ಸೋಮವಾರ, ಮೇ 23, 2022
30 °C

ಮೀನುಗಾರರ ಹತ್ಯೆ: ನ್ಯಾಯಾಲಯಕ್ಕೆದುಭಾಷಿಗಳ ಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಲಂ (ಪಿಟಿಐ): ಇಬ್ಬರು ಮೀನುಗಾರರನ್ನು ಗುಂಡಿಟ್ಟು ಹತ್ಯೆ ಮಾಡಿದ ಆರೋಪ ಎದುರಿಸುತ್ತಿರುವ ಇಟಲಿಯ `ಎನ್ರಿಕಾ ಲೆಕ್ಸಿ~ ಹಡಗಿನ ಇಬ್ಬರು ನಾವಿಕರು ನ್ಯಾಯಾಲಯದ ವಿಚಾರಣೆಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಸೋಮವಾರ ದುಭಾಷಿಗಳ ತಂಡದ ಹೆಸರುಗಳನ್ನು ನೀಡಿದ್ದಾರೆ.ನ್ಯಾಯಾಲಯದ ವಿಚಾರಣೆಯನ್ನು ಇಂಗ್ಲಿಷ್‌ನಿಂದ ಇಟಲಿ ಭಾಷೆಗೆ ತರ್ಜುಮೆಗೊಳಿಸುವ ಸಲುವಾಗಿ ದುಭಾಷಿಗಳ ಹೆಸರನ್ನು ನಾವಿಕರು ನೀಡಿರುವ ಹಿನ್ನೆಲೆಯಲ್ಲಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪಿ. ಡಿ. ರಾಜನ್ ಪ್ರಕರಣದ ವಿಚಾರಣೆಯನ್ನು ಜುಲೈ10ಕ್ಕೆ ಮುಂದೂಡಿದರು.

 

ನಾವಿಕರಾದ ಲಾಟೋರ್ ಮ್ಯಾಸಿಮಿಲಾನೊ ಮತ್ತು ಸ್ಯಾಲ್ವಟೋರ್ ಜಿರೋನ್ ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು. ಇವರನ್ನು ಫೆ. 19ರಂದು ಬಂಧಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.