ಸೋಮವಾರ, ಮಾರ್ಚ್ 8, 2021
32 °C

ಮಾಲ್‌ ಸಂಸ್ಕೃತಿ ಒಳ ಹೊರಗೆ...

ಸುಮಲತಾ ಎನ್‌. Updated:

ಅಕ್ಷರ ಗಾತ್ರ : | |

ಮಾಲ್‌ ಸಂಸ್ಕೃತಿ ಒಳ ಹೊರಗೆ...

ಬೆಂಗಳೂರು ‘ಮಾಲ್‌ಗಳ ನಗರಿ’ ಆಗುವತ್ತ ಮುನ್ನುಗ್ಗುತ್ತಿದೆ. ಅಲ್ಲಿಂಲ್ಲೊಂದು ಮಾಲ್‌ಗಳು ತಲೆ ಎತ್ತುತ್ತಿರುವ ನಡುವೆ ಗ್ರಾಹಕರ ಶಾಪಿಂಗ್ ಸಂಸ್ಕೃತಿಯೂ ಬದಲಾಗುತ್ತಿದೆ.ಮಾಲ್‌ ವ್ಯಾಪಾರ ಮಾತ್ರವಲ್ಲ, ಗ್ರಾಹಕರ ನಿರೀಕ್ಷೆಗಳ ತಾಣ ಎನ್ನುವುದು ಇಂದಿನ ಮಾತು. ಈ ನಿಟ್ಟಿನಲ್ಲಿ ಮಾಲ್‌ನ ವ್ಯಾಪಾರ ವಹಿವಾಟುಗಳನ್ನು ಉನ್ನತ ದರ್ಜೆಗೇರಿಸಲು ‘ಮಾಲ್‌ ಮ್ಯಾನೇಜ್‌ಮೆಂಟ್’ ಎಂಬ ಪರಿಕಲ್ಪನೆ ಹುಟ್ಟಿಕೊಂಡಿದೆ. ಮಾಲ್‌ನ ಒಳ ಹೊರಗಿನ ಕುರಿತು ಮಾಹಿತಿ ಹಂಚಿಕೊಳ್ಳಲು ಬಂದಿದ್ದವರು ಪಯೊನೀರ್ ಪ್ರಾಪರ್ಟಿ ಝೋನ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಸುಂದರಂ. ಬೆಂಗಳೂರಿನ ಮಾಲ್‌ ವಹಿವಾಟು, ಇಲ್ಲಿನ ಗ್ರಾಹಕರ ನಿರೀಕ್ಷೆಗಳು, ಬದಲಾಗುತ್ತಿರುವ ಮಾಲ್‌ ಸಂಸ್ಕೃತಿ ಎಲ್ಲದರ ಕುರಿತೂ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬೆಂಗಳೂರಿನಲ್ಲಿ ಮಾಲ್‌ ಬಿಸಿನೆಸ್ ಹೇಗಿದೆ?

ಇದು ಕಾಸ್ಮೊಪಾಲಿಟನ್ ಸಿಟಿ ಆದ್ದರಿಂದ ಬಿಸಿನೆಸ್‌ ಬಗ್ಗೆ ಹೇಳುವಂತೆಯೇ ಇಲ್ಲ. ದಿನದಿನಕ್ಕೂ ಗ್ರಾಹಕರು ಲಕ್ಷಾಂತರ ಸಂಖ್ಯೆಯಲ್ಲಿ ಏರುತ್ತಿದ್ದಾರೆ. ಇಲ್ಲಿ ಅತಿ ವೇಗವಾಗಿ ಮಾಲ್‌ ಸಂಸ್ಕೃತಿ ಬೆಳೆಯುತ್ತಿದೆ. ಐಟಿ ಕ್ಷೇತ್ರ ಇಲ್ಲಿ ಬೇರೂರಿರುವುದರಿಂದ ಬಿಸಿನೆಸ್ ಸೋಲು ಕಾಣುವುದು ಕಡಿಮೆ.ಮಾಲ್‌ ಮ್ಯಾನೇಜ್‌ಮೆಂಟ್‌ ಎಂದರೇನು? ಇದರ ಪ್ರಾಮುಖ್ಯವೇನು?

