ತೀರ್ಥಹಳ್ಳಿ: ಹಲವು ದಶಕಗಳ ಚಂಗಾರು ಸೇತುವೆ ಕನಸು ಇನ್ನೂ ಈಡೇರಿಲ್ಲ. ಕಣ್ಣಳತೆಯಲ್ಲಿ ಕಾಣುವ ಶಾಲೆಯ ದಾರಿ ತಲುಪಲು ಇಲ್ಲಿನ ವಿದ್ಯಾರ್ಥಿಗಳು ಕನಿಷ್ಠ 20 ಕಿಲೋಮೀಟರ್ ಕ್ರಮಿಸಬೇಕಿದೆ. ತುಂಬಿದ ನದಿ ದಾಟಲು ಇದ್ದ ದೋಣಿಗೆ ನಾವಿಕನಿಲ್ಲ. ಈ ಊರಿನ ಜನರ ಗೋಳಿಗೆ ಕೊನೆಯೇ ಇಲ್ಲದಂತಾಗಿದೆ.

ಇದು ಆಗುಂಬೆ ಹೋಬಳಿಯ ಚಂಗಾರು, ಹೊಸಪೇಟೆ, ಕುಂದಾ ಗ್ರಾಮದ ಗ್ರಾಮಸ್ಥರ ನಿತ್ಯದ ಗೋಳಿನ ಕಥೆ. ಚಂಗಾರು, ಹೊಸಪೇಟೆ ಸಮೀಪ ಹಾದು ಹೋಗುವ ಮಾಲತಿ ನದಿ ಈಗ ತುಂಬಿ ಹರಿಯುತ್ತಿದೆ. ಹಿಂದಿನಿಂದಲೂ ಬಳಕೆಯಲ್ಲಿದ್ದ ನಾಡ ದೋಣಿ ಕೆಟ್ಟು ನಿಂತಿದೆ.

ಕಳೆದ ವರ್ಷ ನದಿ ದಾಟಲು ಅನುಕೂಲವಾಗಲೆಂದು ಫೈಬರ್ ದೋಣಿಯನ್ನು ಜಿಲ್ಲಾಡಳಿತ ನೀಡಿದ್ದರೂ ಇದನ್ನು ನಡೆಸಲು ನಾವಿಕನಿಲ್ಲದಂತಾಗಿದೆ. ನದಿಯ ಇಕ್ಕೆಲೆಯಲ್ಲಿನ ಹೊನ್ನೇತಾಳು ಗ್ರಾಮ ಪಂಚಾಯ್ತಿ ಹಾಗೂ ಆರೇಹಳ್ಳಿ ಗ್ರಾಮ ಪಂಚಾಯ್ತಿ ಆಡಳಿತ ನದಿ ದಾಟಿಸುವ ವ್ಯವಸ್ಥೆಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರು ಗ್ರಾಮಸ್ಥರದ್ದು.

ಮಾಲತಿ ನದಿಗೆ ಚಂಗಾರು ಸೇತುವೆ ನಿರ್ಮಾಣವಾಗಿದ್ದರೆ ನದಿಯ ಇಕ್ಕೆಲಗಳ ಕಮ್ಮರಡಿ, ಸುರಳೀಬೈಲು, ಹುಂಚಿಕೊಪ್ಪ, ಹೊಸಕೊಪ್ಪ, ಕುಂದಾ, ಚಂಗಾರು, ಹಾಲ್ಕುಂದ ಕರಡಿಕೋಡು ಸೇರಿದಂತೆ ಅನೇಕ ಹಳ್ಳಿಗಳ ಜನರು ತೀರ್ಥಹಳ್ಳಿ ತಲುಪಲು 8 ಕಿ.ಮೀ. ಪ್ರಯಾಣ ಬೆಳೆಸಿದರೆ ಸಾಕಿತ್ತು. ಈಗ ಕಲ್ಮನೆ ಸೇತುವೆ ಸುತ್ತಿಬಳಸಿ 20 ಕಿ.ಮೀ ಪ್ರಯಾಣಿಸಬೇಕಾಗಿದೆ.

ಸರ್ಕಾರ ಫೈಬರ್ ದೋಣಿ ನೀಡಿದ್ದರೂ ದೋಣಿ ನಡೆಸುವ ನಾವಿಕನನ್ನು ನೇಮಕ ಮಾಡಿಲ್ಲ. ಆತನ ಕೆಲಸಕ್ಕೆ ಹಣ ನೀಡುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ನದಿ ದಡದ ಎರಡು ಗ್ರಾಮ ಪಂಚಾಯ್ತಿಗಳು ಈ ಹೊಣೆಗಾರಿಕೆಯಿಂದ ದೂರ ಉಳಿದಿವೆ.

