ವಿಶ್ವವಿದ್ಯಾನಿಲಯಗಳು ಜ್ಞಾನಪ್ರಸಾರದ ಬಹುಮುಖ್ಯ ಕೇಂದ್ರ ಬಿಂದುಗಳು. ರಾಷ್ಟ್ರ ಕಂಡ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ಮೈಸೂರು ವಿಶ್ವವಿದ್ಯಾನಿಲಯವೂ ಪಡೆದಿರುವುದು ಹೆಮ್ಮೆಯ ಸಂಗತಿ. ಕುವೆಂಪು ಅವರು ಒಂದು ಆದರ್ಶ ವಿಶ್ವವಿದ್ಯಾನಿಲಯದ ಅಂಗಳಕ್ಕೆ ಕನಸು ಕಂಡವರು. ವಿಶ್ವವಿದ್ಯಾನಿಲಯಕ್ಕೆ ಮಾನಸ ಗಂಗೋತ್ರಿ ಎಂಬ ಹೆಸರಿಟ್ಟರು. ಕುವೆಂಪು ಅವರು ಪ್ರಾಧ್ಯಾಪಕರಾಗಿ, ವಿವಿಯ ಕುಲಪತಿಗಳಾಗಿಯೂ ಸಲ್ಲಿಸಿದ ಸೇವೆ ಅಪಾರ. ಅವರು ತಮ್ಮನ್ನು ಹೆಚ್ಚಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಅರ್ಪಿಸಿಕೊಂಡಿದ್ದೆ ಹೆಚ್ಚು.

ಒಂದು ಶೈಕ್ಷಣಿಕ ಕೇಂದ್ರ ಯಾವ ರೀತಿ ಸಾಗಬೇಕು ಎಂಬುದನ್ನು ಕನಸಾಗಿ ಕಂಡು ನನಸಾಗಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡ ಬಗೆಯು ಅಷ್ಟೇ ವಿಭಿನ್ನವಾದದ್ದು. ಮೈಸೂರು ವಿಶ್ವವಿದ್ಯಾನಿಲಯವು ಶೈಕ್ಷಣಿಕ ಚಟುವಟಿಕೆಗಳನ್ನು ಮೈಗೂಡಿಸಿಕೊಂಡು ಸಾಗುತ್ತಾ ಕೆಲ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಹತ್ತು ವರ್ಷಗಳಿಗೊಮ್ಮೆ ಮಾನಸ ವಸ್ತು ಪ್ರದರ್ಶನ ನಡೆಸುವುದು ಇಲ್ಲಿನ ವಿಶೇಷ.

ಪ್ರತಿಯೊಂದು ವಿಭಾಗವು ಕೂಡ ತನ್ನ ಶೈಕ್ಷಣಿಕ ಸುಪರ್ದಿಯೊಳಗೆ ವಸ್ತುಪ್ರದರ್ಶನ ಏರ್ಪಡಿಸುತ್ತವೆ. ವಿವಿಯ ಒಟ್ಟು 52 ವಿಭಾಗಗಳು ಪಾಲ್ಗೊಳ್ಳುವುದು ಇದರ ವಿಶೇಷ. ಈ ವರ್ಷ ಅಂತಹ ವಸ್ತು ಪ್ರದರ್ಶನಕ್ಕೆ ನಾವೆಲ್ಲಾ ಸಾಕ್ಷಿಯಾದೆವು. ‘ಮಾನಸ ವಸ್ತುಪ್ರದರ್ಶನ-2011’ ಹೆಸರಿನಲ್ಲಿ ಫೆಬ್ರುವರಿ 15ರಿಂದ 24ರ ವರೆಗೆ ನಡೆದ ಪ್ರದರ್ಶನವು ಅಪಾರ ಪ್ರಮಾಣದ ವಿದ್ಯಾರ್ಥಿ ಮತ್ತು ಇತರ ಶ್ರೀಸಾಮಾನ್ಯರನ್ನೂ ಕೈ ಬೀಸಿ ಕರೆದು ಮಾಹಿತಿಯನ್ನು ಉಣ ಬಡಿಸಿತು.