ಮಾಲ್ ಮ್ಯಾನೇಜ್‌ಮೆಂಟ್‌ ಎಂದರೆ ಮಾಲ್‌ನ ಅತಿ ಸಣ್ಣ ಅವಶ್ಯಕತೆಯಿಂದ ಹಿಡಿದು ಅತಿ ದೊಡ್ಡ ಸಂಗತಿಗಳನ್ನೂ ಸರಳವಾಗಿ ನಿರ್ವಹಿಸುವಂಥದ್ದು ಹಾಗೂ ಅಚ್ಚುಕಟ್ಟಾಗಿ ನಡೆಸುವಂಥದ್ದು. ಆಲೋಚನೆಗಳನ್ನು ಕಾರ್ಯ ರೂಪಕ್ಕೆ ಇಳಿಸುವುದು ಹೇಗೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಯಾವ ನಗರದಲ್ಲಿ ಮಾಲ್‌ ಸ್ಥಾಪಿಸಬೇಕು, ಅದರ ವಿನ್ಯಾಸ, ಗ್ರಾಹಕರ ಅಭಿರುಚಿ ಇವೆಲ್ಲವೂ ಪ್ರಮುಖ ಪಾತ್ರ ವಹಿಸುತ್ತವೆ.ಭಾರತದಲ್ಲಿ ಮಾಲ್‌ ನಿರ್ವಹಣೆ ಕ್ಷೇತ್ರ ಹೇಗಿದೆ?

ಭಾರತದಲ್ಲಿ ಈ ಕ್ಷೇತ್ರ ಬೆಳೆಯಬೇಕಾದ್ದು ಸಾಕಷ್ಟಿದೆ. ಪರಿಣತರ ಅವಶ್ಯಕತೆ ಹೆಚ್ಚಾಗಿದೆ. ವೈಜ್ಞಾನಿಕವಾಗಿ ಮಾಲ್‌ಗಳನ್ನು ನಿರ್ವಹಿಸುವ ತಂತ್ರಜ್ಞತೆ ಇನ್ನೂ ಬೇಕಿದೆ.ಇಲ್ಲಿನ ಮಾಲ್‌ ಅಭಿವೃದ್ಧಿ ಬಗ್ಗೆ ಹೇಳಿ?

ಹತ್ತು ವರ್ಷಗಳಿಂದ ಸಾಕಷ್ಟು ಏರಿಕೆ ಕಂಡಿದೆ ಈ ಕ್ಷೇತ್ರ. ಫೋರಂ ಮಾಲ್‌ ಬಂದಾಗಿನಿಂದ ಒಂದೊಂದೇ ಮಾಲ್‌ಗಳು ತಲೆ ಎತ್ತಲು ಆರಂಭಿಸಿದವು. ಈಗ ಇನ್ನೂ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಮಾಲ್‌ಗಳಲ್ಲಿ ಮಲ್ಟಿಫ್ಲೆಕ್ಸ್‌ಗಳಿರಬಹುದು, ಫುಡ್‌ಕೋರ್ಟ್‌ಗಳಿರಬಹುದು, ಹೊಸ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಅವು ಯಶಸ್ವಿಯೂ ಆಗುತ್ತಿರುವುದು ಸಂತಸದ ಸಂಗತಿ.ಉತ್ತರ ಹಾಗೂ ದಕ್ಷಿಣ ಭಾರತದ ಮಾಲ್‌ಗಳಲ್ಲಿ ನೀವು ಕಂಡ ವ್ಯತ್ಯಾಸ?

ಉತ್ತರ ಭಾರತಕ್ಕಿಂದ ದಕ್ಷಿಣ ಭಾರತವೇ ಮುಂದಿದೆ. ಇದಕ್ಕೆ ಇಲ್ಲಿನ ಜೀವನಶೈಲಿಯೂ ಕಾರಣ.ಮಾಲ್‌ಗಳಲ್ಲಿ ತಂತ್ರಜ್ಞಾನ ಎಷ್ಟು ಪ್ರಾಮುಖ್ಯ?

ತಂತ್ರಜ್ಞಾನವಿಲ್ಲದ ಕ್ಷೇತ್ರವೇ ಇಲ್ಲ. ಇದು ಮಾಲ್‌ಗಳಿಗೆ ಹೆಚ್ಚು ಅನ್ವಯವಾಗುತ್ತದೆ. ಆದರೆ ಅದು ವ್ಯಾಪಾರಿಗಳ ಮೇಲೆ ಅವಲಂಬಿತವಾಗುತ್ತದೆ. ತಂತ್ರಜ್ಞಾನದ ಮೇಲೇ ಮಾಲ್‌ ವಿನ್ಯಾಸವೂ ಅವಲಂಬಿತ.ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಟ್ರೆಂಡ್‌ನಲ್ಲಿ ನೀವು ಗುರುತಿಸಿದ ವ್ಯತ್ಯಾಸಗಳೇನು?

