ಭಾನುವಾರ, ಫೆಬ್ರವರಿ 28, 2021
23 °C

ಮಿ. ಮತ್ತು ಮಿಸ್‌. ಎಂಬಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿ. ಮತ್ತು ಮಿಸ್‌. ಎಂಬಿಎ

ಇದು ಬ್ರಾಂಡಿಂಗ್ ಕಾಲ. ಪ್ರತಿ ಹೊಸ ವಸ್ತುವನ್ನು ಆಕರ್ಷಕವಾಗಿ ಬ್ರಾಂಡಿಂಗ್‌ ಮಾಡುವುದು ರೂಢಿ. ಬಟ್ಟೆ, ವಾಹನ ಹೀಗೆ ಎಲ್ಲದರೊಂದಿಗೂ ಇದು ತಳುಕು ಹಾಕಿಕೊಂಡಿದೆ. ಜನರ ಮನಮುಟ್ಟುವಂತೆ ಬ್ರಾಂಡಿಂಗ್‌ ಮಾಡುವ ಕಲೆ ಎಲ್ಲರಿಗೂ ದಕ್ಕುವುದಿಲ್ಲ. ಅದಕ್ಕೆ ದಕ್ಷ ಆಡಳಿತ ನಿರ್ವಹಣೆಯ ಕೌಶಲ ಇರಬೇಕು. ಇಂತಹ ಕೌಶಲ ಕಲಿಸುವ ಕೆಲಸ ಮಾಡುತ್ತಿವೆ ಎಂಬಿಎ ಶಾಲೆಗಳು. ಎಂಬಿಎ ವಿದ್ಯಾರ್ಥಿಗಳ ಗುಣಮಟ್ಟ ಮತ್ತು ಬುದ್ಧಿಮಟ್ಟವನ್ನು ಒರೆಗೆಹಚ್ಚುವ ‘ಮಿ. ಅಂಡ್ ಮಿಸ್. ಎಂಬಿಎ 2014’ ಎಂಬ ವಿನೂತನ ಸ್ಪರ್ಧೆ ಆಯೋಜಿಸಿದೆ ಶ್ರೀ ಟೆಕ್ನಾಲಜೀಸ್‌ ಬಿಸಿನೆಸ್‌ ಸ್ಕೂಲ್‌. ಇಲ್ಲಿ ಗೆದ್ದ ವಿದ್ಯಾರ್ಥಿ ಬರೋಬ್ಬರಿ ₨1 ಲಕ್ಷ ಹಣವನ್ನು ಜೇಬಿಗಿಳಿಸಿಕೊಳ್ಳಲಿದ್ದಾರೆ.‘ಮಿಸ್ಟರ್ ಮತ್ತು ಮಿಸ್ ಎಂಬಿಎ ೨೦೧೪’ ಎನ್ನುವುದು ಎಂಬಿಎ ವಿದ್ಯಾರ್ಥಿಗಳ ಕರಿಯರ್ ಅರ್ಹತೆಯನ್ನು ವೃದ್ಧಿಸುವ ಕಾರ್ಯಕ್ರಮ. ಈ ಸ್ಪರ್ಧೆ ಉದ್ಯಮದ ಇತ್ತೀಚಿನ ಆಗು–ಹೋಗುಗಳ ಸಮಗ್ರ ಮಾಹಿತಿಯ ಮೇಲೆ ಬೆಳಕು ಚೆಲ್ಲಲಿದೆ. ಉದ್ಯಮಿ ಮತ್ತು ಶೈಕ್ಷಣಿಕ ಸಿಬ್ಬಂದಿ ಜತೆಗೆ ಸಂವಹನ ಹಾಗೂ ಹೊಸ ಬಗೆಯ ಮ್ಯಾನೇಜ್‌ಮೆಂಟ್ ಗೇಮ್ಸ್ ಕಾರ್ಯಕ್ರಮದ ಮುಖ್ಯಾಂಶಗಳು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು  ಫೆಬ್ರುವರಿ 1ರಿಂದ ನೋಂದಣಿ ಆರಂಭಗೊಂಡಿದ್ದು, ವಿದ್ಯಾರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸೆಮಿ ಫೈನಲ್ ಸುತ್ತುಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ ಮಾರ್ಚ್ ೨೨ರಂದು ನಿಮ್ಹಾನ್ಸ್ ಸಭಾಂಗಣದಲ್ಲಿ ನಡೆಯಲಿದೆ.