50ವರ್ಷ ತುಂಬಿದ ಸುಸಂದರ್ಭದಲ್ಲಿ ಮಾನಸ ಗಂಗೋತ್ರಿ ಸುವರ್ಣ ಸಂಭ್ರಮ ಆಚರಿಸಿಕೊಂಡಿತು. ಆದರ ಪ್ರಯುಕ್ತ ಪ್ರತಿಯೊಂದು ವಿಭಾಗಗಳು ವಸ್ತು ಪ್ರದರ್ಶನದ ಪ್ರಾತ್ಯಕ್ಷಿಕೆಗಳು, ಮಾದರಿ ವಿಜ್ಞಾನ ಪ್ರಯೋಗಗಳನ್ನು ಪ್ರಸ್ತುತ ಪಡಿಸಿದವು. ಪ್ರತಿಯೊಂದು ವಿಭಾಗಗಳ ವಿದ್ಯಾರ್ಥಿಗಳ ಬುದ್ಧಿ ಸಾಮರ್ಥ್ಯ, ಸೃಜನಶೀಲತೆಯ ಮಹತ್ವ ಅಂಶಗಳು ಅಲ್ಲಿ ಬಿಂಬಿತವಾಗಿದ್ದವು.

ವಿಶ್ವವಿದ್ಯಾನಿಲಯದ ಪ್ರತಿಯೊಂದು ವಿಭಾಗವು ತಮ್ಮದೇ ವಿಷಯಕ್ಕೆ ಸಂಬಂಧಿಸಿದ ಭಿನ್ನ ರೀತಿಯ ಮಾದರಿ ಪ್ರಯೋಗಗಳನ್ನು ವಸ್ತುಪ್ರದರ್ಶನದಲ್ಲಿ ಪ್ರದರ್ಶಿಸಿದವು. ವಿದ್ಯಾರ್ಥಿಗಳ ಸೃಜನಶೀಲತೆಯ ಪ್ರತೀಕವಾಗಿ ಪ್ರಮುಖ ಕ್ರಿಯಾತ್ಮಕ, ಶೈಕ್ಷಣಿಕ ಅಭಿವೃದ್ಧಿಪರವಾದ ವಿಸ್ಮಯ, ವಿಡಂಬನಾ ವಿಚಾರಗಳ ಸಮಾಲೋಚನೆಯೂ ಜನಸಾಮಾನ್ಯರನ್ನು ಸೆಳೆದ ಬಗೆಯಂತೂ ವಿಭಿನ್ನವಾಗಿತ್ತು.

ಮುಖ್ಯ ಆಕರ್ಷಣೆಗಳು
ನೇರ ಪ್ರಯೋಗಗಳು, ಉನ್ನತ ತಂತ್ರಜ್ಞಾನ ಪ್ರಯೋಗಗಳು, ಡಿಎನ್ಎ ಮತ್ತು ಬೆರಳಚ್ಚು, ಸಸ್ಯ ಪ್ರಪಂಚ, ಪ್ರಾಣಿ ಜಗತ್ತು, ವರ್ಣತಂತುಗಳು, ಶಿಲಾ ಉದ್ಯಾನ, ಸಸ್ಯಜೀವಕೋಶ, ಕಾಂಡ ಜೀವಕೋಶ, ರಸಾಯನ ಉದ್ಯಾನ, ಯಕ್ಷಿಣಿ ಜ್ವಾಲೆ, ಬೆಂಕಿ, ಲಿಪಿ, ಬೆಳ್ಳಿ ಮರ, ತೇಲುವ ಮೊಟ್ಟೆ, ಜಾಗತಿಕ ಅರ್ಥವ್ಯವಸ್ಥೆ, ಆನ್ಲೈನ್ ಷೇರುಪೇಟೆ, ಲೇಸರ್ ಪ್ರಯೋಗ, ಜಾಗತಿಕ ತಾಪಮಾನ, ಮಳೆ ನೀರು ಸಂಗ್ರಹ, ಮೃದುವಾದ ಮತ್ತು ತೇಲಾಡುವ ಕಲ್ಲುಗಳು, ಗ್ರಂಥಾಲಯದಲ್ಲಿ ಮಾಹಿತಿ ಹುಡುಕುವುದು ಹೇಗೆ ಮತ್ತು ವಿವಿಧ ಉಪನ್ಯಾಸ, ಚರ್ಚಾಗೋಷ್ಠಿ, ವಿಚಾರ ಸಂಕಿರಣಗಳು ಮಾನಸ ವಸ್ತುಪ್ರದರ್ಶನದ ಆಕರ್ಷಣೆಗಳಾಗಿದ್ದವು.