ಹಿಂದಿನಿಂದಲೂ ಅಂಬಿಗನಿಗೆ ಗ್ರಾಮಸ್ಥರು ವರ್ಷಕ್ಕೆ ಇಂತಿಷ್ಟು ಹಣ, ಅಥವಾ ತಾವು ಬೆಳೆದ ಭತ್ತವನ್ನು ಮನೆಗೆ ಇಂತಿಷ್ಟು ಎಂದು ನೀಡುವ ಪರಿಪಾಠವಿತ್ತು. ಈಗ ಈ ಪದ್ಧತಿ ಉಳಿದಿಲ್ಲ. ಗ್ರಾಮ ಪಂಚಾಯ್ತಿ ಆಡಳಿತ ಅಥವಾ ತಾಲ್ಲೂಕು, ಜಿಲ್ಲಾಡಳಿತ ಅಂಬಿಗನ ಸೇವೆಯನ್ನು ಪರಿಗಣಿಸಿ ಆತನಿಗೆ ವೇತನ ನೀಡುವ ಗೋಜಿಗೆ ಹೋಗದೇ ಇದ್ದುದರಿಂದ ಈ ಕೆಲಸಕ್ಕೆ ಯಾರೂ ಮುಂದೆ ಬರುತ್ತಿಲ್ಲ.

ಈಗ ಮಳೆಗಾಲ ಆರಂಭವಾಗಿದೆ. ಚಂಗಾರು, ಹೊಸಪೇಟೆ, ಕುಂದಾ ಸೇರಿದಂತೆ ಅನೇಕ ಗ್ರಾಮದ ಜನರು ನದಿ ದಾಟಿ ಆರೇಹಳ್ಳಿ, ಕಮ್ಮರಡಿ ಭಾಗದ ಶಾಲೆಗಳಿಗೆ ಹೋಗುವಂತಿಲ್ಲ. ಕಡ್ತೂರು ಕಮ್ಮರಡಿ, ಅರೇಹಳ್ಳಿ ಭಾಗದವರು ಹೊಸಪೇಟೆಕಡೆಗೆ ತೆರಳುವಂತಿಲ್ಲ. ಪ್ರತಿ ಚುನಾವಣೆಯಲ್ಲಿ ಈ ಭಾಗದ ಜನರು ಚಂಗಾರು ಸೇತುವೆ ನಿರ್ಮಾಣ ಮಾಡುವಂತೆ ಆಗ್ರಹಿಸಿ ಚುನಾವಣಾ ಬಹಿಷ್ಕಾರ

ಹಾಕುತ್ತಲೇ ಬಂದಿದ್ದಾರೆ. ಆ ಕ್ಷಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ಈ ಚುನಾವಣೆ ನಂತರ ಸೇತುವೆಯನ್ನು ಮಂಜೂರು ಮಾಡಿಸುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ, ಚಂಗಾರು ಸೇತುವೆ ನಿರ್ಮಾಣದ ಕನಸು ಚಿಗುರಲೇ ಇಲ್ಲ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಡಳಿತದಲ್ಲಿ ಚಂಗಾರು ಸೇತುವೆ ನಿರ್ಮಾಣಕ್ಕೆ ್ಙ3 ಕೋಟಿ ಹಣ ಮಂಜೂರು ಮಾಡಿದ್ದರೂ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಹಣ ಇಲ್ಲವೆಂದು ಘೋಷಿತ ಹಣವನ್ನು ಬಿಡುಗಡೆಗೊಳಿಸದೇ ರದ್ದುಗೊಳಿಸಿತು.

ಈ ಭಾಗದಲ್ಲಿ ಸುಮಾರು 30 ರಿಂದ 40 ಮಂದಿ ವಿದ್ಯಾರ್ಥಿಗಳು ಪ್ರತಿ ನಿತ್ಯ ಕಮ್ಮರಡಿ, ತೀರ್ಥಹಳ್ಳಿಯ ಶಾಲೆ, ಕಾಲೇಜುಗಳಿಗೆ ತೆರಳು ತ್ತಾರೆ. ವಯೋವೃದ್ಧರು, ರೋಗಿಗಳ ಓಡಾಟಕ್ಕೆ ಇಂದಿಗೂ ಮಳೆಗಾಲದಲ್ಲಿ ದೋಣಿಯನ್ನೇ ಅವಲಂಭಿಸಿದ್ದಾರೆ. ಇವರ ನಿತ್ಯದ ಗೋಳು ಅಂಬಿಗನಿಲ್ಲದ ದೋಣಿಯಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.