ಭಾನುವಾರ, ಜೂಲೈ 5, 2020
22 °C

ಮಾಲೀಕರನ್ನು ಕರೆದು ಚರ್ಚಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿ.ನರಸೀಪುರ: ಇಲ್ಲಿನ ಪಟ್ಟಣ ಪಂಚಾಯಿತಿಯಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ 23 ಮಳಿಗೆಗಳನ್ನು ಹರಾಜು ಮಾಡುವ ಸಂಬಂಧ ನ್ಯಾಯಾಲಯದಲ್ಲಿದ್ದ ಪ್ರಕರಣದ ತೀರ್ಪು ನೀಡಿದ್ದು, ಪೆಟ್ಟಿಗೆ ಅಂಗಡಿ ಮಾಲೀಕರನ್ನು ಕರೆದು ಚರ್ಚಿಸುವಂತೆ ಸೂಚನೆ ನೀಡಿದೆ ಎಂದು ಪ.ಪಂ ಮುಖ್ಯಾಧಿಕಾರಿ ವಿ.ಟಿ.ವಿಲ್ಸನ್ ತಿಳಿಸಿದರು.ಬುಧವಾರ ಅಧ್ಯಕ್ಷ ಬಸವಣ್ಣನವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಈ ಬಗ್ಗೆ ವಿವರ ನೀಡಿದ   ಅವರು ಖಾಸಗಿ ಬಸ್ ನಿಲ್ದಾಣದಲ್ಲಿರುವ ಪಟ್ಟಣ ಪಂಚಾಯಿತಿಯ ವಾಣಿಜ್ಯ ಮಳಿಗೆಗಳನ್ನು ವಿಲೇವಾರಿ ಮಾಡಲು ಪಪಂಗೆ ಸಂಪೂರ್ಣ ಅಧಿಕಾರ ನೀಡಿದೆ. ಉಚ್ಚ ನ್ಯಾಯಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಈ ಹಿಂದೆ  ಅಂಗಡಿ ಮಳಿಗೆಗಳನ್ನಿಟ್ಟುಕೊಂಡಿದ್ದ ಮಾಲೀಕರೊಂದಿಗೆ ಮಾತುಕತೆ ನಡೆಸಿ ಹಂಚಿಕೆ ವಿವಾದವನ್ನು  ಬಗೆಹರಿಸುಕೊಳ್ಳಲು ಕೌನ್ಸಿಲ್‌ನಲ್ಲಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.ಬಸ್ ನಿಲ್ದಾಣದಲ್ಲಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸುವ ವೇಳೆ ಹಾಲಿ ಇದ್ದವರಿಗೆ ಮಳಿಗೆ ನೀಡುವ ಭರವಸೆಯನ್ನು ಈ ಹಿಂದೆ ಅಧ್ಯಕ್ಷರಾಗಿದ್ದ ರಾಜಶೇಖರ್ ನೀಡಿದ್ದರು. ಆ ನಂತರ ಮಳಿಗೆಗಳ ನಿರ್ಮಾಣದ ನಂತರ ಸರ್ಕಾರದ ಅದೇಶದಂತೆ ಮೀಸಲಾತಿ ಅನ್ವಯ ಹರಾಜು ಮಾಡಲು ಮುಂದಾದಾಗ ತೆರವು ಮಾಡಿದಂತಹ ಪೆಟ್ಟಿಗೆ  ಅಂಗಡಿಯವರು ತಮಗೆ ನೂತನ ಮಳಿಗೆಗಳನ್ನು ನೀಡಬೇಕು ಎಂದು ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಈ  ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪು ನೀಡಿ ಪಟ್ಟಣ ಪಂಚಾಯಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಿ ನಿಮ್ಮ  ನಿರ್ಣಯದಂತೆ ತೆರೆವುಗೊಂಡ ಪೆಟ್ಟಿಗೆ ಅಂಗಡಿ ಮಾಲೀಕರುಗಳನ್ನು ಕರೆದು ಚರ್ಚಿಸಿ ಮಳಿಗೆಗಳನ್ನು ಬಾಡಿಗೆಗೆ  ನೀಡಬಹುದು ಎಂದು ತಿಳಿಸಿದೆ ಎಂದು ಮಾಹಿತಿ ನೀಡಿದರು. ಅಧ್ಯಕ್ಷ ಬಸವಣ್ಣ ಮಾತನಾಡಿ, ಮಳಿಗೆಗಳ ವಿವಾದದಿಂದಾಗಿ ವಿಳಂಬವಾದ ಕಾರಣ ಕಳೆದ 3 ವರ್ಷಗಳಿಂದ ಲಕ್ಷಾಂತರ ರೂಪಾಯಿ ಆದಾಯ ನಷ್ಟವಾಗಿದೆ ಎಂದರು.ವಾರ್ಡ್‌ಗಳಲ್ಲಿ ಸರಿಯಾಗಿ ಅಭಿವೃದ್ಧಿ ಕೆಲಸಗಳಿಗೆ ಅನುದಾನ ದೊರಕುತ್ತಿಲ್ಲ. ಕೆಲವು ಕಡೆ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣವಾಗುತ್ತಿದೆ. ಪಪಂ ಗೆ ಸೇರಿದ ನಿವೇಶನಗಳು ಒತ್ತುವರಿಯಾದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಪಟ್ಟಣದ ಪ್ರಮುಖ ರಸ್ತೆಗಳೂ ದುಃಸ್ಥಿತಿಯಲ್ಲಿದೆ. ಅವುಗಳ ದುರಸ್ತಿ ಮಾಡಿಸುವಂತೆ  ಹಾಗೂ ರಸ್ತೆಗಳಲ್ಲಿ ಹಂದಿಗಳು ಹಾಗೂ ಹಸುಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು. ಪಟ್ಟಣ ಪ್ರಮುಖ ರಸ್ತೆಗಳನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಲು ಸಭೆಯಲ್ಲಿ ನಿರ್ಧರಿಸಲು ಲಿಂಕ್ ರಸ್ತೆ, ಮಾರುಕಟ್ಟೆ ರಸ್ತೆ, ನಂಜನಗೂಡು ರಸ್ತೆಗಳೆಲ್ಲವನ್ನೂ ತಾತ್ಕಾಲಿಕವಾಗಿ ಪಟ್ಟಣ ಪಂಚಾಯಿತಿ ಅನುದಾನದಲ್ಲಿ ದುರಸ್ತಿಗೊಳಿಸುವುದು ಬೇಡ, ಶಾಶ್ವತವಾಗಿ ಅಭಿವೃದ್ಧಿ ಪಡಿಸುವಂತೆ ಸದಸ್ಯರು ಮನವಿ ಮಾಡಿದರು.  ಪಟ್ಟಣದಲ್ಲಿ ವಿದ್ಯುತ್ ದ್ವೀಪಗಳ ನಿರ್ವಹಣೆಗೆ ಸೂರ್ಯ ಎಂಟರ್ ಪ್ರೈಸಸ್ ರವರಿಗೆ 1 ತಿಂಗಳಿಗೆ 38,700 ರೂಗಳನ್ನು ನೀಡಲಾಗುತ್ತಿದ್ದು ಇದನ್ನು ಹೆಚ್ಚುವರಿ ಮಾಡಿಕೊಡುವಂತೆ ಅವರು ಮಾಡಿರುವ ಮನವಿಗೆ ಸಭೆಯಲ್ಲಿ ನಿರ್ಣಯ ಕೈಗೊಂಡಿಲ್ಲ. ಉಪಾಧ್ಯಕ್ಷ ಟೆಂಪೊ ಮಹದೇವಣ್ಣ, ಸದಸ್ಯರಾದ ನಂಜುಂಡ ಸ್ವಾಮಿ, ಮಲ್ಲಿಕಾರ್ಜುನ (ಚಿಕ್ಕು) ಯಶೋಧಪುಟ್ಟರಾಜು, ಎಚ್.ರೇಣುಕಾ ರಾಮು, ಸುಚಿತ್ರಾ, ಪುಟ್ಟೀರಮ್ಮಮಹದೇವ, ಸುಶೀಲ, ಚಾಮಮ್ಮ,  ಮಲ್ಲೇಶ್, ಶಿವರಾಜು, ಎಂಜಿನಿಯರ್ ಪುರುಷೋತ್ತಮ್, ಯೋಜನಾಧಿಕಾರಿ ಕರಿಬಸವಯ್ಯ, ಆರೋಗ್ಯಾಧಿಕಾರಿ  ಹರೀಶ್ ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.