ಭಾನುವಾರ, ಮೇ 9, 2021
27 °C

ಮುಂಗಾರು ಕ್ಷೀಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ನೈರುತ್ಯ ಮುಂಗಾರು ಕ್ಷೀಣಿಸಿದೆ. ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ. ಮೂಲ್ಕಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.



ಕಾರವಾರ 6, ಅಂಕೋಲ 5, ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು, ಹೊನ್ನಾವರ 4, ಮಂಗಳೂರು ವಿಮಾನ ನಿಲ್ದಾಣ, ಮೂಡುಬಿದಿರೆ, ಬೆಳ್ತಂಗಡಿ, ಪುತ್ತೂರು, ಕೋಟ, ಕಾರ್ಕಳ, ಕುಂದಾಪುರ, ಉಡುಪಿ, ಶಿರಾಲಿ, ಭಟ್ಕಳ, ಕುಮಟಾ, ಆಗುಂಬೆ, ಕೊಟ್ಟಿಗೆಹಾರ 3, ಸಿದ್ದಾಪುರ, ಲೋಂಡ, ಭಾಗಮಂಡಲ, ಪೊನ್ನಂಪೇಟೆ, ಮಾದಾಪುರ, ಸಕಲೇಶಪುರ, ಹಾಸನ 2, ಪಣಂಬೂರು, ಮಾಣಿ, ಸುಳ್ಯ, ಶಿರಸಿ, ಯಲ್ಲಾಪುರ, ಖಾನಾಪುರ, ಮಡಿಕೇರಿ, ಮೂರ್ನಾಡು, ನಾಪೋಕ್ಲು, ಸೋಮವಾರಪೇಟೆ, ಹೊಸನಗರ, ಹುಂಚದಕಟ್ಟೆ, ಕಳಸ, ನಾರಾಯಣಪುರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.



ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಕರಾವಳಿಯ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ.ಉತ್ತರ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.