ಶುಕ್ರವಾರ, ಮೇ 7, 2021
19 °C

ಮಿನಿಡ್ಯಾಂ ನಿರ್ಮಾಣ: ಡಿಪಿಆರ್ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಶಿರಸಿ ಹಾಗೂ ಯಲ್ಲಾಪುರ ತಾಲ್ಲೂಕು ಗಡಿಯಲ್ಲಿ ಶಾಲ್ಮಲಾ ನದಿಗೆ ಗಣೇಶ್‌ಪಾಲ್ ಸಮೀಪ ಕಿರು ಅಣೆಕಟ್ಟು ನಿರ್ಮಿಸಲು ಕಾರೆ ಪವರ್ ರಿಸೋರ್ಸಸ್ ಪ್ರೈವೇಟ್ ಖಾಸಗಿ ಕಂಪೆನಿಯೊಂದು ಪ್ರಸ್ತಾವನೆ ಸಲ್ಲಿಸಿದ್ದು ವಿಸ್ತ್ರೃತ ಯೋಜನಾ ವರದಿ (ಡಿಪಿಆರ್)ಯು ವೃಕ್ಷಲಕ್ಷ ಆಂದೋಲನ ಸಂಘಟನೆಗೆ ಲಭ್ಯವಾಗಿದೆ.ವೃಕ್ಷಲಕ್ಷ ಆಂದೋಲನ ಯೋಜನೆ ಕುರಿತಂತೆ ಸ್ವತಂತ್ರ  ಕ್ಷಿಪ್ರ ವಿಶ್ಲೇಷಣಾ ವರದಿ ತಯಾರಿಸಿದ್ದು, ಸರ್ಕಾರದ ಕ್ರೆಡಿಲ್, ಇಂಧನ ಇಲಾಖೆ ಹಾಗೂ ಅರಣ್ಯ ಇಲಾಖೆ ಮುಖ್ಯಸ್ಥರಿಗೆ ಇದನ್ನು ಸಲ್ಲಿಸಿದೆ ಹಾಗೂ ಕಾರೆ ಕಂಪೆನಿಯ ಯೋಜನೆ ರದ್ದುಗೊಳಿಸುವಂತೆ ಆಗ್ರಹಿಸಿದೆ.ಆಂದೋಲನ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವ ಅಧ್ಯಕ್ಷ ಸ್ವರ್ಣವಲ್ಲಿ ಸ್ವಾಮೀಜಿ ಅವರಿಗೆ ವಿಶ್ಲೇಷಣಾ ವರದಿಯ ಪ್ರತಿ ಸಲ್ಲಿಸಿದೆ.

ವಿಶ್ಲೇಷಣಾ ವರದಿಯ ಮುಖ್ಯ ಅಂಶಗಳು: ಗಣೇಶ್‌ಪಾಲ್ ಜಲವಿದ್ಯುತ್ ಯೋಜನೆ ಕಾನೂನು ಬಾಹಿರ ಯೋಜನೆಯಾಗಿದ್ದು, ಇದಕ್ಕೆ ಸರ್ಕಾರದ ಇಂಧನ ಇಲಾಖೆಯಿಂದ ಅನುಮತಿ ದೊರೆತಿಲ್ಲ. ಪ್ರಸ್ತಾಪಿತ ಯೋಜನೆ ಶಾಲ್ಮಲಾ ನದಿ ಪರಿಸರ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದ್ದು, ಬೇಡ್ತಿ ಕಣಿವೆ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಯೋಜನಾ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿದ್ದು, ಇದರಿಂದ ಅರಣ್ಯ ಕಾಯಿದೆ, ವನ್ಯಜೀವಿ ಕಾಯ್ದೆ ಉಲ್ಲಂಘನೆಯಾಗುತ್ತದೆ.ರಾಜ್ಯ ಸರ್ಕಾರದ 2011ರ ಆದೇಶದ ಪ್ರಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ಅವಕಾಶ ಇಲ್ಲ. 2010ಕ್ಕಿಂತ ಮೊದಲು ಕ್ರೆಡಲ್ (ಅಸಂಪ್ರದಾಯಿಕ ಇಂಧನ ಮಂಡಳಿ) ಮೂಲಕ ಕೇವಲ ಆರಂಭಿಕ ಒಪ್ಪಿಗೆ ಪತ್ರವನ್ನಷ್ಟೇ ಪಡೆದ ಗಣೇಶ್‌ಪಾಲ್ ಯೋಜನೆ  ಆರು ತಿಂಗಳ ಒಳಗೆ ಎಲ್ಲ ಇಲಾಖೆಗಳ ಪರವಾನಿಗೆ ಪಡೆಯಬೇಕಿತ್ತು. ಪ್ರಸ್ತುತ ಕಾಯಿದೆ ಪ್ರಕಾರ ಯೋಜನೆ ರದ್ದಾಗಿದೆ.ಈಗ 2012ರಲ್ಲಿ ಯೋಜನಾ ವರದಿ ತಯಾರಿಸಿದ್ದು ಅಸಿಂಧು ಆಗಿದೆ. ಗಣೇಶ್‌ಪಾಲ್‌ನ ಪ್ರಸ್ತಾಪಿತ ಯೋಜನೆಯಲ್ಲಿ 5 ಮೀಟರ್ ಎತ್ತರದ 20ಮೀ ಉದ್ದದ ಅಣೆಕಟ್ಟು ಇದೆ. ವಿದ್ಯುತ್ ಟನೆಲ್ 3 ಜನರೇಟಿಂಗ್ ಕೇಂದ್ರಗಳು, 110ಕೆ.ವಿ. ವಿದ್ಯುತ್ ತಂತಿ ಮಾರ್ಗ(ಉಮ್ಮಚಗಿವರೆಗೆ)ಗೆ ನಿರ್ಮಾಣ ಆಗಬೇಕು. ಗೆಸ್ಟಹೌಸ್, ವಸತಿ ಕಾಲನಿ ಕಾಡಿನ ಮಧ್ಯೆ ನಿರ್ಮಾಣವಾದರೆ ಸುಮಾರು 210 ಎಕರೆ ಅರಣ್ಯ ನಾಶವಾಗುತ್ತದೆ. ವಾಸ್ತವವಾಗಿ ಗಣೇಶ್‌ಪಾಲ್ ಯೋಜನೆಯಿಂದ ಸುಮಾರು 360 ಎಕರೆ ನದಿ ಪಾತ್ರದ ಅರಣ್ಯ ಮುಳುಗಡೆ ಆಗುತ್ತದೆ. ಗಣೇಶಪಾಲ್ ಯೋಜನೆಯ ಪರಿಸರ ಪರಿಣಾಮ ವರದಿ ಹಾಗೂ ವಿವರ ಯೋಜನಾ ವರದಿ ಕೇವಲ ಬೇರೆ ಯೋಜನಾ ವರದಿಗಳ ಅವಾಸ್ತವ ಅಂಶಗಳನ್ನು ಒಳಗೊಂಡಿದೆ.ಗ್ರಾಮ ಪಂಚಾಯ್ತಿ, ಸ್ಥಳೀಯ ಜನತೆ ಗಣೇಶ್‌ಪಾಲ್ ಯೋಜನೆ ವಿರುದ್ಧ ಪ್ರತಿಭಟನಾ ಸಭೆ ನಡೆಸಿವೆ. ಎಲ್ಲ ಸ್ತರದ ಸ್ಥಳೀಯ ಜನಪ್ರತಿನಿಧಿಗಳು ಸಹ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.