ಮಿಸ್ಟರ್ ಮತ್ತು ಮಿಸ್ ಎಂಬಿಎ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಎದುರಿಸುವ ಕಲೆಯನ್ನು ಕಲಿಸಿಕೊಡಲು ಸಹಕರಿಸುತ್ತದೆ. ನಾಯಕತ್ವ, ಹೊಸ ಯೋಜನೆಗಳ ಅನ್ವೇಷಣೆಗೆ ಸಾಣೆ ಹಿಡಿಯುತ್ತದೆ ಹಾಗೂ ಕಾರ್ಪೊರೇಟ್ ವಲಯದ ಪರಿಚಯ ಮಾಡಿಸುತ್ತದೆ ಎಂಬುದು ಸ್ಪರ್ಧೆಯ ಆಯೋಜಕರ ಮಾತು.ಅಂದಹಾಗೆ, ಈ ಸ್ಪರ್ಧೆಯಲ್ಲಿ ಕರ್ನಾಟಕದ ನಾನಾ ಭಾಗಗಳಿಂದ ಸುಮಾರು ೧೦,೦೦೦ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಕಲೆಡಿಯೊಸ್ಕೋಪ್ ಸುತ್ತಿನಲ್ಲಿ ಚರ್ಚೆ, ಸಮೂಹ ಚರ್ಚೆ, ಪ್ರಕರಣಗಳ ಅಧ್ಯಯನ, ವಿಚಾರ ಮಂಡನೆ, ಬಿಸಿನೆಸ್‌ಗೆ ಸಂಬಂಧಿಸಿದ ರಸಪ್ರಶ್ನೆ, ಬಿಕ್ಕಟ್ಟು ನಿರ್ವಹಣೆ, ಒತ್ತಡ ನಿರ್ವಹಣೆ, ಮಾನಸಿಕ ಪರೀಕ್ಷೆ, ವೈಯಕ್ತಿಕ ಸಂದರ್ಶನ ಇರುತ್ತದೆ. ಸ್ಪರ್ಧೆಯಲ್ಲಿ ವಿವಿಧ ಕಂಪೆನಿಗಳ ಸಿಇಒ, ಸಿಎಫ್‌ಒ, ಸಿಎಚ್‌ಆರ್‌ಒ, ಸಿಒಒ, ಉದ್ಯಮಿಗಳು, ಕನ್ಸಲ್ಟೆನ್ಸಿ, ಡೀನ್, ಅಕಾಡೆಮಿಕ್ ತಜ್ಞರು, ಪ್ಲೇಸ್‌ಮೆಂಟ್ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಅಂದಹಾಗೆ, ‘ಮಿ. ಅಂಡ್‌ ಮಿಸ್‌. ಎಂಬಿಎ’ ಸ್ಪರ್ಧೆಗೆ ಚಾಲನೆ ನೀಡುವ ಸಲುವಾಗಿ ಈಚೆಗೆ ನಗರದಲ್ಲಿ ಫ್ಯಾಷನ್‌ ಷೋ ಒಂದನ್ನು ಏರ್ಪಡಿಸಲಾಗಿತ್ತು. ಈ ವೇಳೆ ಎಂಟ್ಹತ್ತು ರೂಪದರ್ಶಿಗಳು ರ್‌್್ಯಾಂಪ್‌ವಾಕ್‌ ಮಾಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ರಂಜಿಸಿದರು. ನಟಿ ಆಲಿಶಾ ಷೋ ಸ್ಟಾಪರ್‌ ಆಗಿ ಭಾಗವಹಿಸಿದ್ದು ವಿಶೇಷವಾಗಿತ್ತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.