಷ ಯೋಜನೆಯೊಂದರ ಅತಿ ಪ್ರಮುಖ ಕ್ಷಣಗಳನ್ನು ಕಣ್ತುಂಬಿಕೊಳ್ಳುವ ಸದವಕಾಶ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.