ಗುರುವಾರ , ಜನವರಿ 30, 2020
19 °C

ಮಿತ ದೈಹಿಕ ವ್ಯಾಯಾಮವೇ ಅತ್ಯುತ್ತಮ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಅತಿಯಾದರೂ ಅಮೃತವೂ ವಿಷ. ಹಾಗೆಯೇ, ದೇಹದಾರ್ಢ್ಯ ಕಾಪಾಡಿಕೊಳ್ಳಲೆಂದು ಅತಿಯಾಗಿ ದೇಹ ದಂಡಿಸಿದರೆ ಶೀತ, ಫ್ಲೂ ಇನ್ನಿತರ ಸಮಸ್ಯೆಗಳು ಬಾಧಿಸುವ ಸಂಭವ ಅಧಿಕ ಎಂದು ತಜ್ಞರು ಹೇಳಿದ್ದಾರೆ.ಬಿರುಸಿನ ನಡಿಗೆ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಂದು, ಪ್ರತಿರೋಧ ಶಕ್ತಿಯನ್ನು ಇನ್ನಷ್ಟು ವೃದ್ಧಿಸಿಕೊಳ್ಳಲೆಂದು ದೀರ್ಘದೂರದ ಮ್ಯಾರಾಥಾನ್ ಓಟದ ಸಾಹಸಕ್ಕೆ ಕೈಹಾಕಿದರೆ ವ್ಯತಿರಿಕ್ತ ಪರಿಣಾಮವೇ ಆಗುತ್ತದೆ. ಇಂತಹ ವ್ಯಕ್ತಿಗಳಿಗೆ ಶೀತ, ಫ್ಲೂ, ಸೈನಸೈಟಿಸ್, ಟಾನ್ಸಿಲೈಟಿಸ್‌ನಂತಹ ಶ್ವಾಸ ಸಂಬಂಧಿ ಮೇಲ್ಭಾಗದ ಸೋಂಕು ತಗುಲುವ ಸಾಧ್ಯತೆ ಇತರರಿಗಿಂತ ಆರು ಪಟ್ಟು ಅಧಿಕ ಎಂಬುದು ಲೊಬೊರೊ ವಿ.ವಿ ಸಂಶೋಧಕರ ವಿವರಣೆ.ದೈಹಿಕ ವ್ಯಾಯಾಮ ವ್ಯಕ್ತಿಯ ಪ್ರತಿರೋಧ ಶಕ್ತಿಯ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ,  ಈ ಎರಡೂ ರೀತಿಯ ಪರಿಣಾಮಗಳನ್ನು ಬೀರುತ್ತದೆ.  ಅದು ಮಿತವಾಗಿದ್ದರೆ ಚೆನ್ನ; ಮಿತಿ ದಾಟಿದರೆ ಸಮಸ್ಯಾತ್ಮಕ ಎಂಬುದು 10 ವರ್ಷಗಳಿಂದ ನಡೆಸಿದ ಸಂಶೋಧನೆಯಿಂದ ಸಾಬೀತಾಗಿದೆ ಎಂದಿದ್ದಾರೆ.

 

ಪ್ರತಿಕ್ರಿಯಿಸಿ (+)