ಕಲಾ ವಿಭಾಗಗಳು ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಉತ್ತಮ ಪ್ರದರ್ಶನವಿಟ್ಟು ಹಲವರನ್ನು ಸೆಳೆಯುವಂತೆ ಮಾಡಿದ್ದವು. ಐತಿಹಾಸಿಕ ಶಾಸನಗಳು, ರಾಷ್ಟ್ರ ಮಟ್ಟವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ಖನನ ಸಮಯದಲ್ಲಿ ಸಿಕ್ಕಂತಹ ಇತಿಹಾಸದ ವಸ್ತು-ವಿಚಾರಗಳನ್ನು ಹೇಳುವ ಪ್ರದರ್ಶಕಗಳು ಗಂಭೀರತೆಯಿಂದ ಇನ್ನಷ್ಟು ಪುಳಕಿತಗೊಳಿಸುವಂತಿದ್ದವು.

ಕರ್ನಾಟಕ ಹೇಗೆ ಕನ್ನಡ ಸಂಸ್ಕೃತಿಗೆ ಹೆಚ್ಚು ಪ್ರೋತ್ಸಾಹ ಕೊಡುವುದೋ ಅದೇ ರೀತಿ ಮೈಸೂರು ವಿಶ್ವವಿದ್ಯಾನಿಲಯದ ಹೃದಯ ಭಾಗದಲ್ಲಿರುವ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಗ್ರಾಮೀಣ ಸೊಬಗನ್ನು ಬೀರುವ ಜನಪದ ಸಂಸ್ಕೃತಿಯ ನಿಜ ರೂಪವೇ ಅಧ್ಯಯನ ಸಂಸ್ಥೆಯ ಮುಂದೆ ನಿಂತು ಯುವ ಸಮುದಾಯಕ್ಕೆ ಜನಪದ ಕಂಪನ್ನು ತಿಳಿಸುವಲ್ಲಿ ಪ್ರಮುಖವಾಗಿತ್ತು.

ಕನ್ನಡ ನಾಡಿನ ಪ್ರಸಿದ್ಧ ಕವಿಗಳ ಭಾವಚಿತ್ರ ಸಹಿತ ವಿವರದೊಂದಿಗೆ ಕವಿಕಂಡ ಕನ್ನಡ ನಾಡು ಮಾಲಿಕೆಯನ್ನು ಇಡಲಾಗಿತ್ತು, ಕುವೆಂಪು ಅವರ ಜೀವನ ಚಿತ್ರಣವನ್ನು ವಿವಿಧ ಭಾವಚಿತ್ರಗಳ ಹಿನ್ನಲೆಯಲ್ಲಿ ಸಹಜವಾಗಿ ಚಿತ್ರಿಸಿದ್ದು ಪ್ರದರ್ಶನದ ವಿಶೇಷ. ಕನ್ನಡ ಸಂಸ್ಕೃತಿ, ಜನಪದವನ್ನು ಬಿಂಬಿಸುವ ಪ್ರಾಕೃತಿಕ ಮಾದರಿಗಳು ಪ್ರಮುಖ ಆಕರ್ಷಣೆಗಳಾಗಿದ್ದವು. ಕನ್ನಡ ಊರು ಕವಿಗಳ ಬೀಡು ಶೀರ್ಷಿಕೆಯಡಿ ಗ್ರಾಮೀಣ ಬದುಕಿನ ಚಿತ್ರಣ ಮಾದರಿಯನ್ನು ಸಹ ರಚಿಸಲಾಗಿತ್ತು. ಇವುಗಳ ಜ್ಞಾನ ಪ್ರಯೋಗ ಪಡೆದವರು ಹೆಚ್ಚಾಗಿ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ಸಮೂಹವೇ ಆಗಿತ್ತು. ಸ್ಥಳೀಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಈ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಈ ಪ್ರದರ್ಶನ ಮಾಹಿತಿ ಕಣಜವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.