ಶಾಪಿಂಗ್ ಮಾಡಲು ಬಂದಿದ್ದ ಯುವಕರು, ಸಿನಿಮಾ ನೋಡಿ ಮನೆಗೆ ಹಿಂತಿರುಗುತ್ತಿದ್ದವರು ಒಮ್ಮೆಲೆ ಒಂದು ಕಡೆ ಜಮಾಯಿಸಿದರು. ಎಲ್ಲರೂ ಒಂದೆಡೆ ಸೇರಲು ಕಾರಣ ಅಬ್ಬರದ ಸಂಗೀತ ಕಛೇರಿ.

ಒರಾಯನ್ ಮಾಲ್ನಲ್ಲಿ `ಒರಾಯನ್ ವರ್ಲ್ಡ್ ಮ್ಯೂಸಿಕ್ ಫೆಸ್ಟ್' ಅಂಗವಾಗಿ `ಅಗಂ' ರಾಕ್ಬ್ಯಾಂಡ್ ಸಂಗೀತ ಕಛೇರಿ ಆಯೋಜಿಸಲಾಗಿತ್ತು. `ಬ್ರಹ್ಮಾಸ್ ಡ್ಯಾನ್ಸ್', `ಮಲ್ಹಾರ್ ಜಾಮ್' `ಸ್ವಾನ್ಸ್ ಆಫ್ ಸರಸ್ವತಿ', `ರುದ್ರ', `ಧನಶ್ರೀ ಥಿಲ್ಲಾನ', `ಪಾಥ್ ಆಫ್ ಆಸ್ಪರೈಷನ್ಸ್', ಮತ್ತು `ದಿ ಬೋಟ್ ಸಾಂಗ್' ಹೆಸರಿನ ವಿವಿಧ ಸಂಗೀತ ಸಂಯೋಜನೆಯ ಬೀಟ್ಗಳನ್ನು ಉಣಬಡಿಸಿದರು. ಯುವಕರಷ್ಟೇ ಅಲ್ಲದೇ ಎಲ್ಲ ವಯೋಮಾನದವರು ಫ್ಯೂಷನ್ ಸಂಗೀತವನ್ನು ಆಲಿಸಿದರು.

ಮೊದಲ ಬಾರಿ ಇಂಥ ಸಂಗೀತವನ್ನು ಕೇಳಿ ಆನಂದವಾಯಿತು. ಇಲ್ಲಿ ನುಡಿಸಿದ ಫ್ಯೂಷನ್ ಬೀಟ್ಗಳನ್ನು ಎಲ್ಲಿಯೂ ಕೇಳಿರಲಿಲ್ಲ. ನಾನು ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಕೇಳಿದ್ದೇನೆ. ಅದಕ್ಕೆ ಹೋಲಿಸಿದರೆ ಇಲ್ಲಿ ಹೆಚ್ಚು ಸಂಗೀತದ ಅಬ್ಬರವಿದೆ. ಒಟ್ಟಾರೆ `ಲವ್ಲಿ'ಯಾಗಿತ್ತು ಎಂದು ಅನುಭವ ಹಂಚಿಕೊಂಡರು ವಿದ್ಯಾರ್ಥಿ ಶ್ರುತಿ.

ಫ್ಯೂಷನ್ ಬ್ಯಾಂಡ್ ಆರಂಭವಾಗುತ್ತಿದ್ದಂತೆ ಶ್ರೋತೃಗಳ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ವಯೋವೃದ್ಧರು ಕುಳಿತು ಕೆಲವು ಸುಮಧುರ ಟ್ಯೂನ್ಗಳನ್ನು ಹಾಗೂ ಎನರ್ಜಿಟಿಕ್ ಬೀಟ್ಗಳನ್ನು ಆಲಿಸಿದರು.

`ಮಾಲ್ನಲ್ಲಿ ಶಾಪಿಂಗ್ ಮಾಡುತ್ತಿರುತ್ತಾರೆ, ಫುಡ್ಕೋರ್ಟ್ನಲ್ಲಿ ಇರುತ್ತಾರೆ. ಗಿಜಿಗುಡುವ ಸ್ಥಳದಲ್ಲಿ ಜನರನ್ನು ಆಕರ್ಷಿಸುವುದೆಂದರೆ ಸವಾಲಿನ ಕೆಲಸ. ಆದರೆ ಕೆಲವು ಗೀತೆಗಳನ್ನು ಹಾಡಿ ತಮ್ಮತ್ತ ಸೆಳೆದರೆ ನಾವೂ ಕೂಡ ಗುರುತಿಸಿಕೊಳ್ಳಲು ಸಾಧ್ಯ' ಎನ್ನುತ್ತಾರೆ ಬೇಸ್ಗಿಟಾರ್ ಕಲಾವಿದ ವಿಘ್ನೇಶ್.

ಆದರೆ ಇಂಥ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ಹೇಗೆ ನಿರ್ವಹಣೆ ಮಾಡಿದರು ಎಂಬುದು ಆಶ್ಚರ್ಯವಾಯಿತು, ನಾವು ನಡೆಸಿಕೊಟ್ಟ ಕಾರ್ಯಕ್ರಮಗಳಲ್ಲಿ ಇದು ಅತ್ಯುತ್ತಮ ಸಂಗೀತ ಕಛೇರಿ ಎಂದು ಮಾತು ಸೇರಿಸಿದರು.

ಹರೀಶ್ (ಗಾಯನ ಮತ್ತು ವಯಲಿನ್), ಪ್ರವೀಣ್ (ಗಿಟಾರ್), ಸ್ವಾಮಿ (ಕೀಬೋರ್ಡ್), ವಿಘ್ನೇಶ್ (ಬೇಸ್ ಗಿಟಾರ್), ಶಿವ (ಪಕ್ಕವಾದ್ಯ) ಅವರು ಫ್ಯೂಷನ್ ಸಂಗೀತ ಝರಿ ಹರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.