ಜನರು ಬದಲಾಗಿದ್ದಾರೆ. ಅವರ ಜೀನವಶೈಲಿಯೂ ಬದಲಾಗಿದೆ. ಎಲ್ಲವೂ ಒಂದೆಡೆ ಸಿಗುವ ಮಾಲ್‌ಗಳನ್ನೇ ಜನ ಹೆಚ್ಚು ಇಷ್ಟ ಪಡುತ್ತಿದ್ದಾರೆ.ಮಾಲ್‌ ವ್ಯಾಪಾರ ವಹಿವಾಟು ಹೆಚ್ಚಲು ಅದರ ವಿನ್ಯಾಸದ ಪಾತ್ರವೇನು?

ವಿನ್ಯಾಸ ಎನ್ನುವುದು ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ಆ ಪ್ರಭಾವ ತಕ್ಷಣ ಗೊತ್ತಾಗುವುದಿಲ್ಲ. ಆದರೆ ಸ್ಥಳ ಚೆನ್ನಾಗಿದ್ದರೆ ಯಾರು ತಾನೆ ಮತ್ತೆ ಬರಲು ಬಯಸುವುದಿಲ್ಲ? ಇದು ಯಶಸ್ಸಿಗೆ ಒಂದು ದಾರಿ.ಜನರು ಕೆಲವೊಮ್ಮೆ ನೋಡಲು ಮಾತ್ರ ಮಾಲ್‌ಗೆ ಬರುತ್ತಾರೆ. ಇದು ಹೇಗೆ ಮಾಲ್‌ಗೆ ಸಹಾಯಕವಾಗುತ್ತದೆ?

ಇಂದು ವಿಂಡೋ ಶಾಪಿಂಗ್ ಮಾಡಿದವರು ನಾಳೆ ಖರೀದಿಸಲು ಬರುತ್ತಾರೆ ಅಥವಾ ಖರೀದಿಸದಿದ್ದರೂ ಚಿಂತೆಯಿಲ್ಲ. ಅವರು ಯಾವುದಾದರೂ ರೀತಿ ನಮ್ಮ ಗ್ರಾಹಕರಾಗಿರುತ್ತಾರೆ. ಶ್ರೀಮಂತರಿಗೆ ಮಾತ್ರವಲ್ಲದೆ ಎಲ್ಲ ವರ್ಗದವರ ಆದ್ಯತೆಗಳನ್ನೂ ಗಮನದಲ್ಲಿಟ್ಟು ಕೊಂಡು ಮುನ್ನಡೆದರೆ ಮಾಲ್‌ ಲಾಭ ಪಡೆಯಬಹುದು.ಮಾಲ್‌ ಬಿಸಿನೆಸ್‌ನಲ್ಲಿ ಎದುರಿಸಬೇಕಾದ ಸವಾಲುಗಳೇನು?

ಸಾಕಷ್ಟು ಸವಾಲುಗಳು ಎದುರಾಗುತ್ತವೆ. ಸ್ಥಳ, ಪ್ರಾದೇಶಿಕ ಜನರ ಆದ್ಯತೆಗಳು, ಬ್ರಾಂಡ್‌ಗಳು, ಬಜೆಟ್, ವಾತಾವರಣ ಎಲ್ಲಾ ಹಂತಗಳಲ್ಲೂ ಸವಾಲು ಎದುರಾಗುತ್ತದೆ. ಮಾಲ್ ಸ್ಥಾಪಿಸುವ ಮುನ್ನ ಚೆನ್ನಾಗಿ ಅಧ್ಯಯನ ಮಾಡಿದರೆ ಮಾತ್ರ ಯಶಸ್ಸು ಕಾಣಬಹುದು. ಆದರೆ ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಮಾಜದೊಂದಿಗೆ ಬೆರೆಯುವ ಕೆಲಸ ಮಾಡಿದರೆ ಒಳಿತು.ನಿಮ್ಮ ಮುಂದಿನ ಯೋಜನೆಗಳು?

ಬೆಂಗಳೂರಿನಲ್ಲಿ ಮುಂದಿನ ವರ್ಷ ಮೂರು ಮಾಲ್‌ಗಳನ್ನು ತೆರೆಯುವ ಯೋಜನೆಯಿದೆ. ಇಷ್ಟೇ ಅಲ್ಲ, ದೇಶ ವಿದೇಶಗಳಲ್ಲಿಯೂ ವಿಭಿನ್ನ ಪರಿಯ ಮಾಲ್‌ಗಳನ್ನು ಪರಿಚಯಿಸುತ್ತೇವೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.